ಶೂರ್ಪನಖಾ ಪ್ರಕರಣದ ಉಲ್ಲೇಖ, ವಿಮರ್ಶೆಗಳು ಬರುವ ಸಂದರ್ಭ ದಲ್ಲಿ ಮೂಲರಾಮಾಯಣ, ತೊರವೆ ರಾಮಾಯಣ, ಪಾರ್ತಿಸುಬ್ಬನ ಪಂಚವಟಿ ಇವುಗಳಲ್ಲಿ ಯಾವುದನ್ನಾದರೂ ಆಧರಿಸಿ ವಿವೇಚಿಸಬಹು ದಾದ ಸ್ವಾತಂತ್ರ್ಯ ಇದೆ. ಶೂರ್ಪನಖಿಯು ಸೀತೆಯನ್ನು ನುಂಗುವುದಕ್ಕೆ ಮುಂದಾದಾಗ, ಲಕ್ಷ್ಮಣನು ರಾಮನ ಸೂಚನೆಯಂತೆ ಅವಳನ್ನು ವಿರೂಪ ಗೊಳಿಸಿದನೆಂದು ವಾಲ್ಮೀಕಿ ಮತ್ತು ತೊರವೆ ರಾಮಾಯಣಗಳಲ್ಲಿದೆ. ಪಾರ್ತಿಸುಬ್ಬನ ಪ್ರಸಂಗದಲ್ಲಿ ರಾಮಲಕ್ಷ್ಮಣರು ಮಾಯಾ ಶೂರ್ಪನಖಿ ಯನ್ನು ಅತ್ತಿತ್ತ ಕಳುಹಿಸಿ ಕೊನೆಗೆ ರಾಮನು ಶೂರ್ಪನಖಿಯ ಬೆನ್ನ ಮೇಲೆ ಗುರುತು ಕಳಿಸಿ, ಲಕ್ಷ್ಮಣನಿಂದ ಅವಳನ್ನು ವಿರೂಪ ಮಾಡಿಸಿದ ನೆoದಿದೆ. ಮೊದಲ ಎರಡು ಆಕರಗಳಲ್ಲಿ ರಾಮನ ವರ್ತನೆ, ಆತ್ಮ ರಕ್ಷಣಾತ್ಮಕವೂ, ಸಮರ್ಥನೀಯವೂ ಆಗಿದೆ. ಪ್ರಸಂಗದಲ್ಲಿನ ಸಂದರ್ಭ ಅಷ್ಟು ಸಮರ್ಥನೀಯವಲ್ಲ, ಲಘುವಾಗಿದೆ. ಇಲ್ಲಿ ಶೂರ್ಪನಖಿಯ ಮಾಯೆ ಎಂಬ ಮೋಸಕ್ಕೆ ರಾಮನದು ಮೋಸ ಎಂಬುದಾಗಿ ಸಮರ್ಥನೆ, ಈ ಪೈಕಿ ಯಾವುದನ್ನು ಪ್ರಸ್ತಾಪಿಸಬೇಕು, ಪ್ರಸ್ತಾಪಿಸಬಹುದು ಎಂಬು ದಕ್ಕೆ ಖಚಿತ ನಿಯಮವಿಲ್ಲ. ಆದರೆ ಒಂದು ನಿಯಮವಂತೂ ಇದೆ. ಇದು ಕಲಾವಿದರೊಳಗೆ ಇರುವ ಒಂದು 'ಅಲಿಖಿತ ಸಂವಿಧಾನ' ಎನ್ನಬಹುದು. ಒಬ್ಬನು ಒಂದು ಮೂಲವನ್ನು ಪ್ರಸ್ತಾಪಿಸಿದ ಮೇಲೆ ಅದರ ಅಸ್ತಿತ್ವ, ಅರ್ಥಾತ್ ಆ ಸಂದರ್ಭವನ್ನೇ ಅಲ್ಲವೆನ್ನುವುದು, ನೀತಿಯಲ್ಲ. 'ನಾನು ಕೇಳಿದಂತೆ ಹೀಗೂ ಇದೆ' ಎನ್ನಬಹುದಷ್ಟೆ,
ಒಂದೆರಡು ಉದಾಹರಣೆಗಳನ್ನು ನೋಡೋಣ. ರಾವಣನು ಸೀತಾ ಸ್ವಯಂವರಕ್ಕೆ ಹೋಗಿ, ಶಿವಧನುಸ್ಸನ್ನು ಎತ್ತಲಾರದೆ ಹೋದದ್ದು ತೊರವೆಯಲ್ಲಿದೆ. ವಾಲ್ಮೀಕಿಯಲ್ಲಿಲ್ಲ. ಈ ವಿಚಾರವನ್ನು ರಾವಣನ ಜತೆಗಿನ ಸಂವಾದದಲ್ಲಿ ಒಂದು ಪಾತ್ರ (ವಿಭೀಷಣ, ಮಂಡೋದರಿ, ಅತಿಕಾಯ) ಎತ್ತಿಕೊಂಡರೆ, ರಾವಣನು ನಾನು ಮಿಥಿಲೆಗೆ ಹೋಗಲೇ ಇಲ್ಲ. ಅದು ಸುಳ್ಳು” ಎನ್ನುವಂತಿಲ್ಲ. ತಾನು ಸೋತುದು ನಿಜ. ಅದಕ್ಕೆ ಕಾರಣ ಅದು ಶಿವಧನುಸ್ಸು, ತಾನು ಶಿವಭಕ್ತ ಎಂದೋ ಅಥವಾ ದೇವತಗಳ ಮೋಸದಿಂದ ಹಾಗಾಯಿತು ಎಂದೋ ಅಥವಾ ಬೇರೇನಾದರೂ ಜಾನ್ಮೆಯ ಸಮರ್ಥನೆ ಕೊಡಬಹುದು ಅಷ್ಟೆ,
ಮಹಾಭಾರತದ ಯಾವುದಾದರೂ ಪ್ರಕರಣದಲ್ಲಿ 'ಕೃಷ್ಣಾರ್ಜುನ ಯುದ್ಧ'ವನ್ನು ಒಬ್ಬನು ಉಲ್ಲೇಖಿಸುತ್ತಾನೆ. ಅರ್ಜುನ ಪಾತ್ರಧಾರಿಯೇ