ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೨೦ / ಕುಕ್ಕಿಲ ಸಂಪುಟ

ಶೋಕ ಶೃಂಗಾರಾದಿ ಇತರ ಭಾವ ಸಂದರ್ಭಗಳ ಪ್ರಾವೇಶಿಕ ಗೀತದಲ್ಲಿರತಕ್ಕದ್ದಲ್ಲ. ಅಥವಾ ಅದೇ ಸಂದರ್ಭದಲ್ಲಿಯಾದರೂ ಮಧ್ಯಮ ನೀಚಪಾತ್ರಗಳು ಪ್ರವೇಶಿಸುವು ದಾದಲ್ಲಿ ಅದಕ್ಕೊಪ್ಪುವ ರಚನೆ ಬೇರೆ ವಿಧದಲ್ಲಿರುತ್ತದೆ. ಪ್ರತಿಯೊಂದು ಗೀತವನ್ನು ಹಾಡುವಾಗಲೂ ಮೃದಂಗಾದಿ ವಾದ್ಯಗಳನ್ನು ಬಾರಿಸುವ ಹಾಗೂ ಪಾತ್ರಗಳು ಕುಣಿಯುವ ಕ್ರಮಗಳು ಬೇರೆ ಬೇರೆ ಇರುತ್ತವೆ. ಎಲ್ಲ ಗೀತೆಗಳಿಗೂ ಹಿಂದೆ ಹೇಳಿದಂತೆ ತಾಳ ಲಯಾದಿ ಸಂಬಂಧಗಳು ಪ್ರತ್ಯೇಕ ಸ್ಥಿರವಾಗಿರುವುದರಿಂದ ಇವಕ್ಕೆ 'ಧ್ರುವಾಪದ'ಗಳೆಂದು ಅನ್ವರ್ಥ ವಾಗಿ ಹೆಸರಾಗಿದೆ ಎನ್ನುತ್ತಾನೆ.೨೦

ಹೀಗೆ ನಾಟಕಪ್ರಯೋಗದಲ್ಲಿ ಗೀತನೃತ್ತಗಳನ್ನು ಪ್ರಯೋಗಿಸುವ ಸ್ಥಾನಗಳು ಎಂದರೆ ಅವಕಾಶಗಳು ಇವು : ೧. ಪ್ರವೇಶಕಾಲ, ೨. ಹೊರಟುಹೋಗುವ ಕಾಲ. ೩. ರಸಭಾವ ಗಳು ಬದಲಾಗುವ ಸಂದರ್ಭ ಎಂದರೆ ರಸಪ್ರವಾಹಕ್ಕೆ ಹಠಾತ್ತನೆ ಆಕ್ಷೇಪ ಉಂಟಾಗುವ ಸಂದರ್ಭ. ಇದನ್ನು ಭಾವಸಂಕ್ರಮಣ ಎನ್ನಬಹುದು. ೪. ಹಾಗೆ ಬದಲಾದ ಭಾವಗಳು ಸಮಾಧಾನಕ್ಕೆ ಬರುವಾಗ, ೫. ಅಭಿನಯ ಮಧ್ಯದಲ್ಲಿ ಕಾಲಯಾಪನೆ ಮಾಡುವ ಹಾಗೂ ದೋಷಪ್ರಚ್ಛಾದನೆ ಮಾಡತಕ್ಕ ಸಂದರ್ಭಗಳು ಬರುವಾಗ, ಈ ಸ್ಥಾನಗಳಲ್ಲಿ ಹಾಡುವ ಗೀತೆಗಳಿಗೆ ಕ್ರಮವಾಗಿ ೧. ಪ್ರಾವೇಶಕೀಧ್ರುವಾ, ೨. ನೈಷ್ಮಾಮಿಕೀ ಧ್ರುವಾ, ೩. ಆಕ್ಷೇಪಿಕೀಧ್ರುವಾ, ೪. ಪ್ರಾಸಾದಿಕೀಧ್ರುವಾ, ೫. ಅಂತರಧ್ರುವಾ ಎಂಬ ಸಂಜ್ಞೆಗಳಿವೆ. ಇವುಗಳೊಳಗೂ ಬಂಧಗೌರವಕ್ಕೆ ತಕ್ಕಂತೆ ಶೀರ್ಷಕಾ, ಆಕ್ಷಿಪ್ತಿಕಾ ಪುಟಚೂಲಿಕಾ, ಖಂಜಕ, ನರ್ಕುಟ, ದ್ವಿಪದೀಖಂಡ, ತ್ರಿಪದೀ, ಚೌಪದೀ, ಷಟ್ನದೀ, ಭ್ರಮರಕಾ ಇತ್ಯಾದಿ ಅಂಕಿತಗಳು ಬೇರೆ ಇವೆ. ಇದಲ್ಲದೆ ಈ ಐದು ವಿಧದ ಧ್ರುವ ಗಳಲ್ಲಿಯೂ ಪ್ರಯೋಗಿಸತಕ್ಕ ರಸಭಾವಗಳನ್ನು ಹೊಂದಿಕೊಂಡು ಶೀರ್ಷಕ, ಉದ್ಧತಾ,


