ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೪೭

ರಾಗತಾಳಗಳು ಒಂದೊಂದು ಬಂಧಕ್ಕೆ ನಿಯತವಾದವು. ಯಾವುದೇ ಬಂಧವನ್ನು, ಅದಕ್ಕಿರುವ ರಾಗತಾಳಗಳನ್ನು ಬಿಟ್ಟು, ಇನ್ನೊಂದು ರಾಗದಲ್ಲಿ ಅಥವಾ ತಾಳದಲ್ಲಿ ಹಾಡುವ ಸಂಪ್ರದಾಯವಿಲ್ಲ. ಹಾಗೂ ಇಂತಹ ರಸಭಾವಾದಿ ಸಂದರ್ಭಗಳಲ್ಲಿ ಇಂತಿಂಥ ಬಂಧಗಳನ್ನೇ ರಚಿಸಬೇಕೆಂಬ ನಿಯಮವನ್ನೂ ರಾಮಾಯಣ ಪ್ರಸಂಗಗಳಲ್ಲಿ ಸುಬ್ಬನು ಹಾಕಿಕೊಟ್ಟಿರುವುದನ್ನೇ ನಮ್ಮ ಕವಿಗಳೆಲ್ಲರೂ ಅನುಸರಿಸಿಕೊಂಡು ಬಂದಿರುತ್ತಾರೆ.

ದೃಶ್ಯಕಾವ್ಯಗಳಲ್ಲಿ ಹೀಗೆ ಪದ್ಯಬಂಧಕ್ಕೂ ರಾಗತಾಳಗಳಿಗೂ ಅವುಗಳನ್ನು ಹಾಡುವ ಕ್ರಮಕ್ಕೂ ಪ್ರಯೋಗಿಸುವ ರಸಭಾವಾದಿ ಸಂದರ್ಭಗಳಿಗೂ ನಿಯತವಾದ ಅನ್ನೋನ್ಯ ಸಂಬಂಧವನ್ನು ಕಲ್ಪಿಸುವುದೆಂಬುದು ವಿಶುದ್ಧ ಶಾಸ್ತ್ರೀಯ ಸಂಪ್ರದಾಯವಾಗಿದೆ. ನಾಟ್ಯಶಾಸ್ತ್ರದಲ್ಲಿ ಭರತನು, ನಾಟಕಾದಿ ರೂಪಕಗಳಲ್ಲಿ ಹಾಡತಕ್ಕ ಪದ್ಯ ರಚನೆಗಳಿಗೆ- ಇವುಗಳಿಗೆ ಧ್ರುವಪದಗಳು ಅಥವಾ ನಾಟ್ಯಧ್ರುವಗಳೆಂದು ಹೆಸರು. ಇದೇ (ಆಕೃತಿ, ರಾಗ, ತಾಳ) ನಿಯಮವನ್ನು ವಿಧಿಸಿರುತ್ತಾನೆ. ಈ ಕಾರಣದಿಂದಲೇ ಅವುಗಳಿಗೆ ತಾನು ಧ್ರುವಗಳು ಎಂಬ ಹೆಸರನ್ನು ಕೊಟ್ಟಿದ್ದಾಗಿದೆ ಎನ್ನುತ್ತಾನೆ :

.............ಯಥಾ ಸ್ಥಾನರಸಾಶ್ರಯಾಃ |
ಧ್ರುವಾವರ್ಣಾಲಂಕಾರಾ ಯತಯಃ ಪಾಣಯೋಲಯಾಃ |
ಧ್ರುವವನ್ನೋನ್ಯ ಸಂಬಂದ್ಧಾ ಯಸ್ಮಾತ್ತಸ್ಮಾತ್‌ ಧ್ರುವಾಃ ಸ್ಮೃತಾಃ |

