ವಿಷಯಕ್ಕೆ ಹೋಗು

ಪುಟ:ವಾಗರ್ಥ.pdf/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೭೬ / ವಾಗರ್ಥ

ತೆಗೆದುಕೊಳ್ಳಬಹುದು. ಬಲರಾಮನ ಪಾತ್ರವು ಬಲರಾಮನ ಪಾತ್ರಧಾರಿ ಯಿಂದ ಆಗುತ್ತಿರುವಂತೆ, ಅವನ ಬಗೆಗೆ ಕೃಷ್ಣ, ಅರ್ಜುನ ಇತ್ಯಾದಿ ಪಾತ್ರಗಳು, ಮುಖ್ಯವಾಗಿ ಕೃಷ್ಣನು ಆಡುವ ಮಾತುಗಳಿಂದ ಆಗುತ್ತಿರು ತ್ತದೆ. ಕೃಷ್ಣ ಸಂಧಾನದ ಕೃಷ್ಣ-ದುರೋಧನ, ರಾವಣ ವಧೆಯ ರಾಮ- ರಾವಣ ಮೊದಲಾದ ಪಾತ್ರಗಳನ್ನು ಮತ್ತು ಬೇರಾವುದೇ ಪ್ರಸಂಗದ ವಿವಿಧ ಪಾತ್ರಗಳನ್ನು, ಹೀಗೆ ಪರಸ್ಪರ ಚಿತ್ರಣ ದೃಷ್ಟಿಯಿಂದ, ಪ್ರದರ್ಶನ ವೊಂದರ ಸಂದರ್ಭವನ್ನು ತೆಗೆದುಕೊಂಡು ಪರಿಶೀಲಿಸಬಹುದಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಒಬ್ಬ ಪಾತ್ರಧಾರಿಯ ಮಾತು, ಇನ್ನೊಬ್ಬನಿಗೆ ಪ್ರೇರಕಪಠ್ಯವಾಗುತ್ತದೆ ಎಂಬುದು. ಇಂತಹ ಪ್ರೇರಣೆ ಯನ್ನು ಒಬ್ಬ ಕಲಾವಿದನು ಎಷ್ಟು ಮತ್ತು ಯಾವ ರೀತಿಯಿಂದ ಸ್ವೀಕರಿಸುತ್ತಾನೆ ಎಂಬುದು ಬಹಳ ಮುಖ್ಯ. ಒಂದು ಪಾತ್ರವು ಪೀಠಿಕೆ ಅಥವಾ ಸ್ವಗತದಲ್ಲಿ ಪ್ರಸ್ತಾವಿಸಿದ ವಿಷಯವನ್ನು ತೆಗೆದುಕೊಂಡು, ಇನ್ನೊಂದು ಪಾತ್ರವು ತನ್ನ ಸ್ವಗತದಲ್ಲಿ ಬೆಳೆಸುವುದುಂಟು (ಇದು ಹೇಗಿರಬೇಕೆಂಬುದು ಬಹಳ ಸೂಕ್ಷ್ಮ ವಿಷಯ. ಅದರ ವಿಶ್ಲೇಷಣೆ, ಇಲ್ಲಿ ಅಪ್ರಸ್ತುತ).

ಇದಿರಾಳಿಯ ಒಂದು ಮಾತನ್ನು, ಇನ್ನೊಬ್ಬನು ಹೇಗೆ ತೆಗೆದು ಕೊಳ್ಳುತ್ತಾನೆ ಎಂಬುದು ಚಿತ್ರಣದಲ್ಲಿ ಬಹಳ ಮುಖ್ಯ. ಉದಾ: ವಿಭೀಷಣ ನೀತಿ ಪ್ರಸಂಗದಲ್ಲಿ, ವಿಭೀಷಣನು ರಾವಣನಲ್ಲಿ ಮಾತ್ರ ನಾಡುತ್ತ "ನೀನು ಸೀತಾಪಹರಣದ ವಿಷಯದಲ್ಲಿ ನಿರಂಕುಶನಾಗಿ ವರ್ತಿಸಿದ್ದಿ. ಯಾರನ್ನು ವಿಚಾರಿಸದೆ, ಸಮಾಲೋಚಿಸದೆ ಮುಂದು ವರಿದಿದ್ದಿ” ಎಂದು ಹೇಳುತ್ತಾನೆಂದಿಟ್ಟುಕೊಳ್ಳೋಣ. ಆಗ ರಾವಣನು, ಅದಕ್ಕೆ ಸಮರ್ಥನೆಯನ್ನು ನೀಡಿ, ನಿರಾಕರಿಸಬಹುದು. ಅಥವಾ, ಹೌದು ನಾನು ಏಕೆ ಉಳಿದವರನ್ನು ಕೇಳಲಿ?. ನಾನು ಕಟ್ಟಿದ ರಾಜ್ಯ ಇದು, ನನ್ನ ನಿರ್ಧಾರವೇ, ಲಂಕೆಯ ಎಲ್ಲರ ನಿರ್ಧಾರ" ಎನ್ನಬಹುದು. ಈಯೆರಡು ದಾರಿಗಳು ರಾವಣನ ಪಾತ್ರಚಿತ್ರಣವನ್ನು ತೀರ ಭಿನ್ನವಾಗಿ ಮುಂದಿಡುತ್ತವೆ. ಪ್ರಶೋತ್ತರ ಸಂದರ್ಭಗಳಲ್ಲಿ, ಸಂವಾದಗಳಲ್ಲೂ ಇಂತಹದೇ ಎಷ್ಟೋ ಸನ್ನಿವೇಶಗಳು ಒದಗುತ್ತವೆ. ಇಲ್ಲಿ ಇದಿರಾಳಿಯ ಮಾತೇ ಒಂದು ಆಕರ; ಒಂದು ಕಿರುಪಠ್ಯ. ಅದರ ಮೇಲೆ ಒಬ್ಬನು ತೋರುವ ಪ್ರತಿಕ್ರಿಯೆ, ಒಟ್ಟು ಪ್ರದರ್ಶನದ ಪಠ್ಯವನ್ನು ನಿರ್ಣಯಿಸು ತ್ತದೆ.