ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೂಡ - ಸೂಳಾದಿ - ಸಾಲಗ / ೨೪೯

ಗ್ರಂಥಗಳಲ್ಲಿ ಉದ್ದರಿಸಿ ಕೊಡುತ್ತಾ ಬಂದಿರುತ್ತಾರೆ! ಯಥಾಗತವಾದ ಈ ನಿರುಕ್ತಿಯನ್ನು ಬಿಟ್ಟರೆ ಛಾಯಾಲಗ ಎಂಬುದಕ್ಕೆ ಯುಕ್ತವಾದ ಅರ್ಥ ಇನ್ನೇನಾದರೂ ಇದೆಯೇ ಎಂದು ಸ್ವತಂತ್ರವಾಗಿ ವಿಚಾರಿಸೋಣ :
ಛಂದಃಶಾಸ್ತ್ರದಲ್ಲಿ ಲಘು, ಗುರು ಎಂಬ ಅಕ್ಷರ ಸಂಜ್ಞೆಗಳನ್ನು 'ಲಗ' ಎಂಬ ಸಂಕೇತಾಕ್ಷರಗಳಿಂದ ವ್ಯವಹರಿಸುವ ಕ್ರಮವು ಪರಂಪರೆಯಿಂದ ರೂಢಿಯಲ್ಲಿರುವುದಷ್ಟೆ? ಸಂಗೀತ ಶಾಸ್ತ್ರಗ್ರಂಥಗಳಲ್ಲಿ ತಾಳದ ಪಾರಿಭಾಷಿಕ ಲಘು ಗುರುಗಳನ್ನೂ 'ಲಗ'ಗಳೆಂದೇ ಕರೆಯುವುದು ಚಿರಪ್ರಸಿದ್ಧವಾಗಿರುವುದರಿಂದ ಗೇಯ ಪ್ರಬಂಧಗಳಿಗೆ ವಿಶೇಷಣವಾದ ಈ 'ಛಾಯಾಲಗ' ಪದದಲ್ಲಿರುವ 'ಲಗ' ಎಂಬುದು ಲಘುಗುರುಗಳ ಸಂಕೇತವಾಗಿದ್ದರೂ ಇರಬಹುದಲ್ಲವೆ? ಇದ್ದರೆ ಇದು ತಾಳದ ಲಘುಗುರುಗಳ ಸಂಕೇತವಾಗಿರಬೇಕು ಹೊರತು ಛಂದಸ್ಸಿನದಾಗಿರಲು ಕಾರಣವಿಲ್ಲ. ಏಕೆಂದರೆ ಸಾಲಗ ವರ್ಗದ ಪ್ರಬಂಧಗಳು ಗುರು ಲಘು (ಅಕ್ಷರ) ಗಣನೆಯ ಛಂದೋಬಂಧಗಳಲ್ಲವೆಂಬುದು ಲಕ್ಷಣ ಗ್ರಂಥಗಳಲ್ಲಿ ಸ್ಪಷ್ಟವಾಗಿದೆ. ಪಾದಖಂಡಗಳಲ್ಲಿ ಇಂತಿಷ್ಟು ಅಕ್ಷರಗಳಿರಬೇಕೆಂಬುದಷ್ಟೆ ಆ ಬಂಧ ಗಳಿಗಿರುವ ನಿಯಮ. ಶುದ್ಧ ಸೂಡದ ಏಲಾದಿಗಳಲ್ಲಿಯೂ ಕೇವಲ ಅಕ್ಷರ ಸಂಖ್ಯಾ ನಿಯಮವಿರುವ ಬಂಧಗಳಿವೆ. ತಾಳವಾದರೆ ಇವೆರಡು ವರ್ಗದ ಪ್ರಬಂಧಗಳಿಗೂ ನಿಯತ ವಾಗಿರುವುದಷ್ಟೇ ಅಲ್ಲ ತಾಳವೇ ಅವುಗಳಲ್ಲಿ ಪ್ರಧಾನವಾದ ಅಂಗವೆಂಬುದು ಲಕ್ಷಣ ಗ್ರಂಥಗಳಿಂದ ಸ್ಪಷ್ಟವಾಗುವುದು. ಹಾಗಾಗಿ, ಇದ್ದರೆ ಅವು ತಾಳದ ಲಘು ಗುರುಗಳ ಸಂಕೇತವಾಗಿರಬೇಕು. ಆಗ 'ಛಾಯಾಲಗಃ' ಎಂಬುದಕ್ಕೆ ಛಾಯಾಮಾತ್ರವಾದ ಲಘುಗುರು ಗಳುಳ್ಳ ಪ್ರಬಂಧ ಎಂಬ ಅರ್ಥವಾಗುವುದು. ಎಂದರೆ, ದೇಶೀಯ ಪ್ರಬಂಧಗಳ ತಾಳಗಳು 'ಛಾಯಾಲಗ' ಅಥವಾ ಸಾಲಗ ಎಂದ ಹಾಗಾಯಿತು. ಹಾಗಾದರೆ, ದೇಶೀ ತಾಳಗಳು ಲಘುಗುರುಗಳ ಛಾಯಾ ಮಾತ್ರ ಎಂದಾಗುವುದು ಹೇಗೆ? ಆ ಹೆಸರಿನ ಔಚಿತ್ಯವೇನು? ಎಂಬುದಕ್ಕೆ ನ್ಯಾಯವಾದ ಸಮರ್ಥನವಿದೆಯೇ ಎಂದು ಪರೀಕ್ಷಿಸಬೇಕು.
