ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೨೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೨ /ಕುಕ್ಕಿಲ ಸಂಪುಟ

ಮಾರ್ಗ ತಾಳಗಳಲ್ಲಿರುವುದಕ್ಕಿಂತ ಭಿನ್ನವಾದ ಕ್ರಮವಿದು ಎಂಬ ವಿಶೇಷ ಸೂಚನೆಗಾಗಿ ಈ ಶ್ಲೋಕದಲ್ಲಿ 'ದೇಶೀ ತಾಲಸ್ತು' ಎಂಬ 'ತು'ಕಾರವನ್ನು ಪ್ರಯೋಗಿಸಿದ್ದಾಗಿದೆ. ಮಾರ್ಗತಾಲಲಕ್ಷಣದಲ್ಲಿ ಲಫ್ಯಾದಿಗಳ ಕಾಲಪ್ರಮಾಣದ ಕುರಿತು ಹೇಳಿರುವ ಇದೊಂದು ಶ್ಲೋಕವೂ ಅದನ್ನು ಸಮರ್ಥಿಸುತ್ತದೆ-
ಪ೦ಚಲಘ್ವುಕ್ಷರೋಚ್ಚಾರಮಿತಾ ಮಾತ್ರೇಹ ಕಥ್ಯತೇ |
ಅನಯಾ ಮಾತ್ರಯಾತ್ರಸ್ಯಾಲ್ಲಘುಗುಾದಿ ಕಲ್ಪನಾ ||
ಐದು ಲಕ್ಷರಗಳನ್ನು (ಇದು ಛಂದಸ್ಸಿನ ಲಘು, ಒಂದು ಪ್ರಸ್ವಾಕ್ಷರ ಎಂದರ್ಥ) ಉಚ್ಚರಿಸುವಷ್ಟು ಕಾಲಕ್ಕೆ ಒಂದು ಮಾತ್ರೆ ಎಂಬ ನಿಯಮವಿರುವುದು ಮಾರ್ಗತಾಲಗಳಲ್ಲಿ ಮಾತ್ರ, ಈ ಲಘು ಪ್ರಮಾಣದಿಂದ ಗುರು ಪುತಗಳ ಕಾಲವನ್ನು ನಿರ್ಣಯಿಸುವುದೆಂಬ ವಿಧಿಯೂ ಮಾರ್ಗತಾಳಕ್ಕೆ ಮಾತ್ರ ಅನ್ವಯಿಸುವುದು ಎಂಬುದನ್ನು ಸ್ಪಷ್ಟಪಡಿಸಲಿಕ್ಕಾಗಿಯ ಈ ಶ್ಲೋಕದಲ್ಲಿ ಇಹ, ಅತ್ರ ಎಂಬ ಪದಗಳನ್ನು ಕುರಿತಾಗಿ ಪ್ರಯೋಗಿಸಿರುವು ದೆಂಬುದರಲ್ಲಿ ಸಂದೇಹವಿಲ್ಲ.
ಹೀಗೆ ಮಾರ್ಗ ತಾಳದಲ್ಲಿರುವಂತೆ, ದೇಶೀತಾಳದಲ್ಲಿ ಲಘುವಿಗೆ ಇಂತಿಷ್ಟೇ ಎಂದು ನಿಯತವಾದ ಒಂದು ಕಾಲಪ್ರಮಾಣವಿಲ್ಲ. ಇಷ್ಟ ಬಂದಷ್ಟು ಅಕ್ಷರಕಾಲವನ್ನು ಲಘು ಎಂದೆಣಿಸುವ ಕ್ರಮವು ಪರಂಪರೆಯಿಂದ ನಡೆದುಬಂದಿದೆ. ಅದೂ ಎಲ್ಲ ತಾಳಗಳಲ್ಲಿ ಒಂದೇ ಪ್ರಮಾಣದಲ್ಲಿರಬೇಕೆಂಬ ನಿಯಮವೂ ಇಲ್ಲ. ಲಘುವಿನ ಒಂದೇ ಪ್ರಮಾಣವನ್ನು ಆಧರಿಸಿಯೇ ಗುರುವಿನ ಗಣನೆ ಮಾಡುವುದೆಂಬ ನಿಯಮವೂ ಇರುವುದಿಲ್ಲ. ದೇಶೀತಾಳದಲ್ಲಿ ದ್ರುತವೂ ಇದೆ. ಇದೂ ಹಾಗೆಯೆ, ಲಘುವಿನ ಅರ್ಧದಷ್ಟೆ ಇರುವುದು ಎಂಬ ನಿಯಮವಿಲ್ಲ. ಲಘುವಿನಿಂದ ಚಿಕ್ಕದು ದ್ರುತ, ದೊಡ್ಡದು ಗುರು ಎಂಬಷ್ಟೇ ಗಾತ್ರಪ್ರಮಾಣವಿರುವುದು. ಹೀಗೆ ಗುರುಲಘ್ರಾದಿಗಳು ನಾನಾ ವಿಧವಾಗಿರುವುದರಿಂದ ದೇಶೀತಾಳಗಳಲ್ಲಿ ಅಗಣಿತವೆಂಬಷ್ಟು ಭೇದಗಳಾಗಿವೆ. ಇದನ್ನೇ ಶಾರ್ಙ್ಗದೇವನೂ ಹೇಳುತ್ತಾನೆ- 'ದ್ರುತಾದಿ ರಚನಾಭೇದಾತ್ತಾಲಭೇಪ್ಯನೇಕಧಾ' ಎಂದು. ಇದರ


