ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶ್ರೀ ಕೋಟ ಶಿವರಾಮ ಕಾರಂತರ
'ಸುಬ್ಬನ ಸಮಸ್ಯೆ'

ಕೀರ್ತಿಕಾಮರಲ್ಲದ ಎಷ್ಟೋ ಮಂದಿ ಹಿಂದಿನ ಕವಿಗಳು ತಮ್ಮ ಕೃತಿಗಳಲ್ಲಿ ತಮ್ಮ ಹೆಸರನ್ನು ಹೇಳಿಕೊಳ್ಳುವುದು ಸಹ ಅಹಂಭಾವವೆಂದು ಭಾವಿಸಿದ್ದರು. ಕಾವ್ಯರಚನೆಯಲ್ಲಿ ತನ್ನ ಸ್ವಾಯತ್ತವೇನೂ ಇಲ್ಲ, ತನ್ನ ಇಷ್ಟದೈವವು ನುಡಿಸಿದಂತೆ ತಾನು ನುಡಿದೆ; ಆ ದೇವರೇ ತನ್ನ ಕೃತಿಕರ್ತನು; ಅದರ ಶ್ರೇಯಸ್ಸೆಲ್ಲ ಆತನಿಗೆ ಎಂಬ ನಮ್ಮ ಭಕ್ತಿಯಿಂದ ತಮ್ಮ ಕೃತಿಗಳನ್ನು ಆ ದೇವರಿಗೆ ಸಮರ್ಪಿಸಿ, 'ಕೆರೆಯ ನೀರನು ಕೆರೆಗೆ ಚೆಲ್ಲಿ ವರವ ಪಡೆವುದಷ್ಟೆ” ತಮ್ಮ ಭಾಗ್ಯ ಎಂದು ಬಗೆದಿದ್ದರು. ಮುಂದೆ ತಮ್ಮ ಕೃತಿಗಳನ್ನು ಬರೆದೋದುವವರೂ ಅಷ್ಟು ಮಾತ್ರ ತಿಳಿದರೆ ಸಾಕು ಎಂದಿತ್ತು ಅವರ ಬಯಕ, ತಮ್ಮ ಹೆಸರಿಂದ ಮತ್ತು ಕೃತಿಗಳಿಂದ ಮುಂದೆ ತಮ್ಮ ಕುಲಕ್ಕೆ, ಜಾತಿಗೆ, ಪಂಥಕ್ಕೆ, ಊರಿಗೆ ಪ್ರತಿಷ್ಠೆ ಬರಬೇಕು ಅಥವಾ ಬಂದೀತು ಎಂಬ ಕಲ್ಪನೆ ಸಹ ಅವರಿಗೆ ಇದ್ದಿರಲಾರದು. ಅಂತೆಯೇ, ಕಾಲಾಂತರದಲ್ಲಿ ತಮ್ಮ ಕೃತಿಗಳ ಕರ್ತೃತ್ವದ ಕುರಿತು ವಾದ ವಿವಾದಗಳು ಹುಟ್ಟಿ ಅನರ್ಥವಾದೀತು, ತಮ್ಮ ಹೆಸರಿಗೆ, ಕುಲಕ್ಕೆ, ಊರಿಗೆ, ದೇವರಿಗೆ ಅನ್ಯಾಯ ವಾದೀತು ಎಂಬ ಶಂಕೆಯೂ ಅವರಿಗಿದ್ದಿರಲಾರದು. ಇದ್ದಿದ್ದರೆ ಪ್ರಾಯಶಃ ಅವರು ಹೀಗೆ ಮಾಡುತ್ತಿದ್ದಿಲ್ಲವೇನೊ?

