ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಯಕ್ಷಗಾನ ತೆಂಕಮಟ್ಟು / ೬೩

ನವಿಲುಗರಿಯ ಸೂಡಿಯನ್ನು ಹಿಡಿದುಕೊಂಡು ಆಗ ಷಣ್ಮುಖ ವೇಷವೇ ಬಂದು ಕುಣಿಯಬೇಕು. ಆಮೇಲೆ ಶಿವಪಾರ್ವತಿಯರ ನರ್ತನ,ಅರ್ಧನಾರೀವೇಷ,ಇವೂ ನಾಟ್ಯ ಶಾಸ್ತ್ರದಲ್ಲಿರುವಂಥವೇ.
ಈ ಸ್ತುತಿ ನೃತ್ಯಗಳಾದ ಮೇಲೆ, ಹಿಂದೆ ಹೇಳಿದ ವೀಥ್ಯಂಗ ಪ್ರಹೇಲಿಕಾದಿ ಹಾಸ್ಯ ಪ್ರಯೋಗ ವಿಭಾಗಕ್ಕೆ ನಾಟ್ಯಶಾಸ್ತ್ರದಲ್ಲಿ 'ಆಮುಖ' ಅಥವಾ 'ಪ್ರರೋಚನ'ವೆಂದು ಹೆಸರು. ಈ ಸಂದರ್ಭದಲ್ಲಿ ವಿದೂಷಕನು ಬಂದು ಅಸಂಬದ್ಧ ಪ್ರಲಾಪಗಳಿಂದ ಪ್ರೇಕ್ಷಕರನ್ನು ನಗಿಸಬೇಕೆಂದು ನಾಟ್ಯಶಾಸ್ತ್ರದಲ್ಲಿ ವಿಧಿ ಇದೆ.
ವಿದೂಷಕಕ ಪದಾಂ ಸೂತ್ರಧಾರ ಸ್ಮಿತಾವಹಾಂ ।
ಅಸಂಬದ್ದ ಕಥಾಪ್ರಾಯಾಂ ಕುರ್ಯಾತ್ ಕಥನಿಕಾಂ ತತಃ |
ವಿತಂಡಾಂ ಗಂಡಸಂಯುಕ್ತಾಂ ನಾಮಿಕಾಂ ಚ ಪ್ರಯೋಜಯೇತ್ ||
ನಮ್ಮ ಆಟದಲ್ಲಿ ಹಾಸ್ಯಗಾರನು ಇದನ್ನೇ ಮಾಡುತ್ತಾನೆ. ಭರತನು ಹೇಳುವ ಆ ವಿದೂಷಕನಿಗೂ, ನಮ್ಮ ಹಾಸ್ಯಗಾರನಿಗೂ ಎಳ್ಳಷ್ಟೂ ವ್ಯತ್ಯಾಸವಿರುವುದಿಲ್ಲ. ಅಸಂಬದ್ಧ ಮಾತಾಡಿ ನಾನಾ ವಿಕಾರಗಳಿಂದ ನಗಿಸುವುದೇ ಅವನ ಕರ್ಮ, ಅಧಿಕ ಪ್ರಸಂಗವೇ. ಅವನ ಧರ್ಮ. ಒಮ್ಮೊಮ್ಮೆ ಒಂದೊಂದು ತರದ ವೇಷ ವಿಕಾರಗಳನ್ನು ಅವನು ಮಾಡಿಕೊಳ್ಳ ಬೇಕು; ಅವನ ಬಾಯಿಂದ ಒಳ್ಳೆಯ ಮಾತು ಹೊರಡುವುದೆಂಬುದು ಇಲ್ಲವೇ ಇಲ್ಲ. ಗ್ರಾಮ್ಯ, ಅಶ್ಲೀಲ, ಹೊಲಸು ಮಾತುಗಳನ್ನು ಯಾರ ಮುಂದೆಯೂ ಆಡುತ್ತಿರುತ್ತಾನೆ. ವಿದೂಷಕನೆಂಬ ಹೆಸರಿಗೆ ಭರತನು ಕೊಡುವ ಲಕ್ಷಣ ಹೀಗೆ :
