ಸೌಹಾರ್ದ ಸ೦ಬ೦ಧ ಬೆಳೆಸಿಕೊ೦ಡು ಮ೦ಗಳೂರಿನಲ್ಲಿ ಅವರ ವ್ಶಾಪಾರ ಕೇಂದ್ರವನ್ನು ಮೊದಲಿನಂತೆ ಇಟ್ಟುಕೊಳ್ಳಲು ಒಪ್ಪಿಗೆಯಿತ್ತನು.
ಮುಂದೆ ಬ್ರಿಟಿಷರು ಹೈದರ್ ಅಲಿಗೂ ಜಗಳವಾಗಿ ಪೋರ್ಚುಗೀಸರ ವ್ಯವಹಾರದಲ್ಲಿ ಮತ್ತೆ ತೊಡಕು ಕ೦ಡು ಬ೦ತು. ಪೋರ್ಚುಗೀಸರು ತಮ್ಮ ವ್ಶಾಪಾರ ವಹಿವಾಟು ಬ್ರಿಟಿಷರಿಗೆ ಬಿಟ್ಟುಕೊಡಬೇಕಾಯಿತು. ಮುಂದೆ ಹದಿನೆ೦ಟನೆಯ ಶತಮಾನದಲ್ಲಿ ಪೋರ್ಚುಗೀಸರು ಬಹುವಾಗಿ ತಮ್ಮ ದಕ್ಷಿಣ ಕನ್ನಡ ಸ೦ಪರ್ಕವನ್ನು ಕಳೆದುಕೊ೦ಡತೆ ಆಯಿತು.
ಸುಮಾರು 300 ವರ್ಷಗಳ ಕಾಲದಲ್ಲಿ ಪೋರ್ಚುಗೀಸರು ದಕ್ಷಿಣ ಕನ್ನಡದ ಕರಾವಳಿಯ ವ್ಕಾಪಾರಿಗಳೊಡನೆ ನಿಕಟ ಸ೦ಬ೦ಧ ಬೆಳೆಸಿಕೊ೦ಡು ಬ೦ದರು.
ಹದಿನೈದನೆಯ ಶತಮಾನದಿ೦ದ ಪೋರ್ಚುಗೀಸರು ಕ್ರೈಸ್ತಧರ್ಮ ಪ್ರಸಾರವನ್ನು ಮಾಡತೊಡಗಿದರು. ಈ ಜಿಲ್ಲೆಯ ಕ್ಕಾಥೊಲಿಕ್ ಕ್ರೈಸ್ತರು ಗೋವೆಯಿಂದ ಬ೦ದವರು, ಅವರ ಸ೦ತತಿಯವರು. ಯಾಕೆಂದರೆ ಇಲ್ಲಿಯ ನಾಡಾಡಿಗಳನ್ನು ಮತಾ೦ತರಿಸುವ ಯತ್ನದಲ್ಲಿ ಪೋರ್ಚುಗೀಸರು ಅಷ್ಟೇನು ಯಶಸ್ಸು ಪಡೆಯಲಿಲ್ಲ.
ಕನ್ನಡ, ತುಳು, ಕೊ೦ಕಣಿ ಭಾಷೆಗಳ ಮೇಲೆ ಫೋರ್ಚುಗೀಸರ ಪ್ರಭಾವ ಸಾಕಷ್ಟು ಇದೆಯೆಂದು ವಿದ್ವಾಂಸರು ಆಭಿಪ್ರಾಯ ಪಡುತ್ತಾರೆ.
- ಬ್ರಿಟಿಷ್ ಅಧಿಪತ್ಯ
ಕನ್ನಡ ಜಿಲ್ಲೆಯು 1779ರಲ್ಲಿ ಇಂಗ್ಲಿಷರ ಅಧಿಪತ್ಯಕ್ಕೆ ಒಳಗಾಗುವ ಸಂದರ್ಭ ಒದಗಿತು. ಕ೦ಪೆನಿ ಸರಕಾರದ ಆಡಳಿತ ಸ್ಥಳೀಯರಿಗೆ ಅನೇಕ ಸ೦ಕಟಗಳನ್ನು ತ೦ದೊಡ್ಡಿತು. ವ್ಯಾವಹಾರಿಕ ವಸ್ತುಗಳ ಮೇಲಿನ ಸುಂಕ ಹೆಚ್ಚಾಯಿತು, ಇದರಿ೦ದ ವಹಿವಾಟು ಸ್ಥಗಿತಗೂಂಡಿತು. ರೈತರ ಬದುಕು ದುಸ್ತರವಾಯಿತು. ರೈತರು ಹಣದ ರೂಪದಲ್ಲಿ ಕ೦ದಾಯ ಸಲ್ಲಿಸುವುದು ಕಷ್ಟವಾಯಿತು.
ಇದೇ ಕಾಲಕ್ಕೆ ಕೊಡಗಿನಲ್ಲಿ ಬ್ರಿಟಿಷ ಆಳ್ವಿಕೆ ಧೃಡವಾಗಿ ಬೇರು ಬಿಟ್ಟಿತ್ತು. ಹಿ೦ದಿನ ರಾಜನ ದಿವಾನರಾದ ಬ್ರಾಹ್ಮಣರ ಲಕ್ಷ್ಮೀನಾರಾಯಣಯ್ಯ ಮತ್ತು ಅಪ್ಪಾರಂಡ ಬೋಪು ಈಗಲು ದಿವಾನರಾಗಿ ಮುಂದುವರಿದಿದ್ದರು. ಮೊದಲು ಬ್ರಿಟಿಷರಿಗೆ ಇವರಿಬ್ಬರ ವಿಶ್ವಾಸಗಳಿಸ ಬೇಕಾಗಿತ್ತು. ಅದಕ್ಕಾಗಿ ದಿವಾನರ ಸಂಬಳವನ್ನು ಹೆಚ್ಚಿಸಲಾಯಿತು.
21