ಆಳಿಕೊಂಡಿದ್ದವನೆಂದು ಚರಿತ್ರೆಯಿಂದ ತಿಳಿದುಬರುವುದರಿಂದ, ಆ ಪ್ರಕಾರ ಅಲ್ಲಿಯ ಯವನರ, ಎಂದರೆ ಪರ್ಶಿಯನ್ನರ, ರಾಜರಾಗಿದ್ದವನನ್ನು ಅಶೋಕನ ಶಾಸನದಲ್ಲಿ 'ಯೋಣ ರಾಜ' ಎಂದು ಪ್ರಾಕೃತದಲ್ಲಿ ಕರೆದಿರುವುದು ಸಹಜ. ಭಾರತದಲ್ಲಿ ಕಾಲೂರಿದ ಗ್ರೀಕ್ ರಾಜರೆಲ್ಲರೂ ಮೊದಲಾಗಿ ಪರ್ಶಿಯ ಟರ್ಕಿಸ್ತಾನದ ಭಾಗಗಳನ್ನು ಗೆದ್ದು ಅಲ್ಲಿ ನೆಲೆಯಾಗಿದ್ದವರೆಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬೇಕು.
ಅದು ಹೇಗೂ ಇರಲಿ, ನಮ್ಮ ಪುರಾಣಾದಿಗಳಲ್ಲಿ ಯವನರೆಂದು ಕರೆದಿರುವುದು ಗ್ರೀಕ್ ಜನರನ್ನಲ್ಲವೆಂಬುದೇ ಪ್ರಸ್ತುತ ಗಮನಿಸತಕ್ಕ ವಿಷಯವಾಗಿದೆ.
ಪರ್ಶಿಯದವರಿಗೆ ಹಾಗೂ ಅರೇಬಿಯದವರಿಗಾದರೂ ಯವನರೆಂದು ಹೆಸರಾಗಲು ಕಾರಣವೇನಿರಬಹುದು?
ಸಂಸ್ಕೃತ ಪದಗಳಲ್ಲಿ ಯ ಕಾರ ಜ ಕಾರಗಳು ಒಂದರ ಬದಲು ಇನ್ನೊಂದು ವಿಕಲ್ಪ ವಾಗಿ ಬರುವುದು ಸಹಜವಾಗಿದೆ : `ಯವ-ಜವ, ಯವನ-ಜವನ, ಯವನಿಕಾ-ಜವನಿಕಾ, ಯವಾನಿಕಾ-ಜವಾನಿಕಾ ಇತ್ಯಾದಿ, ಸಂಸ್ಕೃತದಲ್ಲಿ 'ಜವನ' ಎಂದರೆ ವೇಗ ಉಳ್ಳುದ್ದು ಎಂಬ ಅರ್ಥದಲ್ಲಿ ಕುದುರೆಗೆ ಪ್ರಸಿದ್ಧವಾದ ಹೆಸರು. ಕುದುರೆಗೆ ಇರುವ ಇನ್ನೂ ಅನೇಕ ಹೆಸರುಗಳು (ವಾಜಿ, ತುರಗ, ಅಶ್ವ, ತೇಜಿ ಇತ್ಯಾದಿ) ಇದೇ ಪರ್ಯಾಯದಲ್ಲಿರು ವಂಥವು; ಗಾಂಧರ್ವ (ಗಂಧರ್ವ), ಕಾಂಭೋಜ, ಬಾಕ, ಪಾರಸೀಕ, ಸೈಂಧವ, ಸೌವೀರ ಇತ್ಯಾದಿ ಅಶ್ವವಿಶೇಷಣಗಳು ಕೆಲವು ಆಯಾ ದೇಶದ ವಿಶಿಷ್ಟ ಜಾತಿ ಎಂಬರ್ಥ ದಲ್ಲಿ ಬಂದಂಥವು, ಮೂಲತಃ ದೇಶಸಂಬಂಧದ ವಿಶಿಷ್ಟಾರ್ಥದಲ್ಲಿ ಬಂದಿರುವ ಹೆಸರು ಗಳಾದರೂ ಕ್ರಮೇಣ ಅಶ್ವಸಾಮಾನ್ಯ ಎಂಬ ಅರ್ಥದಲ್ಲಿಯೂ ಪ್ರಯೋಗಿಸಲ್ಪಟ್ಟಿರು ಇವೆ. ಉದಾ : ಗಂಧರ್ವ, ತೇಜಿ, ಸೈಂಧವ ಇತ್ಯಾದಿ. ಅಮರಕೋಶದಲ್ಲಿ ಜವನ ಎಂಬ ಹೆಸರಿಗೆ ಹೆಚ್ಚು ವೇಗವುಳ್ಳ ಕುದುರೆ ಎಂಬ ವಿಶೇಷಾರ್ಥ ಕಾಣುವುದಾದರೂ (ಜವನಸ್ತು ಜವಾಧಿಕಃ) ಮೂಲತಃ ಇದು ಅಶ್ವಸಾಮಾನ್ಯಕ್ಕೆ ಇದ್ದ ಹೆಸರೆಂದು ಪುರಾತನ ಪ್ರಯೋಗ ಗಳಿಂದ ತಿಳಿಯಬಹುದಾಗಿದೆ. ಮಹಾಭಾರತದ ದಿಗ್ವಿಜಯ ಪರ್ವದಲ್ಲಿ (ಸಭಾಪರ್ವ) ಅರ್ಜುನನು ಋಷಿಕ ದೇಶವನ್ನು ಜಯಿಸಿ, ಅಲ್ಲಿಂದ ಕುದುರೆಗಳನ್ನು ಕಪ್ಪವಾಗಿ ತಂದನು ಎಂಬಲ್ಲಿ
ಮಯೂರ ಸದೃಶಾನನ್ಯಾನುತ್ತರಾನಪರಾನಪಿ
ಜವನಾನಾಶುಗಾಂವ ಕರಾರ್ಥ೦ ಸಮುಪಾಹರತ್ಎಂದಿದೆ.
ಇಲ್ಲಿ ಜವನ ಎಂಬುದು ಅಶ್ವಸಾಮಾನ್ಯ ಎಂಬರ್ಥದಲ್ಲಿ ಪ್ರಯೋಗಿಸಲ್ಪಟ್ಟಿರುವುದಾಗಿದೆ. (ಋಷಿಕ ದೇಶವೆಂದರೆ ಈಗಿನ ಚೈನೀಸ್ ತುರ್ಕಿಸ್ತಾನ್) ಸಾಮಾನ್ಯಾರ್ಥವೋ ವಿಶೇಷಾರ್ಥವೋ ಅದೇನೇ ಇದ್ದರೂ ಜವನ ಅಥವಾ ಯವನ ಎಂಬ ಹೆಸರು ಕುದುರೆಗೆ ಪ್ರಸಿದ್ಧವಾಗಿದ್ದುದರಿಂದ, ಕುದುರೆಗಳಿಗೆ ಹೆಸರಾದ ಆ ದೇಶಗಳಿಗೂ ಅಲ್ಲಿಯ ಜನಾಂಗಕ್ಕೂ ಸಹಜವಾಗಿ ಅದೇ ಹೆಸರಾಗಲು ಕಾರಣವಾಯಿತೆಂದು ನ್ಯಾಯವಾಗಿ ತಿಳಿಯಬೇಕು. ಗ್ರೀಸ್ ದೇಶವು ಕುದುರೆಗಳಿಗೆ ಹೆಸರಾದುದಲ್ಲವಷ್ಟೆ.
ಇನ್ನು ನಮ್ಮ ನಾಟಕ ಪರದೆಗೆ 'ಜವನಿಕೆ' (ಸಂಸ್ಕೃತದಲ್ಲಿ 'ಜವನಿಕಾ' ಎಂಬುದೇ ಮೂಲರೂಪ) ಎಂಬ ಹೆಸರು ಬಂದಿರುವುದು ಆ ದೇಶದ ಸಂಬಂಧದಿಂದ ಎಂದೆಣಿಸು ವುದು ಸರಿಯಲ್ಲ. ದೋಣಿಯ .'ಹಾಯಿ' ವಸ್ತ್ರಕ್ಕೆ ಸಂಸ್ಕೃತದಲ್ಲಿ 'ಜವನಿಕಾ' ಎಂದು ಹೆಸರು (ಆಪಟೆ ನಿಘಂಟು). ಅದಾದರೂ ವೇಗಾರ್ಥದಲ್ಲಿಯೇ ಬಂದಿರುವುದಾಗಿದೆ.