ಎಂಬ ಹೆಸರಿನಿಂದ ಅವು ಪ್ರಸಿದ್ಧವಾಗಿವೆ; ಮುಂದಿನ ಪ್ರಕರಣದಲ್ಲಿ ಅವುಗಳನ್ನೇ
ದೇಶೀಯ ತಾಳಗಳೆಂದು ವಿಸ್ತರಿಸುತ್ತೇವೆ" ಎಂದು ಈ ಶ್ಲೋಕದ ಅರ್ಥ, ದೇಶೀ
ತಾಳಗಳಿಗೆ ಖಂಡ ತಾಳಗಳೆಂಬ ಹೆಸರು ಬರಲು ಕಾರಣವೇನೆಂಬುದನ್ನೂ ದೇಶೀತಾಳ
ಪ್ರಕರಣದ ಆರಂಭದಲ್ಲಿ ಶಾರ್ಙ್ಗದೇವನು ಹೀಗೆ ವಿವರಿಸುತ್ತಾನೆ-
ಗುರ್ವಾದ್ಯಾಶ್ಚತುರಸ್ರಾದೇಃ ಖಂಡಯಿತ್ವಾ, ನಿವೇಶಿತಾಃ |
ಯಪ್ಪಾ ಲಭ್ಯಾದಿ ಖಂಡಾನಾಮಾಧಿಕ್ಯಮಿಹ ದೃಶ್ಯತೇ ||
ತೇನೈಷಾ೦ ಖ೦ಡತಾಲತ್ವಮಾಭಾಷಂತ ಪುರಾತನಾ: |
(ಈ ಶ್ಲೋಕಕ್ಕೆ ಕಲ್ಲಿನಾಥನು ವ್ಯಾಖ್ಯಾನ ಕೊಡಲಿಲ್ಲ. 'ದೇಶೀತಾಳಾನಾಂ
ಖಂಡತಾಲತ್ವಂ ಸೋಪಪತ್ತಿಕಂ ದರ್ಶಯತಿ' ಎಂದಿಷ್ಟ ಹೇಳಿ ಮುಗಿಸಿಬಿಟ್ಟಿದ್ದಾನೆ)
'ಚತುರಸ್ರಾದೇಃ' ಎಂದರೆ ಚಚ್ಚತ್ತುಟಾದಿ ತಾಳಗಳ ಎಂದರ್ಥ, 'ಗುರ್ವಾದಾ' ಎಂದರೆ
ಅನುಕ್ರಮವಾಗಿ ಗುರು ಲಘು ಪುತಗಳು ಎಂದರ್ಥ. ಆ ತಾಳಗಳು ಗುರುವಿನಿಂದ
ಆರಂಭವಾಗುವುದರಿಂದ 'ಗುರ್ವಾದ್ಯಾ' ಎಂದು ಹೇಳಿರುವುದಾಗಿದೆ. ಆ ಶುದ್ಧತಾಳಗಳ
ಗುರು ಲಘು ಪುತಗಳನ್ನು ತುಂಡು ತುಂಡು ಮಾಡಿ ದೇಶೀತಾಳಗಳಲ್ಲಿಟ್ಟಿರುವುದರಿಂದ
ಅಥವಾ ಆ ಲಘು ಗುರು ಪುತಗಳ ಖಂಡರೂಪಗಳೆ ಈ ತಾಳಗಳಲ್ಲಿ ಹೆಚ್ಚಿರು
ವುದರಿಂದ ಪುರಾತನರು ಇವಕ್ಕೆ ಖಂಡತಾಲಗಳೆಂಬ ಹೆಸರು ಕೊಟ್ಟರು ಎಂದು ಇದರ
ತಾತ್ಪರ್ಯ. ಲಘು ಗುರುಗಳು ತುಂಡಾಗುವುದು ಎಂದರೆ ಹೇಗೆ ಎಂಬ ವಿಚಾರವು
ಲಕ್ಷಣಗ್ರಂಥಗಳಲ್ಲಿ ಕೊಟ್ಟಿರುವ ಮಾರ್ಗ ದೇಶೀ ತಾಳಗಳ ಲಭ್ಯಾದಿ ಲಕ್ಷಣಗಳ
ಪರಿಶೀಲನದಿಂದ ತಿಳಿಯುವುದು, ಸಂಕ್ಷೇಪವಾಗಿ ಆ ತಾಳಲಕ್ಷಣಗಳು ಹೀಗಿವೆ-
ಗೀತಕ್ಕೆ ಒಂದು ವ್ಯವಸ್ಥಿತವಾದ ಕಾಲನಿಯಮವನ್ನು ವಿಧಿಸುವುದು ತಾಳ. ಲಘು
ಗುರುಗಳೇ ತಾಳದ ಪ್ರಧಾನ ಘಟಕಗಳು, ಗಣನೆಯಲ್ಲಿ ಪುತ ಎಂಬುದಿದ್ದರೂ ತಾಳದ್ದ
ಕ್ರಿಯಾನಿರೂಪಣದಲ್ಲಿ ಪುತವನ್ನು ಗುರು ಲಘುವಾಗಿ ವಿಂಗಡಿಸುವುದು ಕ್ರಮ.
