ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೭೨ / ಕುಕ್ಕಿಲ ಸಂಪುಟ

ಸರಿರಾತ್ರೆಯೊಳಗೆನ್ನ ತರಳ ಮನೆಗೆ ಬಂದ ಗುರುತವೇನಮ್ಮ ಪೇಳೆ|

-----------

ಕಂದನಿರುಳು ನಿಮ್ಮ ಮಂದಿರದೊಳು ಬೆಣ್ಣೆ ತಿಂದಿಹ ಗುರುತವೇನೆ?|

ಎಂದು ಅವರನ್ನ ಕೇಳಿ ಮನ್ನಿಸಿ ಕಳುಹಿಸುತ್ತಾಳೆ. ಮರುದಿನ ಮತ್ತೊಬ್ಬಳು ಬಂದು ಹೀಗೆ ದೂರುತ್ತಾಳೆ:


ಅಷ್ಟತಾಳ:

ಎಷ್ಟೆಂದು ಹೇಳಲಮ್ಮ-ಗೋಪಾಲನ । ದುಷ್ಟತನವ ಗೋಪಮ್ಮ ।
ಕಟ್ಟಿದ ಕರುಗಳ ಬಿಟ್ಟು ಕರೆವ ಮುನ್ನ ।
ಹಟ್ಟಿಯಿಂ ನೆಗೆದೋಡಿದ ಕೇಳು ವಿನೋದ ॥
ಬಣ್ಣಗತಿಯಲಿ ಬಂದ-ಪಾಲೊಸರ್ತುಪ್ಪ ।
ಬೆಣ್ಣೆಯ ಕದ್ದು ತಿಂದ ॥
ಮಿಣ್ಣನೆ ಮಲಗಿದ್ದ ಚಿಣ್ಣನ ಮೂಗಿಗೆ ।
ಸುಣ್ಣವ ಬರೆದೋಡಿದ ಕೇಳು ವಿನೋದ ॥
ಅಷ್ಟೆಲ್ಲ ಕಂಡು ನಾವು-ಅಟ್ಟದಲ್ಲಿ ಬ।
ಚ್ಚಿಟ್ಟರೆ ಆದ ನೋಡಿದ ।
ಮೆಟ್ಟಿ, ಗೋಪರ ಹೆಗಲಲಿ ನಿಂತು ಬಳಿಕ ಕ
ಲ್ಲಿಟ್ಟೋಡಿ ಪೋದ ಕಾಣ್-ಕೇಳೆಲೆ ಜಾಣ ॥
ಭಟ್ಟಬ್ರಾಹ್ಮರಿಗೆನ್ನುತ ಮೂಲೆಯಲಿ ಬ ।
ಚ್ಚಿಟ್ಟಿರ್ದಡದ ನೋಡುತ ॥
ಕೆಟ್ಟ ಮೂಳಿಯ ಮಕ್ಕಳೆನುತ ಬಾಗಿಲೈ ಕ ।
ಲ್ಲಿಟ್ಟೋಡಿ ಪೋದನಮ್ಮ-ಕೇಳೆ ಗೋಪಮ್ಮ ॥

ಅದಕ್ಕೆ ಗೋಪಿಯ ಉತ್ತರ:

ಕಂದ:


ಮಕ್ಕಳ ಮಾಣಿಕ ಪಾಲ್ಮೊಸ।
ರಿಕ್ಕಿದರದನುಣ್ಣಲೊಲ್ಲ ಸೇರದು ಬೆಣ್ಣೆ ।
ಚಿಕ್ಕವ ನಿಮ್ಮಡಿಗೆಯ ಮನೆ ।
ಪೊಕ್ಕನು ಸರಿರಾತ್ರೆ ಎಂಬ ಮಾತಿದು ಚೋದ್ಯಂ ॥

ಅರಮನೆಯಲ್ಲಿ ಒತ್ತಾಯಿಸಿ ಕೊಟ್ಟರೂ ಹಾಲು ಮೊಸರು ಬೇಡವೆನ್ನುವವ, ಬೆಣ್ಣೆ ಆತನಿಗೆ ಸೇರುವುದೇ ಇಲ್ಲ! ಇಂಥ ಸ್ವಭಾವದ ಬಾಲಕನು ಪರರ ಮನೆಯ ಹಾಲು ಮೊಸರನ್ನು ನಡುವಿರುಳು ಕದ್ದುಣ್ಣುವನೆಂಬ ಮಾತನ್ನು ಗೋಪಿ ನಂಬುವಳೆ? ದೂರು ತಂದವರಾದರೂ ಅಷ್ಟಕ್ಕೆ ಬಿಡುವರೆ? ಅವರಲ್ಲಿ ದಿಟ್ಟೆಯೊಬ್ಬಳು ಮುಂದೆ ಬಂದು 'ಹೋಗಲಿ, ಹಾಲು ಮೊಸರಿನ ಸಂಗತಿಯಂತಿರಲಿ, ಅದು ಸಣ್ಣವನ ಮಕ್ಕಳಾಟಿಗೆ ಎನ್ನೋಣ... ಇದಕ್ಕೇನೆನ್ನುವಿ?' ಎಂದು ನಾಚಿಕೆಯಿಂದ ಹೇಳದೆ ಸುಮ್ಮನಿದ್ದ ತನ್ನ ಮಗಳ ದೂರನ್ನು ತಾನೇ ಹೀಗೆನ್ನುತ್ತಾಳೆ:
ಇದೂ ಸಣ್ಣವನಾಟವೊ?

ದಿಟ್ಟೆ : ಸಣ್ಣವರಾಟವಲ್ಲ-ಸಂಗಡ ಬ೦ದ ।
ಚಿಣ್ಣರೊಳ್ ಕೇಳ್ವೆನಲ್ಲ ।