'ಸಾಲಗ' ಎಂಬ ಹೆಸರು ದೇಶೀತಾಳಗಳಿಗೆ ಪ್ರಸಿದ್ಧವಾಗಿತ್ತು ಎಂಬ ವಿಚಾರ ಸಂಗೀತರತ್ನಾಕರದಲ್ಲಿಯೇ ಹೇಳಿರುವುದೆಂಬುದು ತಾಳಾಧ್ಯಾಯದ ಆರಂಭದಲ್ಲಿರುವ ಈ ಶ್ಲೋಕದಿಂದ ಸ್ಪಷ್ಟವಾಗುವುದು.
ಚಚ್ಚತ್ರುಟಾದಿಭೇದಾಸ್ತು ಸಂತಿ ಖಂಡಾಭಿಧಾಃ ಪರ
`ತಏವ ಸಾಲಗಾ ಜೇಯಾಃ ಪ್ರಸಿದ್ಧಾ ಲಕ್ಷ್ಯವರ್ತನ
ದೇಶೀತಾಳ ಪ್ರಪಂಚೇನ ತಾನಪಿ ವ್ಯಾಹರಾಮಹೇ " || ೪೫ || || ೪೬ || (ಸಂಗೀತರತ್ನಾಕರದ ಮುದ್ರಿತ ಪ್ರತಿಗಳಲ್ಲಿ ೪೬ನೇ ಶ್ಲೋಕದ ಪೂರ್ವಾರ್ಧ ಕಾಣುವುದಿಲ್ಲ. ಆದರೂ ಉತ್ತರಾರ್ಧ ಒಂದಕ್ಕೆ ಶ್ಲೋಕದ ಕ್ರಮಸಂಖ್ಯೆಯನ್ನು ಕೊಡ ಲಾಗಿದೆ. ಆದುದರಿಂದ ಪೂರ್ವಾರ್ಧವು ಅಲ್ಲಿ ಇದ್ದಿರಬೇಕೆಂಬುದರಲ್ಲಿ ಸಂದೇಹವಿಲ್ಲ. ಚತುರ ದಾಮೋದರನು ಸಂಗೀತದರ್ಪಣದಲ್ಲಿ ಉದ್ಧರಿಸಿ ಕೊಟ್ಟಿರುವ ರತ್ನಾಕರದ ಈ ಭಾಗದಲ್ಲಿ ಆ ಪೂರ್ವಾರ್ಧವಿದೆ.) “ಚಚ್ಚುವಾದಿ ಮಾರ್ಗತಾಳಗಳಿಂದ ಹುಟ್ಟುವ ಬೇರೆ ಹಲವು ಭೇದಗಳಿಗೆ ಖಂಡತಾಳಗಳೆಂದು ಹೆಸರು, ಲಕ್ಷ್ಮಮಾರ್ಗದಲ್ಲಿ ಸಾಳಗ 0. ಸಂ. ರ. ಪ್ರಬಂಧಾಧ್ಯಾಯ, ಶ್ಲೋಕ ೩೧೯. ೨. ಸಂಗೀತ ದರ್ಪಣ, ಪುಟ, ೧೨೭ ಶ್ಲೋಕ ೭೪೭,