ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಧ್ಯಕ್ಷ ಭಾಷಣ/ ೧೭೧


ಅಕ್ಕ ನೀ ಸುಮ್ಮನಿರೆ ಆದರೆ ಕಳ್ಳ | ಸಿಕ್ಕದೆ ಪೋಪನೇನೆ | ದಕ್ಕದು ಕಳವುಹಾದರವೆರಡಕು ಸಣ್ಣ | ಮಕ್ಕಳಾದರು ಕಂಡು ಸೊಕ್ಕ ಮುರಿಯಬೇಕು ||
ಮರುದಿನ ಬೆಳಗಾಗಲು ಮತ್ತೊಬ್ಬಳು ತುರುಗೆಲಸದಲ್ಲಿರುವಾಗ ಚಿಣ್ಣ ಕೃಷ್ಣನು ಮಿಣ್ಣನೆ ಮನೆಯೊಳ ಹೊಕ್ಕು 'ಕೆನೆ ಮೊಸರ ಸುರಿದೋಡು'ವುದನ್ನು ಕಂಡು ಓಡಿಬಂದು ನೆರೆಮನೆಯ ಸಖಿಯೊಡನೆ ಹೇಳುತ್ತಾಳೆ :

ಝಂಪೆ :

ಅಕ್ಕ ಕೇಳೀ ಕೇರಿ ಒಕ್ಕಲೊಳು ಕಳುವವರು | ಮಕ್ಕಳೊಳಗಲ್ಲದೆ ಬೇರೊಬ್ಬರಿಲ್ಲ || ನಂದಗೋಪ ಯಶೋದೆ ಕಂದನಲ್ಲದೆ ಮನೆಗೆ | ಬಂದು ಕಳುವವರಿಲ್ಲ ಬದಲೊಬ್ಬರಲ್ಲ | ಅರಸುಗಳ ಬಾಲಕರು ಅನ್ಯಾಯ ಮಾಡಿದರೆ | ಪರರೊಡನೆ ಪೇಳ್ವರದ ಪರಿಹರಿಪರಿಲ್ಲ ||
'ಬೇಲಿಯೇ ಬೆಳೆ ತಿಂದು ಕೆಡಿಸಿದರೆ ನಾವಿನ್ನು ಹೇಗೆ ಬದುಕಲಿ? ಎಂದು ಎಲ್ಲರೂ ಒಗ್ಗಟ್ಟಾಗಿ ಕೃಷ್ಣನ ಚಿಣ್ಣಾಟವನ್ನು ದೂರಲು ಅರಮನೆಗೆ ಬರುತ್ತಾರೆ. ಬಂದವರನ್ನು ಕಂಡು ಗೋಪಿಯು 'ಊಟ ಮೀಹಗಳಲ್ಲಿ ತೊಡರು ಬಂದಡರಿತೆ ಏನಿರವ್ವ | ಬಲು | ಕಾಟಕ, ಜನರಿಂದ ಕನವು ಬಂದೆಸಗಿತೆ ಏನಿರವ್ವ?' ಎಂದು ಎಲ್ಲರೊಟ್ಟಾಗಿ ಬಂದ ಕಾರಣವನ್ನು ಕೇಳಲು ಅವರು ಕಳ್ಳ ಕೃಷ್ಣನಾಟಗಳನ್ನು ಮುದದಿಂದ ಹೀಗೆ ಹೇಳುತ್ತಾರೆ :

ಮಟ್ಟೆ ತಾಳ :

ಕೇಳೆ ಗೋಪಿ ರಂಗನಾಟವ ನಿನ್ನಲ್ಲಿ ನಾವು | ಹೇಳದಿರುವುದುಚಿತವಲ್ಲ ಪೇಳ್ವರಿಷ್ಟು ಕಾರ್ಯವಿಲ್ಲ || ಸರಿಯ ರಾತ್ರಿಯೊಳಗೆ ಬಾಗಿಲ್ಕುರಿಯಲಾಗಿ ಬೆದರಿ ಕದವ | ತೆರೆಯಲೊಳಗೆ ಬಂದು ನಾ | ವರಿಯದಂತೆ ಹಾಲು ಮೊಸರ | ಸುರಿಯಲದರ ನೋಡಿ ಸುಮ್ಮನೆ ನಾವಿರಲು ಸ ಕರೆಯ ಕದ್ದು ಮಲುವ ಗಮ್ಮ | ನನಗುತ ಮೇ | ಗರಿಯ ಮಾಡಿ ಬಿಡುವ ನಮ್ಮ | ನೆ-ನೀ ಕರುಣದಿಂದ || ಕೇಳೆ ಅಟ್ಟಿದ ಮೇಲಡಗಿಸಿ ಬಚ್ಚಿಟ್ಟರದರ ಬುಡಕೆ ಕೋಲ | ಲಿಟ್ಟು ತೂತುಮಾಡಿ ಬಂ | ದಷ್ಟು ಬಾಯನಿಟ್ಟು ಸವಿಯು | ತೊಟ್ಟಿನವರ ಕರೆದು ಕೊಡುವ | ನು ಬೆದರಿಸೆ ಕ | ಲ್ಲಿಟ್ಟು, ಭಾಂಡಗಳನೆ ಒಡೆವ | ನುಸತಿಪತಿಯರ | ಜುಟ್ಟುಜುಟ್ಟು ಕಟ್ಟಿಬಿಡುವ | ನುನೀ ಕರುಣದಿಂದ || ಕೇಳ
'ಸಂಜೆಯೊಳಂಗಳಕಿಳಿಯದ ಬಾಲ'ನ ಮೇಲೆ ಸಲ್ಲದ ದೂರುಗಳನ್ನು ಹೇಳಿದರೆ ಗೋಪಿಯು ನಂಬುವಳೆ? ಅವಳು ಪರಿಹಾಸದಿಂದ...: