೧೫೪ / ಕುಕ್ಕಿಲ ಸಂಪುಟ
ಮುಂದಿನ ಪಟ್ಟಾಭಿಷೇಕ ಸಂಧಿಯು 'ಜಯಜಯ ಮ | ಹಾಮತೇ | ದಶರಥ ಮ | ಹೀಪತೇ' ಎಂದು ರಾಮನಾಟದಲ್ಲಿ ಪ್ರಾರಂಭವಾದರೆ ಸುಬ್ಬನ ಪ್ರಸಂಗದಲ್ಲಿ "ಜಯ ಜಯ ಮ | ಹೀಪತೇ | ದಶರಥ ನೃ | ಪಾಲ" ಎಂದು ಅದೇ ಪಲ್ಲವಿಯಿಂದ ಸುರುವಾಗುತ್ತದೆ. ಆ ಮೇಲೆ ಪ್ರತಿ ಪದ್ಯವೂ ನೆರಳಿನಂತೆ ಹಿಂಬಾಲಿಸುತ್ತದೆ.
ವೃತ್ತ :
ಕೈಕಯಾಧೀಶ ಕನ್ಯಾ ಮಾನಸಂ ಮಂಥರಾಸಾ
ಸಾಕ ಮಕೋಪ ನೋಡೇ ನಿರ್ಮಮಂಥಾನುಕೂಲ್ಯಾತ್
ಕಂದ :
ಹೊಕ್ಕಳು ಹೃದಯವ ಮಾಯಾ
ರಕ್ಕಸಿ ಕದಡಿದಳು ಕೈಕೆಯಂತಃಕರಣಂ |
ಮಂಥರೆಯು ಮಾಯದಿಂದ ಕೈಕೆಯ ಮನಸ್ಸನ್ನು ಹೊಕ್ಕು ಕದಡಿಸಿದಳೆಂಬುದು ವಾಲ್ಮೀಕಿ ರಾಮಾಯಣ ಅಥವಾ ತೊರವೆ ರಾಮಾಯಣಾದಿಗಳಲ್ಲಿಲ್ಲದ ವಿಷಯವೆಂಬುದನ್ನು ಗಮನಿಸಬೇಕು. ಅಲ್ಲಿ ಮಂಥರೆಯು ಕೈಕೆಯನ್ನು ಮಾತಿನಿಂದ ಜೈಸಿ ಒಲಿಸುತ್ತಾಳೆ. ಸಂಸ್ಕೃತ ಭೋಜಚಂಪುವಿನಲ್ಲಿ 'ಕೈಕೇಯ್ಯಾ: ಸಾ ಹೃದಯಮದಯಂ ಮಂಥರಾ ನಿರ್ಮಮಂಥ?' ಎಂದು ಕಥಕಳಿಯಲ್ಲಿದ್ದಂತೆ ಇದೆ. ರಾಮನಾಟದ ಕರ್ತೃವು ಭೋಜಚಂಪುವನ್ನು ಅನೇಕ ಸಂದರ್ಭಗಳಲ್ಲಿ ಅನುಸರಿಸಿರುತ್ತಾನೆ.
ಚೆಂಬಡ :
ಸಖಿ ನೀ ಚೊ | ನ್ನದು ಕೇಟ್ಟು | ಸಕಲವು | ಮರಿಂಞು ಞಾನ್ |
ಸಹಿಯಾಯಿ | ತೊಟ್ಟುಂತನ್ನೆ | ಸಂತತಂ ಚಿಂ | ತಿಕ್ಕುಂ ತೋರುಂ ..........||೧||
ಕಿಂತು ಕಾಂತನ್ | ಮುನ್ನ ತವ | ತನ್ನುವಲ್ಲೊ | ರಂಡುವರಂ |
ಎಂದಿವಿನ್ನು | ಖೇದಿಕ್ಕುನ್ನು | ಎನ್ನದಿನೇ | ಚೋದಿಚ್ಚಾಲ್ ..........||೨||
ಏಕತಾಳ :
<poem>
ಸಖಿ ನೀ ಪೇ | ಳಿದ ಮಾತು | ಸಕಲವು | ಲೇಸಾಯ್ತು |
ಯುಕುತಿ ಏ | ನಿದಕಿನ್ನು | ಎನ್ನೊಳ್ ಹೇಳು 1 ಕಂಡುದನ್ನು ..........||೧||
ಹಿಂದೆ ಮಚ್ಚಿ | ನಿನಗೆ ಆ ನ | ರೇಂದ್ರ ಕೊಟ್ಟ | ಮಾತೆರಡ |
ಇಂದು ಕೇಳು | ಕೊಟ್ಟ ಮೇಲೆ | ಮುಂದೆ ಕೇಳು | ಕಾರ್ಯ ಬಾಲೆ ..........||೨||
ಪಾರ್ತಿಸುಬ್ಬನ ಪೂರ್ವಕಾಲದ ಯಕ್ಷಗಾನ ಕೃತಿಗಳಲ್ಲಿ ಕಾಣದಿರುವ ಹಲವು ಪದ್ಯಬಂಧಗಳನ್ನು ಸುಬ್ಬನು ಕಥಕಳಿಯಿಂದ ಆಯ್ದುಕೊಂಡಿದ್ದಾನೆ. ಮುಂದಿನ ಎರಡು ಪದ್ಯಗಳು ಅಂಥವು. ಕಾಡಿನಲ್ಲಿ ಸೀತೆಯು ಮುನಿ ಪತ್ನಿಯರಿಂದ ರಾಕ್ಷಸರ ಸುದ್ದಿಯನ್ನು ಕೇಳಿ ಭಯದಿಂದ ರಾಮನೊಡನೆ ಹೇಳುವ ಪದ್ಯವೊಂದು ಹೀಗಿದೆ-
ಕಾಂಭೋಜಿ-ಚೆಂಬಡ :
ರಾತ್ರಿ೦ಚರ | ನಾಥನಾಯೊ | ರುತ್ತ ನುಂಡ | ವನುತನ್ನೆ |
ಮಸ್ತಕಂಗ | ಳುಂ ಪತ್ತುಂಡು | ಪೋಲ್- ಆ | ತ್ರಯುಮಲ್ಲ |
ಹಸ್ತಂಗಳಿ | ರುಪತ್ತುಂಡು | ಪೋಲ್ - ಅ | ವನ್ ಲೋಕಾನಾಂ |