ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ವಿಶಿಷ್ಟ್ಯಗಳನ್ನೊಳಗೊಂಡಿದ್ದು, ಆತನನ್ನು ಹೊಸಗನ್ನಡದ ಮುಂಗೋಳಿ, ಅನ್ನುವ ಹೆಸರಿಗೆ ಪಾತ್ರವಾಗಿಸಿವೆ. ಮುದ್ದಣನ ಎರಡು ಯಕ್ಷಗಾನ ಪ್ರಸಂಗಗಳಾದ 'ರತ್ನಾವತಿ ಕಲ್ಯಾಣ' ಮತ್ತು 'ಕುಮಾರ ವಿಜಯ'ಗಳೂ ಪ್ರಯೋಗಶೀಲ ರಚನೆಗಳು.

ಈ ಶತಮಾನದ ಆರಂಭದಲ್ಲಿ ಕಾದಂಬರಿಗಳನ್ನು ಬರೆದ ಬೋಳಾರ ಬಾಬುರಾಯರು ('ವಾಗ್ದೇವಿ'), ಗುಲವಾಡಿ ವೆಂಕಟ್ರಾಯರು ('ಇಂದಿರಾಬಾಯಿ') ಕನ್ನಡ ಕಾದಂಬರಿ ಕ್ಷೇತ್ರದ ಮೊದಲಿಗರು. ಸಣ್ಣ ಕತೆಗಳು ಮತ್ತು ಬಾಲ ಸಾಹಿತ್ಯದಲ್ಲಿ ಇತಿಹಾಸ ನಿರ್ಮಿಸಿದ ಪಂಜೆ ಮಂಗೇಶರಾಯರು, ವಿವಿಧ ಸಾಹಿತ್ಯ ಪ್ರಕರಣಗಳಲ್ಲಿ ದೊಡ್ಡ ಪ್ರಮಾಣದ ಕೃಷಿಗೈದ ಎಂ.ಎನ್. ಕಾಮತ್, ಪ್ರಬಂಧ ಸಾಹಿತ್ಯಕ್ಕೆ ಕೊಡುಗೆ ನೀಡಿದ ಉಗ್ರಾಣ ಮಂಗೇಶರಾಯರು, ಕನ್ನಡ ನವೋದಯದ ಅಚಾರರಲ್ಲೊಬ್ಬರಾದ ಮಾರ್ಗ-ದೇಸಿಗಳೆರಡರ ಬಗೆಗೂ ಗೌರವ ಹೊಂದಿದ ಪಂಡಿತ ಮುಳಿಯ ತಿಮ್ಮಪ್ಪಯನವರು, ಕನ್ನಡ ಕಾವ್ಯಕ್ಕೆ ಹೊಸದಿಕ್ಕು ತೋರಿದ ಪೇಜಾವರ ಸದಾಶಿವ ರಾವ್, ಕವಿ ಕಡಂಗೋಡ್ಲು ಶಂಕರ ಭಟ್ಟರು, ಶಾಸ್ತ್ರ ಮತ್ತು ಸೃಜನಶೀಲ ಇವೆರಡೂ ವಿಭಾಗಗಲ್ಲಿ ಎತ್ತರದ ಸಾಧನೆಗೈದ ಸೇಡಿಯಾವು ಕಷ್ಣಭಟ್ಟರು, ಕಾದಂಬರಿ, ವಿಚಾರ ಸಾಹಿತ್ಯಗಳೆರಡರಲ್ಲೂ ದೊಡ್ಡ ಸಿದ್ಧಿಯ ನಿರಂಜನ, ಕವಿ, ಹೋರಾಟಗಾರ, ಕಾಸರಗೋಡು ಕನ್ನಡಿಗರ ನೇತಾರ ಕಯ್ಯಾರ ಕಿಂಞಣ್ಣ ರೈ, ಕವಿ ಪತ್ರಕರ್ತ ಪಾವೆಂ ಆಚಾರ್ಯ, ಪ್ರಬಂಧ ಶೈಲಿಗೆ ಮಾದರಿ ಬರಹಗಳನ್ನು ನೀಡಿ ಸಾಂಸ್ಕೃತಿಕ ಸಂಘಟನೆಯಲ್ಲೂ ಮಾದರಿ ಎನಿಸಿದ ಕು.ಶಿ. ಹರಿದಾಸ ಭಟ್ಟರು ಮೊದಲಾವರೆಲ್ಲ ಕನ್ನಡವನ್ನೂ ವಿವಿಧ ರೀತಿಗಳಿಂದ ಶ್ರೀಮಂತಗೊಳಿಸಿದ ಹಿರಿಯರು.

ಕಾವ್ಯ ರಚನೆ, ಸಂಶೋಧನೆಗಳ ಕ್ಷೇತ್ರದಲ್ಲಿ ಮಹಾನ್ ಸಾಧಕರೆನಿಸಿದ ಮಂಜೇಶ್ವರ ಗೋವಿಂದ ಪೈಗಳು, ವಿಶಾಲ ಆಸಕ್ತಿಯ ಬಹುಶ್ರುತ ಕವಿ—ಪಂಡಿತರಾದವರು. ಸಂಶೋಧನೆಯ ಕ್ಷೇತ್ರದಲ್ಲಿ ಅವರು ಕನ್ನಡದ ಅಚಾರರಲ್ಲೊಬ್ಬರು, ಕಾವ್ಯದ ಕ್ಷೇತ್ರದಲ್ಲೂ ಅವರದ್ದು ಪ್ರತ್ಯೇಕ ಯೋಗ್ಯತೆಯ ಸಿದ್ದಿ.

ಈ ಜಿಲ್ಲೆಯ ವೈಶಿಷ್ಟ್ಯ, ವೈವಿಧ್ಯ, ಪ್ರತಿಭೆ, ಸಾಧನೆ ಸಾಹಸಗಳಿಗೆಲ್ಲ ಪ್ರತಿನಿಧಿಯಂತಿರುವ ಸಾಹಿತ್ಯ ಸಾಧಕರೆಂದರೆ ಡಾ। ಶಿವರಾಮ ಕಾರಂತರು. ಜಗತ್ತಿನ ದೊಡ್ಡ ಲೇಖಕರೊಂದಿಗೆ ನಿಲ್ಲುವ ಅವರ ಸಾಹಿತ್ಯ ಗುಣ, ಗಾತ್ರ, ಗೌರವ, ಪ್ರತ್ಯೇಕತೆ ಎತ್ತರದ್ದು. ಕಾದಂಬರಿ, ನಾಟಕ, ಬಾಲಸಾಹಿತ್ಯ, ಗೀತನಾಟಕ, ಕೋಶರಚನೆ, ವಿಡಂಬನೆ

49