೨೦. ಧ್ರುವಾ ವರ್ಣಾ ಹ್ಯಲಂಕಾರಾ ಯತಯಃ ಪಾಣಯೋಲಯಾ
ಧ್ರುವಮನ್ನೋನ್ಯ ಸಂಬಂಧಾ ಯಸ್ಮಾತ್ತಸ್ಮಾತ್ ಧ್ರುವಾ ಸ್ಮೃತಾಃǁ೮ǁ
ವ್ಯಾ-'ಧ್ರುವಂಗೀಯಮಾನಂ ಪದಂ'

(ನಾ. ಶಾ. ಅ. ೩೨)

೨೧. ಕ್ರಮಮುಲ್ಲಂಘ ವಿಧಿಜ್ಞೆ: ಕ್ರಿಯತೇ ಯಾ ದ್ರುತಲಯೇನ ನಾಟ್ಯವಿಧೇ
ಆಕ್ಷೇಪಿಕೀ ಧ್ರುವಾಸೌ ದ್ರುತಾ ಸ್ಥಿತಾವಾಪಿ ವಿಶ್ಲೇಯಾǁ೩೧೩ǁ
ವ್ಯಾ- ಕ್ರಮಮುಲ್ಲಂಘ ಪ್ರಸ್ತುತಂ ರಸಂ ಉಲ್ಲಂಘ ತತ್ರಾಕ್ಷಿ
ಪ್ರಮಾಣರಸಸ್ಯ ದೀಪ್ತತಯಾ ರಸಾಕ್ಷೇಪಯೋಜನವಿಷಯಾ ಆಕ್ಷೇಪಿಕೀ

(ನಾ. ಶಾ. ಅ. ೩೨)

೨೨. ಯಾ ಚ ರಸಾಂತರಮುಪಗತಮಾಕ್ಷೇಪವಶಾತ್ ಕೃತಂ ಪ್ರಸಾದಯತಿ
ರಾಗಪ್ರಸಾದಜನನೀಂ ವಿದ್ಯಾತ್‌ ಪ್ರಾಸಾದಿಕೀಂ ತಾಂ ತುǁ೩೧೪ǁ

(ನಾ. ಶಾ. ಅ. ೩೨)

೨೩. ವಿಷಣ್ಣೆ ಮೂರ್ಛಿತೇ ಭ್ರಾಂತೇ ವಸ್ತ್ರಾಭರಣ ಸಂಯಮೇ
ದೋಷಪ್ರಚ್ಛಾದನಾಯಾ ಚ ಗೀಯತೇ ಸಾಂತರಾ ಧ್ರುವಾ ǁ

(ನಾ. ಶಾ. ಅ. ೩೨)

೨೪. ಪ್ರವೇಶಾಕ್ಷೇಪ ನಿಷ್ಕಾಮ ಪ್ರಾಸಾದಿಕ ಮಥಾಂತರಂ
ಗಾನಂ ಪಂಚವಿಧಂ ವಿದ್ಯಾತ್‌ ಧ್ರುವಾಯೋಗ ಸಮನ್ವಿತಂǁ೩೧೦ǁ

(ನಾ. ಶಾ. ಅ. ೩೨)