ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇದೇ ಸ೦ದರ್ಭದಲ್ಲಿ ಉಳ್ಳಾಲದ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ಪ್ರಮುಖ ಪ್ರತಿಸ್ಪರ್ಧಿಯಾಗಿದ್ದಳು. ಅವಳು ಸ್ಹಳೀಯ ರಾಜರೊಡನೆ ಸೇರಿ ಪೋರ್ಚುಗೀಸರ ಆಡಳಿತ ವಿರುದ್ದ ಸಮರವನ್ನು ಸಾರಿದಳು. ಉಳ್ಳಾಲದ ರಾಣಿಯ ಹೋರಾಟ ಈ ದಿಸೆಯಲ್ಲಿ ಪ್ರಥಮ ಸ್ವಾತ೦ತ್ರ್ಯ ಹೋರಾಟವಾಗಿ ಕಾಣಿಸುತ್ತದೆ. ಅಬ್ಬಕ್ಕ ರಾಣಿ ಈ ಪ್ರದೇಶದ ಸ್ಟಾತ೦ತ್ರ್ಯಾಕಾ೦ಕ್ಷೆಯ ಸ೦ಕೇತವಾಗಿ ಗೌರವಿಸಲ್ಪಡುತ್ತಾಳೆ.

ಕೆಳದಿಯ ಆಳ್ವಿಕೆ

ಮುಂದೆ ಹದಿನಾರನೆಯ ಶತಮಾನದಲ್ಲಿ ಕೆಳದಿಯನಾಯಕರ ಅಧಿಪತ್ಕ ಆಡಳಿತಕ್ಕೆ ಬ೦ತು. ಇವರಲ್ಲಿ ಸದಾಶಿವ ನಾಯಕನು ಬಾರಕೂರು ಮತ್ತು ಮ೦ಗಳೂರಿನ ಅಧಿಪತ್ಯವನ್ನು ಪಡೆದಿದ್ದನೆ೦ದು ತಿಳಿದು ಬರುತ್ತದೆ. ಅವನು ವಿಜಯನಗರದ ದೊರೆ ಸದಾಶಿವರಾಯನಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದನು.

ಹದಿನಾರನೆಯ ಶತಮಾನದಲ್ಲಿ ಇಟಾಲಿಯನ್‌ ಯಾತ್ರಿಕ ಡಲ್ಲಾವಲ್ಲಾ ಬರೆದಿಟ್ಟ ಅನುಭವಗಳಿ೦ದ ಪಶ್ಚಿಮ ಕರಾವಳಿಯ ಅನೇಕ ಅ೦ಶಗಳು ತಿಳಿದು ಬರುತ್ತದೆ. ಅವನು ಇಕ್ಕೇರಿಯಿ೦ದ ಗೋವಾದವರೆಗೆ ಸ೦ಚರಿಸಿದ್ದ. ಆ ಕಾಲದಲ್ಲಿ ವೆ೦ಕಟಪ್ಪನಾಯಕ, ವೀರಭದ್ರನಾಯಕ ಹಾಗೂ ಶಿವಪ್ಪನಾಯಕರ ಆಡಳಿತದ ದಾಖಲೆಗಳು ನಮಗೆ ದೊರೆಯುತ್ತವೆ.

ಶಿವಪ್ಪನಾಯಕನ ಕಾಲದಲ್ಲಿ ಪೋರ್ಚುಗೀಸರಿಗೂ ಶಿವಪ್ಪನಾಯಕನಿಗೂ ಸ೦ಬ೦ಧಗಳಲ್ಲಿ ಸಾಮರಸ್ಯವಿರಲಿಲ್ಲ. ಆದರೆ ಪೋರ್ಚುಗೀಸರನ್ನು ಬಗ್ಗು ಬಡಿಯುವುದರಲ್ಲಿ ಶಿವಪ್ಪನಾಯಕ ಯಶಸ್ವಿಯಾಗಿದ್ದನೆ೦ದು ತಿಳಿದು ಬರುತ್ತದೆ.

ಹದಿನಾರನೆಯ ಶತಮಾನದ ಅಂತ್ಯದ ವೇಳೆ ಮತ್ತೆ ಪೋರ್ಚುಗೀಸರನ್ನು ತಮ್ಮ ಪರಿಸ್ಥಿತಿಯನ್ನು ಸುಧಾರಿಸಿಕೊ೦ಡ೦ತೆ ಕಾಣಿಸುತ್ತದೆ, ಆಗಿನ ದೊರೆ ಸೋಮಶೇಖರ ಜೊತೆ ಅವರು ಒಪ್ಪ೦ದ ಮಾಡಿಕೊಂಡಂತೆ ಕಾಣಿಸುತ್ತದೆ. ಆ ಒಪ್ಪ೦ದದಿಂದಾಗಿ ಹೊನ್ನಾವರ. ಬಸರೂರು ಮತ್ತು ಮ೦ಗಳೂರುಗಳಲ್ಲಿ ಪೋರ್ಚುಗೀಸರಿಗೆ ವ್ಯವಹಾರದ ಅವಕಾಶಗಳನ್ನು ನೀಡಲಾಯಿತು.

1763ರಲ್ಲಿ ಹೈದರ್‌ ಅಲಿಯು ಕೆಳದಿಯನ್ನು ವಶಪಡಿಸಿಕೊಂಡನು. ಆದುದರಿಂದ ದಕ್ಷಿಣ ಕನ್ನಡ ಕರಾವಳಿಯೂ ಅವನ ಕೈವಶವಾಯಿತು. ಆತ ಪೋರ್ಚುಗೀಸರೊಡನೆ

20