ವರ್ಣಾಲಂಕಾರಗಳೆಂದರೆ ರಾಗರಚನೆ, ಪಾಣಿಲಯಗಳೆಂದರೆ ತಾಳಗಳ ಮತ್ತು ಅವುಗಳ ಕಾಲಭೇದಗಳು. ಇವು ಪ್ರತಿಯೊಂದು ಧ್ರುವಾಪದಗಳಲ್ಲಿಯೂ ಪ್ರತ್ಯೇಕ ನಿಯತವಾಗಿರುತ್ತವೆ. (ಭರತನ ಈ ಧ್ರುವಾ ವಿಧಾನದ ಕುರಿತು, ಮೈಸೂರು ವಿ. ವಿ. ನಿಲಯದ “ಮಾನವಿಕ ಕರ್ಣಾಟಕ' ಸಂ. ೧, ಸಂಚಿಕೆ ೨ರಲ್ಲಿರುವ ನನ್ನ ಲೇಖನವನ್ನು ನೋಡಬಹುದು).

ಪಾರ್ತಿಸುಬ್ಬನು ಈ ರಾಮಾಯಣ ಕೃತಿಗಳನ್ನು ಕೇರಳದ ಕಥಕಳಿಯ ಮೂಲ ಕೃತಿಯಾದ ರಾಮನಾಟ್ಟಂ' ಪ್ರಬಂಧದ ಆದರ್ಶದಿಂದಲೆ ರಚಿಸಿರುವುದಾಗಿದೆ. ಅವೇ ರಾಗ, ಅವೇ ತಾಳಗಳಲ್ಲಿ ಅದರ ಎಷ್ಟೋ ಪದ್ಯಗಳನ್ನು ದ್ವಿಪ್ರತಿ ಎಂಬಂತೆ ಅನುವಾದಿ ಸಿರುತ್ತಾನೆ. ಅದರಲ್ಲಿರುವಂತೆಯೇ, ಎಂಟು ಸಂಧಿಗಳಿಂದ ಹಾಗೂ ಅದೇ ಸಂಧ್ಯಂಗಗಳಿಂದ ಎಂಟು ದಿನದ ಆಟಕ್ಕೆ ತಕ್ಕುದಾದ ಎಂಟು ಪ್ರಸಂಗಗಳನ್ನು ರಚಿಸಿರುವುದಾಗಿದೆ. ಈ ಕುರಿತು ಮೊದಲಿನ ನನ್ನ ಲೇಖನಗಳಲ್ಲಿ ವಿಸ್ತಾರವಾಗಿ ನಿರೂಪಿಸಿರುತ್ತೇನೆ. ಪ್ರಕೃತ ದಿಜ್ಞಾತ್ರ ಉದಾಹರಣೆಯಾಗಿ ಆ ಕಥಕಳಿರಾಮಾಯಣ ಪ್ರಬಂಧಗಳ ಕೆಲವೇ ಪದ್ಯ ಗಳನ್ನು ಅವಕ್ಕೆ ಸಂವಾದಿಗಳಾದ ಸುಬ್ಬನ ರಾಮಾಯಣ ಯಕ್ಷಗಾನದ ಪದ್ಯಗಳೊಂದಿಗೆ ಹೋಲಿಸಿ ನೋಡಬಹುದು :

ಪುತ್ರಕಾಮೇಷ್ಟಿ
ಕಥಕಳಿ : ನೃಪತೇಮ | ಹಾಭಾಗ | ದಶರಥ | ನೃಪತೇ ǁ ಪ ǁ
ಪುತ್ರಕಾ | ಮೇಷ್ಟಿ ಚೆ | ಯು ಕೊಂಡಿ | ದಾನೀಂ |
ಅತ್ರನಿ | ನ್ಮನೋರಥಂ | ಸಾಧಿಕ್ಕು 1 ಮಲ್ಲೊ |
ಪುತ್ರ‌ ನಾ | ಲು ಪೇರುಂಡಾ | ವುಂ ನಿನ 1 ಕ್ಕುಡನೆ |
ಚಿತ್ತಪೀಡ | ಯನ್ನಿಯೆ | ಸೈರ ಮಾಮ್ | ನಾಳಾಂ ǁ