ತಾಳದಲ್ಲಿ ಕಾಲಗಣನೆಗೆ ಮೂಲಾಧಾರವಾಗಿ ಕಲ್ಪಿಸಿಕೊಂಡ ಪ್ರಮಾಣಕಾಲವು ಯಾವುದೋ
ಅದಕ್ಕೆ ಲಘು ಎಂಬ ಸಂಜ್ಞೆ, ಮಾತ್ರೆ, ಕಲೆ ಎಂದೂ ಲಘುವನ್ನು ಕರೆಯುವ ರೂಢಿಯಿದೆ.
ಈ ಲಘುವಿನ ಇಮ್ಮಡಿಯಷ್ಟು ಕಾಲಪ್ರಮಾಣವು ಗುರು, ಲಘುವೇ ಮಾರ್ಗತಾಳದಲ್ಲಿ
ಕನಿಷ್ಠತಮವಾದ ಕಲಾಕಾಲ ಎಂಬ ಲೆಕ್ಕ, ಚಚ್ಚತ್ರುಟಾದಿ ಶುದ್ಧ ತಾಳಗಳಲ್ಲಿ ಈ
ಲಘುವಿನ ಪ್ರಮಾಣವು ಐದು ನಿಮಿಷಗಳಷ್ಟು ಅಥವಾ ಐದು ಪ್ರಸ್ವಾಕ್ಷರಗಳನ್ನು
ಉಚ್ಚರಿಸಲಿಕ್ಕೆ ಎಷ್ಟು ಸಮಯವು ಬೇಕಾಗುವುದೋ ಅಷ್ಟು ಎಂಬ ನಿಯಮ.
(ಛಂದಸ್ಸಿನಲ್ಲಿಯಾದರೆ ಸ್ವಾಭಾವಿಕವಾದ ಒಂದು ಪ್ರಸ್ವಾಕ್ಷರೋಚ್ಚಾರಕಾಲವು ಲಘುವಿನ
ನಿಯತಪ್ರಮಾಣ.) ಈ ಲಘು ಪ್ರಮಾಣದಿಂದಲೇ ಗುರು ಪುತಗಳ ಕಲ್ಪನೆ.
ಚಚ್ಚತ್ತುಟಾದಿ ಶುದ್ಧ ತಾಳಗಳಲ್ಲಿ ಗುರುವಿಗೂ ಒಂದು ಕಲೆ ಎಂಬ ವಿಶೇಷ ಸಂಜ್ಞೆ ಇದೆ.
೧.ಅಧಿಕೃಮಿಹ ದೃಶ್ಯತೇ ಎಂದಿರುವುದರಿಂದ ನಿಜಪ್ರಮಾಣದ ಲಘು ಗುರುಗಳ
ಸಮ್ಮಿಶ್ರಣವೂ ಕೆಲವು ದೇಶೀತಾಳಗಳಲ್ಲಿ ಕ್ವಾಚಿತವಾಗಿ ಪ್ರಯೋಗದಲ್ಲಿದೆ ಎಂಬ ಅಭಿಪ್ರಾಯವೂ ಇಲ್ಲಿ ಗಮ್ಯವಾಗಿದೆ.
೨. ನಾಟ್ಯಶಾಸ್ತ್ರ ಅ. ೩೧ ಶ್ಲೋ. ೩೯, ೪೦ ಅಭಿವನ ಗುಪ್ತ ವ್ಯಾಖ್ಯಾನ.
೩. ಯಾ ಲೌಕಿಕೀ ಕಲಾ ಕಾಷ್ಠಾ ನಿಮೇಷಶ್ಚತಾಬುದ್ಧಃ ನ ಸಾ ತಾಲಕಲಾಜ್ಞೆಯಾ
ಹ್ಯನೈ ಷಾ ತಾಲಗಾ ಕಲಾ|| ಭ ನಾ. ತಾಲಾಧ್ಯಾಯ ಶ್ಲೋ. ೨.