ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸೂಡ - ಸೂಳಾದಿ - ಸಾಲಗ / ೨೫೧

ಈ ಲೆಕ್ಕದಲ್ಲಿ ಏಕಕಲ, ದ್ವಿಕಲ, ಚತುಷ್ಕಲ ಎಂದು ಈ ತಾಳವು ಮೂರು ವಿಧ. ಎರಡು ಗುರು, ಒಂದು ಲಘು, ಒಂದು ಪುತ ಕ್ರಮವಾಗಿ ಇಷ್ಟು ಸೇರಿದರೆ ಅದು ಏಕಕಲ ಚಚ್ಚತ್ರುಟ, (SSIS) ಇದರ ಎರಡರಷ್ಟು ಕಲಾ ಪ್ರಮಾಣವಿರುವುದು ದ್ವಿಕಲ ನಾಲ್ಕರಷ್ಟಾದರೆ ಚತುಷ್ಕಲ. ಚಾಚಪುಟವೆಂಬ ತ್ರಿಶ್ರತಾಳವು ಒಂದು ಗುರು, ಎರಡು ಲಘು, ಆ ಮೇಲೊಂದು ಗುರು (SIIS) ಇವುಗಳಿಂದಾಗುತ್ತದೆ. ಇದರಲ್ಲಿ ಮೇಲೆ ಹೇಳಿದ ರೀತಿಯಲ್ಲಿ ಕಲಾಕಾಲವೃದ್ಧಿಯಿಂದ ಯಥೋತ್ತರವಾಗಿ ಆರು ಭೇದಗಳಿವೆ. ಈ ಚತುರಸ್ರ ಮತ್ತು ತ್ರಿಶ್ರತಾಳಗಳು ಒಂದಕ್ಕೊಂದು ಸೇರಿರುವ ಮಿಶ್ರತಾಳಭೇದಗಳು ಹಲವಿವೆ. ಈ ತಾಳಗಳನ್ನೆಲ್ಲಾ ಚಿತ್ರ, ವಾರ್ತಿಕ, ದಕ್ಷಿಣ ಎಂಬ ಮಾರ್ಗಭೇದಗಳಲ್ಲಿ ಕ್ರಮವಾಗಿ ೨-೪-೮ರಷ್ಟು ಕಾಲವೃದ್ಧಿಯಿಂದ ಪ್ರಯೋಗಿಸಬೇಕೆಂಬ ವಿಧಿಯಿದೆ. ಹೀಗೆ ಒಂದೊಂದು ಆವರ್ತದಲ್ಲಿ ಅಕ್ಷರಕಾಲಗಳು ಶತಸಂಖ್ಯೆಯಲ್ಲಾಗುವುದರಿಂದ ಅವಧಾನಾರ್ಥವಾಗಿ ಆ ತಾಳಗಳನ್ನು ಪಾದಭಾಗಗಳಾಗಿ ಕಲ್ಪಿಸಿಕೊಂಡು ಒಂದೊಂದು ಪಾದಗಳಿಗೂ ಕೈಗಳನ್ನು, ಕೆಳಗೆ, ಮೇಲೆ, ಎಡಕ್ಕೆ, ಬಲಕ್ಕೆ, ಮುಚ್ಚಿ, ಬಿಚ್ಚಿ ಮಾಡುವ ಪ್ರವೇಶ ಆವಾಪ ವಿಕ್ಷೇಪಾದಿ ಹಸ್ತಕ್ರಿಯೆಗಳಿಂದಲೂ ಅಂಗುಲಿವಿಕಲ್ಪನ ಕ್ರಮದಿಂದಲೂ, ಶಂಪಾ, (ಶಮ್ಯಾ) ತಾಳ, ಸನ್ನಿಪಾತಾದಿ ಶಬ್ದಕ್ರಿಯೆಗಳಿಂದಲೂ ಎರಡೂ ಕೈಗಳಿಂದ ತಾಳನಿರೂಪಣವನ್ನು ಮಾಡಬೇಕಾಗಿತ್ತು. ಮಾರ್ಗಪದ್ಧತಿಯ ಜಾತ್ಯಾದಿ ಶುದ್ಧ ಸೂಡ ಗಳನ್ನು ಇಷ್ಟೊಂದು ದೀರ್ಘಕಾಲದ ತಾಳಗಳಲ್ಲಿ ಈ ಶಾಸ್ರೋಕ್ತ ನಿಯಮಕ್ಕೆ ಒಂದಿಷ್ಟೂ ಹೆಚ್ಚು ಕಡಮೆಯಿಲ್ಲದೆ ವೇದಮಂತ್ರಗಳಂತೆ ಸಾವಧಾನವಾಗಿ ಹಾಡುವುದು ಕ್ರಮ. ಶುದ್ಧ, ಮಾರ್ಗ, ಗಾಂಧರ್ವ ಎಂಬ ಹೆಸರಿರುವುದು ಇದಕ್ಕೇ ಆಗಿದೆ.
ದೇಶೀಯ ಸಂಪ್ರದಾಯದಲ್ಲಿ ತಾಳಗಳು ಇಷ್ಟೊಂದು ದೀರ್ಘವೂ, ಜಟಿಲವೂ ಆಗಿರಲಿಲ್ಲ. ಅಂತೆಯೇ ತಾಳನಿರೂಪಣೆಗೆ ಮಾರ್ಗತಾಳಗಳಲ್ಲಿ ವಿಧ್ಯುಕ್ತವಾಗಿರುವಂತ ಹಸ್ತಾಂಗುಲಿವ್ಯಾಪಾರಗಳೂ ಬೇಕಾಗಿರಲಿಲ್ಲ. ದೇಶೀಯ ಪ್ರಬಂಧಗಳನ್ನು ಹಾಡುವಾಗ ಕಂಚಿನ ತಾಳದ ಪೆಟ್ಟುಗಳಿಂದ ತಾಳ ನಿರೂಪಣೆ ಮಾಡುತ್ತಿದ್ದುದು ಕ್ರಮ. ಲಘು ಗುರು ದ್ರುತಗಳ ಸ್ಥಾನಗಳಲ್ಲೇ ಬೀಳುವ ಆ ಘಾತಗಳ ನಾದದಿಂದ ರಂಜನೆಯಾಗಲು ಕಾಲಾಂತರಗಳು ಎಷ್ಟು ಪ್ರಮಾಣಗಳಲ್ಲಿರುವುದು ಉಚಿತವೋ ಅಷ್ಟಕ್ಕೇ ಮಿತವಾದ ಲಘ್ಚಾದಿ ಖಂಡಗಳಿಂದ ದೇಶೀತಾಳಗಳ ರಚನೆಯಾಗಿದೆ. ಶಾರ್ಙ್ಗದೇವನು ಕೊಟ್ಟಿರುವ ಲಕ್ಷಣವೇ ಇದನ್ನು ಹೇಳುತ್ತದೆ.