ಯಸ್ತು ವಿದೂಷಿತವಚನೋ ವಿದೂಷಕೋ ನಾಮ ವಿಶ್ಲೇಯಃ |
ಕೆಟ್ಟ ಮಾತಾಡುವುದರಿಂದಲೇ ಅವನಿಗೆ ವಿದೂಷಕನೆಂದು ಹೆಸರು. ಅವನ ನಡೆಯೂ ವಿಚಿತ್ರ, ಕುಣಿತವೂ, ವಿಚಿತ್ರ, ನಾಟ್ಯಶಾಸ್ತ್ರದಲ್ಲಿ ಅವನ ನಾನಾ ಹಾಸ್ಯ, ಸ್ವರೂಪ ಸ್ವಭಾವಗಳ ಲಕ್ಷಣಗಳು ಹೀಗಿವೆ:
ವಿದೂಷಕಸ್ಯಾಪಿಗತಿರ್ಹಾಸ್ಯತ್ರಯ ಸಮನ್ವಿತಾ |
ಅಂಗವಾಕ್ಯಕೃತಂ ಹಾಸ್ಯಂ ಹಾಸ್ಯಂ ನೇಪಥ್ಯಜಂ ತಥಾ ||
ದಂತುರಃ ಖಲತಿಃ ಕುಬ್ಬ ಖಂಜಶ್ಚ ವಿಕೃತಾನನಃ |
ಯ ಈದೃಶಃ ಪ್ರವೇಶಃ ಸ್ಯಾದಂಗಹಾಸ್ಯಂ ತು ತದ್ಭವೇತ್ ||
ಯದಾತು ಖಗವದ್ದಚ್ಛೇದುಲ್ಲೋಕಿತ ವಿಲೋಕಿತೈ:|
ಆತ್ಯಾಯತ ಪದತ್ವಾಚ್ಚ ಅಂಗ ಹಾಸ್ಯಂತು ತದ್ಭವೇತ್ ||
ವಾಕ್ಯಹಾಸ್ಯಂತು ವಿಜ್ಞೆಯಂ ಆಸಂಬದ್ದ ಪ್ರಭಾಷಣಾತ್ |
ಅನರ್ಥಕ್ಕೆರ್ಬಹುವಿಧ್ಯಸ್ತಥಾಚಾಲಭಾಷಿತೈ: ||
ಚೀರಚರ್ಮಮತೀ ಭಸ್ಮಗೈರಿಕಾಸ್ತು ಮಂಡಿತಃ |
ಯಸ್ತಾದೃಶೋಭಿವೇದ್ವಿಪ್ರಾ ಹಾಸ್ಕೋ ನೇಪಥ್ಯಜನ್ನು ಸಃ ||
ವಾಮೇ ದಕ್ಷಿಣತಃ ಪಾದೇ ದಕ್ಷಿಣೇ ವಾಮತಃ ಕೃತೇ
ಮುಹುರಾವರ್ತಿತಾ ಪ್ರೋಕ್ತಾ ವಿದೂಷಕ ಪರಿಶ್ರಮೇ ||

ನಮ್ಮ ಹಾಸ್ಯಕಾರನೂ ಎಡದ ಕಾಲನ್ನು ಬಲಬದಿಗೂ, ಬಲಗಾಲನ್ನು ಎಡಬದಿಗೂ ಹಜ್ಜೆ ಇಟ್ಟುಕೊಂಡು 'ತಿರ್ಗಾಸು ನಡೆ' ನಡೆಯಲ್ಲಿಯೇ ಪ್ರವೇಶಿಸುತ್ತಾನೆ. ಶಾಸ್ತ್ರದಲ್ಲಿ ಇದಕ್ಕೆ 'ಆವರ್ತಿತಗತಿ' ಎಂದು ಹೆಸರು.