ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೧೮ / ಕುಕ್ಕಿಲ ಸಂಪುಟ

ಉದಾಹರಣೆ: ೧. 'ಮಾಹವ | ಮಾಸ | ಸೋಹಿತ ಸ | ಮಗ್ಗ | ಕೇ ಉವವ | ಣಮ್ಮಿ

ಘುಳ್ಳಕುಸು ಮೇ-

'ಣಿಚ್ಚಪ | ಮತ್ತ | ಜುತ್ತಬಹು| ಪಬ್ಬಿ | ಸಂಘಪರಿ | ಘುಟ್ಟ |

ನಾದಮುಹ ಳೆ-

ಫಳ್ಳಿದ | ಚೌಡ | ಸಂಡಸಹ | ಆರ | ಮಂಜರಿವಿ | ಳೋಳ | ಣಾದಪವ |ಣೇ-
ಹಿಂಡದಿ | ಛಪ್ಪ | ದಾನುಗದ | ಮಗ್ಗ | ಓಹರಹು | ದೋಣಿ | ವಿಟ್ಟವ ಅ| ಹೋ

(ನಾ. ಶಾ. ಅ. ೩೨-೨೯೬)

ಅರ್ಥ : ಮಧುಮಾಸದಲ್ಲಿ ಅರಳಿದ ಕುಸುಮಗಳುಳ್ಳ ಉಪವನದಲ್ಲಿ, ಪಕ್ಷಿರುತಗಳಿಂದ ಸದಾಮುಖರಿತವಾಗಿರಲು ಹಾಗೂ ಫಲಭರಿತವಾದ ಚೂತ ಮತ್ತು ಖಂಡ ಸಹಕಾರ ವೃಕ್ಷವಾಟಿಗಳಲ್ಲಿ ಬೀಸುವ ಗಾಳಿಯು ಮರ್ಮರಿಸುತ್ತಿರಲು, ಕೋಗಿಲೆಯೊಂದು ಜೋಲು ಮುಖಮಾಡಿಕೊಂಡು ತುಂಬಿಗಳು ಹಾರಾಡುವಲ್ಲಿ ಅವುಗಳ ಹಿಂದೆ ಅಲೆದಾಡುತ್ತಿದೆ.

ವಣ | ಖ೦ಡ | ಕಂಜಹದಿ | ಕೋಪಿ | ಕೋವಾಯ | ಸಾಹ | ದೋ
ಭಯ | ಭೀದ | ಓಭದಿ | ಪಾದ | ಪಂದೀಣ | ದೀಣ | ಓ
ತರು | ಕೋಟ | ರಂವಸದಿ | ಸಂಪ | ದಂಭೋಳ | ಣೇತ್ರ | ಓ
ಸಮ | ಭಿದ್ರ | ದೋಣಿ ಸಿಅ | ರೋಅ | ಅಂಪದಿವಿ | ಸೋಹಿ | ದೋ-

(ನಾ. ಶಾ. ೩೨-೨೮೨)

ಅರ್ಥ : ಕಾಗೆ ಬೆನ್ನಟ್ಟಿದ ಗೂಗೆಯೊಂದು ವನವನ್ನು ಬಿಟ್ಟೋಡಿ ಬಡವಾಗಿ ಒಂದು ಮರದ ಪೊಟರೆಯನ್ನು ಸೇರಿತ್ತು; ಅದೀಗ ಅಲ್ಲಿಂದಲೂ ಓಡಿಸಲ್ಪಟ್ಟು ಭಯಕಾತರದಿಂದ ಕಣ್ಣು ತಿರುಗಿಸುತ್ತಾ ಈ ಕಡೆಗೇ ಬರುತ್ತಿದೆ.

೨. ಮೋಹಸ | ಮೂಹಂ | ಪೀಣಬ | ಳಾಕಂ | ಬಿಜ್ಜು ಪ | ಲೀಕಂ | ಪೇಖಿ | ಏಸೋ ||
ಉಟ್ಟಿದ | ರೋಸೋ | ಭೀಮಣಿಣಾದೋ | ಭಾವದಿ | ಹ | ರುವ |

ಣಮ್ಮಿ
(ನಾ. ಶಾ. ಅ. ೩೨)

ಅರ್ಥ : ಮಿಂಚು ಝಳಪಿಸುತ್ತಿರುವ ಸಿಡಿಮುಗಿಲುಗಳುಳ್ಳ ಮೇಘ ಸಂಘವನ್ನು ನೋಡಿ ಈ ಆನೆಯೊಂದು ರೋಷಾವೇಷದಿಂದ ಗರ್ಜಿಸುತ್ತಾ ಗೊಂಡಾರಣ್ಯದಲ್ಲಿ ಧಾವಿಸುತ್ತಿದೆ.

೪. ಕಾಳಿದಾಸನ ವಿಕ್ರಮೋರ್ವಶೀಯದಲ್ಲಿ ಪುರೂರವನ ಪ್ರವೇಶಕ್ಕಿರುವ ಆಕ್ಷಿಪ್ತಿಕೆ' ಎಂಬ ಧ್ರುವಾಗೀತೆ :

ಗಹಣ೦ಗಯಿಂದಣಾಹೋ ಪಿಅವಿರಹುಮ್ಮಾ ಅಪಅಅವಿಹಾರೋ |
ವಿಸಈ ತರುಕುಸುಮಕಿಸಲ ಅ ಭೂಸಿ ಅಣಿಲಿ ದೇಹಪಬ್ಬಾರೋ ||

ಅರ್ಥ : ತಲೆಹೆಗಲುಗಳಲ್ಲಿ ಮರಗಳ ಹೂತಳಿರುಗಳನ್ನು ಹೇರಿಕೊಂಡು ವಿರಹವಿಕಾರ ವನ್ನು ಪ್ರಕಟಿಸುತ್ತಾ ಮದ್ದಾನೆಯು ಕಾನನವನ್ನು ಪ್ರವೇಶಿಸುತ್ತದೆ.

ಈ ಪ್ರಕಾರ ಸಂಸ್ಕೃತ ಪ್ರಾಕೃತ ಛಂದೋವೃತ್ತಗಳ ಪಾದಾಕ್ಷರ ಪ್ರಮಾಣದಲ್ಲಿ ಗುರುಲಘಕ್ಷರಗಳ ವ್ಯತ್ಯಾಸದಿಂದ ನಾನಾ ವಿಧದ ಧ್ರುವಾಗೀತೆಗಳನ್ನು ರಚಿಸುವ ವಿಧಾನವನ್ನು ಸೋದಾಹರಣವಾಗಿ ನಿರೂಪಿಸಲಾಗಿದೆ. ಆ ಪ್ರಕಾರ ಗೀತಭೇದಗಳು