ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೫೪ / ಕುಕ್ಕಿಲ ಸಂಪುಟ

ಮುಂದಿನ ಪಟ್ಟಾಭಿಷೇಕ ಸಂಧಿಯು 'ಜಯಜಯ ಮ | ಹಾಮತೇ | ದಶರಥ ಮ | ಹೀಪತೇ' ಎಂದು ರಾಮನಾಟದಲ್ಲಿ ಪ್ರಾರಂಭವಾದರೆ ಸುಬ್ಬನ ಪ್ರಸಂಗದಲ್ಲಿ ಜಯ ಜಯ ಮ | ಹೀಪತೇ | ದಶರಥ ನೃ | ಪಾಲ ಎಂದು ಅದೇ ಪಲ್ಲವಿಯಿಂದ ಸುರು ವಾಗುತ್ತದೆ. ಆ ಮೇಲೆ ಪ್ರತಿ ಪದ್ಯವೂ ನೆರಳಿನಂತೆ ಹಿಂಬಾಲಿಸುತ್ತದೆ. ವೃತ್ತ :
ಕೈಕಯಾಧೀಶ ಕನ್ಯಾ ಮಾನಸಂ ಮಂಥರಾಸಾ
ಸಾಕ ಮಕೋಪ ನೋಡೇ ನಿರ್ಮಮಂಥಾನುಕೂಲ್ಯಾತ್
ಕಂದ :
ಹೊಕ್ಕಳು ಹೃದಯವ ಮಾಯಾ
ರಕ್ಕಸಿ ಕದಡಿದಳು ಕೈಕೆಯಂತಃಕರಣಂ | poway ಮಂಥರೆಯು ಮಾಯದಿಂದ ಕೈಕೆಯ ಮನಸ್ಸನ್ನು ಹೊಕ್ಕು ಕದಡಿಸಿದಳೆಂಬುದು ವಾಲ್ಮೀಕಿ ರಾಮಾಯಣ ಅಥವಾ ತೊರವೆ ರಾಮಾಯಣಾದಿಗಳಲ್ಲಿಲ್ಲದ ವಿಷಯವೆಂಬು ದನ್ನು ಗಮನಿಸಬೇಕು. ಅಲ್ಲಿ ಮಂಥರೆಯು ಕೈಕೆಯನ್ನು ಮಾತಿನಿಂದ ಜೈಸಿ ಒಲಿಸುತ್ತಾಳೆ. ಸಂಸ್ಕೃತ ಭೋಜಚಂಪುವಿನಲ್ಲಿ 'ಕೈಕೇಯ್ಯಾ: ಸಾ ಹೃದಯಮದಯಂ ಮಂಥರಾ ನಿರ್ಮಮಂಥ? ಎಂದು ಕಥಕಳಿಯಲ್ಲಿದ್ದಂತೆ ಇದೆ. ರಾಮನಾಟದ ಕರ್ತೃವು ಭೋಜ ಚಂಪುವನ್ನು ಅನೇಕ ಸಂದರ್ಭಗಳಲ್ಲಿ ಅನುಸರಿಸಿರುತ್ತಾನೆ. ಚೆಂಬಡ :
ಸಖಿ ನೀ ಚೊ | ನ್ನದು ಕೇಟ್ಟು | ಸಕಲವು | ಮರಿಂಞ ಞಾನ್ |
ಸಹಿಯಾಯಿ | ತೊಟ್ಟುಂತನ್ನೆ | ಸಂತತಂ ಚಿಂ | ತಿಕ್ಕುಂ ತೋರುಂ
ಕಿಂತು ಕಾಂತನ್ | ಮುನ್ನ ತವ | ತನ್ನುವ | ರಂಡುವರಂ |
ಎಂದಿವಿನ್ನು | ಖೇದಿಕ್ಕುನ್ನು | ಎನ್ನದಿನೇ | ಚೋದಿಚ್ಚಾಲ್
ಏಕತಾಳ :
ಸಖಿ ನೀ ಪೇ | ಳಿದ ಮಾತು | ಸಕಲವು | ಲೇಸಾಯ್ತು |
ಯುಕುತಿ ಏ | ನಿದಕಿನ್ನು | ಎನ್ನೊಳ್ ಹೇಳು 1 ಕಂಡುದನ್ನು
ಹಿಂದೆ ಮಚ್ಚಿ | ನಿನಗೆ ಆ ನ | ರೇಂದ್ರ ಕೊಟ್ಟ | ಮಾತೆರಡ |
ಇಂದು ಕೇಳು | ಕೊಟ್ಟ ಮೇಲೆ | ಮುಂದೆ ಕೇಳು | ಕಾರ್ಯ ಬಾಲೆ

|| || Bol || || ಪಾರ್ತಿಸುಬ್ಬನ ಪೂರ್ವಕಾಲದ ಯಕ್ಷಗಾನ ಕೃತಿಗಳಲ್ಲಿ ಕಾಣದಿರುವ ಹಲವು ಪದ್ಯ ಬಂಧಗಳನ್ನು ಸುಬ್ಬನು ಕಥಕಳಿಯಿಂದ ಆಯ್ದುಕೊಂಡಿದ್ದಾನೆ. ಮುಂದಿನ ಎರಡು ಪದ್ಯಗಳು ಅಂಥವು. ಕಾಡಿನಲ್ಲಿ ಸೀತೆಯು ಮುನಿ ಪತ್ನಿಯರಿಂದ ರಾಕ್ಷಸರ ಸುದ್ದಿಯನ್ನು ಕೇಳಿ ಭಯದಿಂದ ರಾಮನೊಡನೆ ಹೇಳುವ ಪದ್ಯವೊಂದು ಹೀಗಿದೆ- ಕಾಂಭೋಜಿ-ಚೆಂಬಡ : ರಾತ್ರಿ೦ಚರ | ನಾಥನಾಯೊ | ರುತ್ತನುಂಡ | ವನುತನ್ನ |
ಮಸ್ತಕಂಗ | ಳುಂ ಪತ್ತುಂಡು | ಪೋಲ್ ಆ | ತ್ರಯುಮಲ್ಲ |
ಹಸ್ತಂಗಳಿ | ರುಪತ್ತುಂಡು | ಪೋಲ್ • ಅ | ವನ್ ಲೋಕಾನಾಂ |