ದೇಶೀತಾಲಸ್ತು ಲಫ್ಯಾದಿ ಮಿತಯಾ ಕ್ರಿಯೆಯಾ ಮತಃ
ಯಥಾಶೋಭಂ ಕಾಂಸ್ಯತಾಲ ಧ್ವನನಾದಿಕಯಾ ಮತಃ (ಯುತಃ) || ೨೩೬ ||


೧. ನಾಟ್ಯಶಾಸ್ತ್ರ ಸವ್ಯಾಖ್ಯಾನ ತಾಳಾಧ್ಯಾಯ, ಸಂ. ರ. ತಾಳಾಧ್ಯಾಯ-ಮಾರ್ಗ ತಾಳ ಪ್ರಕರಣ.
೨. 'ದೌಲೌದ್ವಿತೀಯಕಃ; ಲೋದ್ರುತೋಪ್ರತಿತಾಲ, ಯತಿಲಗೋದ್ರುತೋಲಘು ವಿರಾಮಾಂತ ಲಘನಿಸ್ಸಾರುಕಃ ಲೋದ್ರುತೋಪ್ರತಿತಾಲ, ಲಪ್ಪಾದಿತಾಲಃ ಲೋಕೇ ಸೌರಾಸ ಇತ್ಯಭಿಧೀಯತೇ, (ಸಂ. ರ.) ದ್ರುತೇನತ್ಯೇಕತಾಲಿಕಾ, ತಾಲಃ ವಿರಾಮಾಂತದ್ರುತೌಲಭ್ಯ, ಇತ್ಯಾದಿ (ಸಂ. ರ.)