೧. ಈ ದ್ರುತಲಘುಗುರುಗಳಿಗೆ ಸ್ವಲ್ಪ ಕಾಲವನ್ನು 'ವಿರಾಮ' ಎಂದು ಸೇರಿಸಿ ಅವುಗಳ
ಕಾಲಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡುವುದೂ ಇದೆ: (ಸಂ. ರ. ತಾಳಾಧ್ಯಾಯ,
ಶ್ಲೋ. ೨೬೧. ಕಲ್ಲಿನಾಥನ ವ್ಯಾಖ್ಯಾನ)
೨. ನಾನ್ಯದೇವನು ಖಂಡತಾಳಗಳನ್ನು ಭಂಗತಾಲಗಳೆಂದು ಕರೆದಿದ್ದಾನೆ. ಚಚ್ಚತ್ಪುಟಾದಿ
ತಾಳಗಳ ಗುರುಲಘುಗಳು ಭಂಗವಾಗುವ ಕ್ರಮವನ್ನು ಹೀಗೆ ಹೇಳಿದ್ದಾನೆ :

ಏತೇ ಯದಾ ವಿಭಜ್ಯಂತೇ ಗುರುದ್ರುತಲಘುಪ್ಲುತೈಃ |
ತದಾ ಭಂಗೋ ಭವೇಜ್ಞಾತಿರುಪಭಂಗೋ ದ್ವಿಸಂಭವಃ ||
ನ್ಯೂನಾಧಿಕಾದ್ಬವೇದ್ಯತ್ರ ಭಂಗಸ್ತುವಿಗತಕ್ರಮಃ |
ವಿಭಂಗಸ್ತು ಸಮಾಯೋಗಾ... ವಿಲಯೋಮತಃ |
ಏತೇಷಾಮಂಶಮಾತ್ರಾಪಿ ಅಜ್ಞಾನಾತ್ಪರಿಕಲ್ಪನಾ ||
ದ್ದೇಶ್ಯಾಂತಾಲತ್ವಮಾಯಾತಾಃ ಕಶ್ಚ್ಯಪಾದೇಶ್ಚಸಮ್ಮತಃ |
ಭರತಭಾಷ್ಯ-ದೇಶೀಗೀತತಾಳಾಧ್ಯಾಯದಲ್ಲಿ ದೇಶೀತಾಲ ಲಕ್ಷಣ (Folio No.176-177)