ಕೆಲವು ಹಳೆಯ ಓಲೆ ಪ್ರತಿಗಳಲ್ಲಿ 'ಪಂಚಘಾತ', 'ಪಂಚ ಘಾತ ಮಟ್ಟೆ'ಗಳೆಂಬ ಶುದ್ಧ ರೂಪದಲ್ಲಿಯೇ ಈ ತಾಳಗಳ ನಿರ್ದೇಶವಿದೆ.
ಪೋಲೂರಿ ಗೋವಿಂದ ಕವಿಯು ತೆಲುಗಿನಲ್ಲಿ ರಚಿಸಿದ 'ರಾಗ ತಾಳ ಚಿಂತಾಮಣಿ' ಎಂಬ ಪ್ರಸಿದ್ಧ ಗ್ರಂಥದಲ್ಲಿ ಈ ಪಂಚಘಾತ ಮತ್ತೆ ತಾಳದ ಲಕ್ಷಣವಿದೆ.
ನಾಲು ಗುದ್ರುತಮುಲು ಲಘುವುನು |
ಮೂಲಿಕಗಾ ಪಂಚಘಾತಮಠಾದ್ವಯಸ |
ತಾಳ ಮುನ ಮೂಡು ಮಾತ್ರಲು |
ಕೀಲಿತ ಮಗು ರಾಮಭೂಪ - ಕೀರ್ತಿಕಲಾಪ ǁ(ooool)
ಪಂಚಘಾತ ತಾಳದ ಲಕ್ಷಣವು ಸಂಗೀತ ದರ್ಪಣದಲ್ಲಿ ಹೀಗಿದೆ :
ಜೀವದ್ವಯಂ ಭವೇದ್ಯತ್ರ ನಗಣಶ್ಚ ವಿರಾಮವಾನ್ |
ಇತಿವಾ ಪಂಚಘಾತ ಸ್ಯಾಲ್ಸಿಯ ತ್ರಿತಯ ಸಂಯುತಃ ǁ(sslll)
ಮಿಕ್ಕ ಎಲ್ಲ ತಾಳಗಳ ಲಕ್ಷಣಗಳನ್ನು ಸಾಧಾರವಾಗಿ ಪ್ರಕೃತ ವಿಸ್ತರಿಸುವುದಿಲ್ಲ. ಇಷ್ಟರಲ್ಲಿಯೇ ಈ ಲೇಖನದ ವಿಸ್ತಾರವು ಸಂಪಾದಕರು ಸೂಚಿಸಿರುವ ಮಿತಿಯನ್ನು ಮೀರಿದಂತಿದೆ.
ನಮ್ಮ ತೆಂಕಮಟ್ಟಿನ ಸಂಪ್ರದಾಯದ ಕೂಲಂಕಷ ವಿಮರ್ಶೆ ಇದರಿಂದಾದಂತಾಗ ಲಿಲ್ಲ. ಅದರ ಶಾಸ್ತ್ರೀಯತೆಯ ಕುರಿತು ಈಗ ಹೇಳಿರುವುದು ಸ್ವಲ್ಪ, ಹೇಳಲಿಕ್ಕಿರುವುದು ಹೆಚ್ಚು. ಪ್ರಕೃತ ದಿಜ್ಞಾತ್ರ ಸೂಚಿಸಿದಂತಾಯಿತು ಅಷ್ಟೆ. ಹೇಳಿದಷ್ಟು ವಿಷಯಗಳಿಗಿರುವ ಶಾಸ್ತ್ರಾಧಾರಗಳನ್ನೂ ಸಮಗ್ರವಾಗಿ ಉದಾಹರಿಸಲಿಲ್ಲ. ಕಾರಣಾಂತರದಿಂದ ಈ ಲೇಖನ ವನ್ನು ಬರೆಯಲು ನನಗೆ ಒದಗಿದ ಕಾಲಾವಕಾಶವು ಅತ್ಯಲ್ಪವಾದುದರಿಂದ ಹಿಂದೆ ಓದಿ ಜ್ಞಾಪಕದಲ್ಲಿ ಉಳಿದಿರುವಷ್ಟು ಆಧಾರಗಳನ್ನು ನಿರೂಪಿಸಿದ್ದೇನೆ. ಆವಶ್ಯಕವಾದ ಎಲ್ಲ ಶಾಸ್ತ್ರ ಗ್ರಂಥಗಳನ್ನು ಸಂಗ್ರಹಿಸಿ ಪರಿಶೀಲಿಸುವಷ್ಟು ಅವಕಾಶವಾಗದಿದ್ದುದರಿಂದ ಉದ್ಧತ ಶ್ಲೋಕಾದಿಗಳಿಗೆ ಆಯಾ ಗ್ರಂಥಗಳ ಅಧ್ಯಾಯ, ಶ್ಲೋಕ ಸಂಖ್ಯೆ, ಪುಟ ಸಂಖ್ಯೆ ಇತ್ಯಾದಿ ವಿವರಗಳನ್ನು ಅಲ್ಲಲ್ಲಿ ಸೂಚಿಸಿ ವಾಚಕರ ಪರಿಶೀಲನೆಗೆ ತಕ್ಕ ಸೌಲಭ್ಯವನ್ನು ಮಾಡಿಕೊಡದಿರುವುದನ್ನು ವಾಚಕರು ದಯೆಯಿಂದ ಮನ್ನಿಸಿ ಸಂದರ್ಭಾನುಸಾರ ಅಲ್ಲಲ್ಲಿ ಸೂಚಿಸಿರುವ ಆಯಾ ಶಾಸ್ತ್ರಗ್ರಂಥಗಳನ್ನು ಸ್ವಲ್ಪ ಶ್ರಮವಹಿಸಿ ಪರಿಶೀಲಿಸಿಕೊಳ್ಳಬೇಕಾಗಿ ವಿನಯದಿಂದ ವಿಜ್ಞಾಪಿಸಿಕೊಳ್ಳುತ್ತೇನೆ.
ಆಧರಿಸಿದ ಗ್ರಂಥಗಳು :
೧) ಭರತನ ನಾಟ್ಯಶಾಸ್ತ್ರ
(ಕಾಶಿಯಲ್ಲಿ ಮುದ್ರಿತವಾದ ಮೂಲ ಮಾತ್ರವಿರುವ ಪ್ರತಿ)
೨) ನಾಟ್ಯಶಾಸ್ತ್ರ (ಸವ್ಯಾಖ್ಯಾನ ಗಾಯಕವಾಡದ ಪ್ರತಿ)
೩) ಸಂಗೀತ ರತ್ನಾಕರ (ಕಲ್ಲಿನಾಥನ ವ್ಯಾಖ್ಯಾನ ಸಹಿತ)
೪) ಸಂಗೀತ ಸುಧಾ (ಮದ್ರಾಸು ಗವರ್ನಮೆಂಟಿನಿಂದ ಪ್ರಕಾಶಿತವಾದುದು)
೫) ಚತುರ್ದಂಡೀ ಪ್ರಕಾಶಿಕಾ (ಮುದ್ರಿತ ಮದ್ರಾಸು ಪ್ರತಿ)