ಸ್ಮರಣಪದವಿಯನ್ನೈದಿದ ನಮ್ಮ ಯಕ್ಷಗಾನ ಕವಿಗಳಲ್ಲಿ ಬಹುಮಂದಿ .. ಇಂಥ ಸಜ್ಜನರು. ತಮ್ಮ ಹೆಸರು, ಕುಲಗೋತ್ರಾದಿಗಳನ್ನು ಸೂಚಿಸದೆಯ ಕೃತಿಗಳನ್ನು ರಚಿಸಿ ದವರು. ಆದರೂ, ಹಲವರು ಸ್ಮತ್ಯಪೇತವಾಗಬಹುದಾದಷ್ಟು ಹಿಂದಣವರಲ್ಲದುದ ರಿಂದಲೂ, ಹೆಚ್ಚಿನ ಕೃತಿಗಳ ರಚನೆಯಾದಂದಿನಿಂದ ಇಂದಿನ ವರೆಗೂ ಪ್ರಯೋಗರೂಢಿ ಯಲ್ಲಿ ಇರುವಂಥವುಗಳಾದುದರಿಂದಲೂ ಆ ಕವಿಗಳ ನಾಮಾಂಕಿತ ದೇಶಕಾಲಗಳು ಜನರ ಸ್ಮರಣೆಯಲ್ಲಿ ಪರಂಪರೆಯಿಂದ ಸ್ವಭಾವತಃ ಉಳಿದುಬಂದಿವೆ. ಒಂದೇ ಕಥಾಭಾಗದಲ್ಲಿ ನಾಲ್ಕಾರು ಮಂದಿ ಕವಿಗಳು ಕೃತಿರಚನೆ ಮಾಡಿದ್ದಿದ್ದರೂ ಒಂದೇ ಹೆಸರಿನ ಕವಿಗಳು ನಾಲ್ಕಾರು ಮಂದಿ ಇದ್ದರೂ, ಪ್ರತಿಯೊಬ್ಬನ ರಚನಾಶೈಲಿಯಲ್ಲಿ ಪ್ರತ್ಯೇಕ ವೈಶಿಷ್ಟ್ಯ ಗಳಿದ್ದೇ ಇರುವುದರಿಂದಲೂ, ಇಷ್ಟದೇವತಾಸ್ತುತಿ, ಉಪಕ್ರಮ, ಉಪಸಂಹಾರ, ಮಂಗಲಾಚರಣೆ ಇತ್ಯಾದಿಗಳಲ್ಲಿ ಭಿನ್ನ ಕ್ರಮವಿರುವುದರಿಂದಲೂ ಆಯಾ ಕೃತಿಗಳ ಕರ್ತೃತ್ವದ ವಿಷಯದಲ್ಲಿ ಭ್ರಾಂತಿ ಸಂದೇಹಗಳಿಗೆ ಅವಕಾಶ ಕಡಿಮೆ.

ಯಕ್ಷಗಾನಶ್ರೇಷ್ಠನೆಂದು ಚಿರಪ್ರಸಿದ್ಧನಾದ ನಮ್ಮ ಕುಂಬಳೆಯ ಪಾರ್ತಿಸುಬ್ಬನೂ ತನ್ನ ಹೆಸರು, ಕುಲ, ಗೋತ್ರಾದಿಗಳನ್ನು ಹೇಳಿಕೊಂಡವನಲ್ಲ. ತನ್ನ ರಾಮಾಯಣದ 'ಪಟ್ಟಾಭಿಷೇಕ' ಪ್ರಸಂಗದ ಪ್ರಾರಂಭದಲ್ಲಿ ತಾನು ಪಾರ್ವತೀನಂದನ ಎಂದು ಮಾತ್ರ ಸೂಚಿಸಿದ್ದಾನೆ. ಪಾರ್ವತಿಯ ಮಗನಾದುದರಿಂದಲೇ ಈತನಿಗೆ ಪಾರ್ತಿಸುಬ್ಬ ಎಂದು ಹೆಸರಾಯಿತು.. ಈತನು ತನ್ನ ಪ್ರತಿಯೊಂದು ಕೃತಿಯನ್ನೂ ತನ್ನ ಇಷ್ಟದೈವವಾದ