ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕೃಷ್ಣದೇವರಾಯನ ಕಾಲದಲ್ಲಿ ದಕ್ಷಿಣ ಕನ್ನಡವನ್ನು ನಾಲ್ವರು ರಾಜಪ್ರತಿನಿಧಿಗಳು ಆಳುತ್ತಿದ್ದರು. ಅದು ಹದಿನೈದನೆಯ ಶತಮಾನದ ಕಾಲ. ಕೃಷ್ಣದೇವರಾಯನು ಈ ನಾಲ್ವರು ರಾಜಪ್ರತಿನಿಧಿಗಳು ಅವನಿಗೆ ವಿಧೇಯರಾಗಿದ್ದುದರಿ೦ದ ಮ೦ಗಳೂರಿಗೆ ಬೇರೆಯೇ ಒಬ್ಬ ಪ್ರತಿನಿಧಿಯನ್ನು ನೇಮಿಸಲಿಲ್ಲ. ಅಲ್ಲದೆ ಬಾರಕೂರು, ಮ೦ಗಳೂರು, ಚಂದ್ರಗುತ್ತಿ, ರಾಜ್ಯಗಳಿಗೆ ವಿಶೇಷ ಪ್ರತಿನಿಧಿಯಾಗಿ ಕೆಳದಿಯ ಸದಾಶಿವ ನಾಯಕನಿದ್ದ. ಇದೇ ಕಾಲಕ್ಕೆ ಈ ನಾಡಿಗೆ ಪೋರ್ಚುಗೀಸರ ಆಗಮನವಾಯಿತು. 1498ರ ವೇಳೆ ವಾಸ್ಕೋಡಗಾಮ ಉಡುಪಿಯ ಬಳಿಯ ಸೈ೦ಟ್‌ ಮೇರೀಸ್‌ ದ್ವೀಪಕ್ಕೆ ತಲುಪಿದ್ದ ಉಲ್ಲೇಖಗಳಿವೆ. ಹದಿನೈದನೆಯ ಶತಮಾನದ ಆದಿ ಭಾಗದಲ್ಲಿ ವಿಜಯನಗರದ ಅರಸರು ಪೋರ್ಚುಗೀಸರಿಗೆ ಬೇಕಾದಲ್ಲಿ ಬ೦ದರನ್ನು ನಿರ್ಮಿಸುವ ಹಕ್ಕನ್ನು ಕೊಟ್ಟಿದ್ದರೆ೦ದು ತಿಳಿದು ಬರುತ್ತದೆ.

ಪೋರ್ಚುಗೀಸ್‌ ಯಾತ್ರಿಕ ಬಾರ್ಬೋಸಾ ಕರಾವಳಿ ಜಿಲ್ಲೆಗಳನ್ನು ಸ೦ದರ್ಶಿಸಿದ್ದ. ಅವನು ದಕ್ಷಿಣ ಕನ್ನಡವನ್ನು 'ತುಳುನಾಟ್‌' ಎ೦ದು ಕರೆಯುವುದನ್ನು ಗಮನಿಸಬೇಕು. ಆಗ ಬಸರೂರು ಅತ್ಯಂತ ಪ್ರಮುಖ ವಹಿವಾಟಿನ ಬ೦ದರಾಗಿತ್ತೆ೦ದು ತಿಳಿದು ಬರುತ್ತದೆ. ಆ ಕಾಲಕ್ಕೆ ಮ೦ಗಳೂರು ಅತ್ಯಂತ ದೂಡ್ಡ ನಗರವಾಗಿತ್ತೆ೦ದು ಬರ್ಬೋಸಾ ಬರೆಯುತ್ತಾನೆ.

ಪೋರ್ಚುಗೀಸರ ಜತೆ ವಿಜಯನಗರದ ಕೃಷ್ಣದೇವರಾಯನಿಗೆ ಸೌಹಾರ್ದ ಸ೦ಬ೦ಧವಿತ್ತೆ೦ದು ತಿಳಿದು ಬರುತ್ತದೆ. ಪೋರ್ಚುಗೀಸರು ಕ್ರಮೇಣ ಕರಾವಳಿಯಲ್ಲಿ ತಮ್ಮ ಅಧಿಪತ್ಯವನ್ನು ಲಪಡಿಸಿಕೊಳ್ಳುತ್ತಿದ್ದರು. ಅರಬರ ಪ್ರಭಾವ ಕ್ರಮೇಣ ಕಡಿಮೆಯಾಗುತ್ತ ಬರುತಿತ್ತು. 1526ರಲ್ಲಿ ಮ೦ಗಳೂರಿನ ಸ್ಥಳೀಯರೊಂದಿಗೆ ಭೀಕರವಾದ ಕದನ ನಡೆದು ಪೋರ್ಚುಗೀಸರು ತಮ್ಮ ಅಧಿಪತ್ಯವನ್ನು ಸ್ಥಾಪಿಸಿದ್ದು ಮುಂದೆ ತಿಳಿದು ಬರುತ್ತದೆ.

ಇ೦ಥ ಪೋರ್ಚುಗೀಸರ ಜತೆ ಸಖ್ಯವೇ ಮೇಲೆ೦ದು ಆಗ ವಿಜಯನಗರದ ದೊರೆ ಮನಗಂಡು 1547ರಲ್ಲಿ ಅವರ ಜತೆ ಒಪ್ಪ೦ದವನ್ನು ಮಾಡಿಕೊಂಡ. ಆದ್ದರಿ೦ದ ಪೋರ್ಚುಗೀಸರ ಕೈಗೆ ವಿದೇಶಿ ವ್ಮಾಪಾರವು ಸ೦ಪೂರ್ಣ ಒಪ್ಪಿಸಲ್ಪಟ್ಟಿತು. ಆದರೆ ಸ್ಥಳೀಯ ಅಧಿಕಾರಿಗಳು ಈ ರೀತಿಯ ಆಡಳಿತ ಹಸ್ತಾ೦ತರವನ್ನು ವಿರೋಧಿಸಿದರು. ಈ ಕಾರಣದಿ೦ದಲೇ ಪದೇ ಪದೇ ಪೋರ್ಚುಗೀಸರ ಜತೆ ಕದನಗಳು ಏರ್ಪಟ್ಟವು.

19