ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೮ / ಕುಕ್ಕಿಲ ಸಂಪುಟ

ಗ್ರಾಮಭೇದಗಳಾದರೆ ಶ್ರುತಿಗಳ ಉತ್ಕರ್ಷಾಪಕರ್ಷದಿಂದಲೇ ನಿಯತವಾದುವು. ಆದ್ದರಿಂದ ಆ ಶ್ರುತಿಗಳನ್ನು ಮುಂದೆ ಪ್ರಸ್ತಾರದಲ್ಲಿ ಎಂದರೆ ಸ್ವರ ಮಂಡಲ ಪ್ರಸ್ತಾರ ದಲ್ಲಿ ತೋರಿಸಲಾಗುವುದು-

(ಅಥ ಮಧ್ಯಮಗ್ರಾಮಃ | ಶ್ರುತಯಸ್ಕತ್ರಯಥಾಹ ಭರತ: 1-) (ಯದಾನ್ಯೂನ್ಯವಿಪರ್ಯಸ್ನೇಶ್ರುತೀಪಂಚಮಧ್ಯವತಾ ತದಾತಂ ಮಧ್ಯಮಗ್ರಾಮಂದ್ರವದಂತಿ ಮನೀಷಣ: || ೬೦ || ಎಂದು ಹೇಳಿ ದೀಪ್ತಾಯತಾದಿಶ್ರುತಿಗಳೂ ಗ್ರಾಮದಲ್ಲಿ ವ್ಯತ್ಯಾಸವಾಗುವುದನ್ನು ಹೀಗೆ ಹೇಳುತ್ತಾನೆ.-

ಸಂದೀಪಿನ್ಯಾಭಿಧಾ ಯತಾವತಂತ್ರಜಿತಿಂಶ್ರುತಿ: ಪಂಚಮಶ್ರುತಿಸ್ತನ ಮಧ್ಯಮಗ್ರಾಮ ಉಚ್ಯತೇ || ಆಯತಾಯಾಃ ಪ್ರಭೇದೋ ಯಃ ಸಂದೀಪಿನ್ಯಾಭಿಧಃ ಸ್ಮೃತಃ | ಪಂಚಮಾನ್ಮಧ್ಯಮಗ್ರಾಮೋ ಸದೈವತಮನುವ್ರಜೇತ್ |||| (ಭ. ಭಾ. ಪು ೭೮) ಸಂದೀಪಿನಿ ಎಂಬುದು ಪಂಚಮದ ಪಂಚಮ ಸ್ವರಕ್ಕೆ ಹೇಳಿದ ಕ್ಷಿತಿ, ರಕ್ತಾ, ಸಂದೀಪಿನೀ, ಆಲಾಪಿನೀ ಎಂಬ ಕ್ರಮ ಶ್ರುತಿಗಳಲ್ಲಿ ಮೂರನೆಯ ಶ್ರುತಿಯಾಗುವುದು. ಉಚ್ಚನೀಚ ಶ್ರುತಿಗಳಲ್ಲಾದರೆ ಮಧ್ಯಮಗ್ರಾಮದಲ್ಲಿ ಪಂಚಮವು ಒಂದು ಶ್ರುತಿ ಕೆಳಕ್ಕಿಳಿಯುವುದರಿಂದ ಅದರ ನಾಲ್ಕನೇ ಶ್ರುತಿಯೇ ಧೈವತಕ್ಕೆ ಸೇರುವುದಾಗಿದೆಯಷ್ಟೇ? ನಾನ್ಯದೇವನು ಗಾಂಧಾರ ಗ್ರಾಮವನ್ನೂ 'ಆಗಮೋಕ್ತ ಪ್ರಕಾರ' ಹೇಳಿದ್ದಾನೆ. ಅಲ್ಲಿಯೂ ಹೆಚ್ಚು ಕಡಿಮೆಯಾಗುವ ಉಚ್ಚನೀಚ ಶ್ರುತಿಗಳ ಕ್ರಮಸಂಖ್ಯೆಯೂ ದೀಪ್ತಾಯತಾದಿಗಳ ಕ್ರಮಸಂಖ್ಯೆಯೂ ಬೇರೆ ಬೇರೆ ಇರುತ್ತವೆ.

ಸ್ವರಸಾಧಾರಣಪ್ರಕರಣದಲ್ಲಿಯೂ ಇದೇ ಗಾಂಧಾರ ಮಧ್ಯಮದಿಂದ ಗಾಂಧಾರಕ್ಕೂ ಷಷ್ಟದಿಂದ ನಿಷಾದಕ್ಕೂ ಸೇರುವ ಈ ಎರಡೆರಡು ಶ್ರುತಿಗಳಲ್ಲಿ ಎರಡು ವಿಧದ ಶ್ರುತಿಗಳು ಸಮಾನ ಸಂಖ್ಯೆಯವಲ್ಲ. (ಭ. ಭಾ. ಪುಟ ೧೦೮)

ಅದೂ ಅಲ್ಲದೆ ಈತನು ದೀಪಾದಿಶ್ರುತಿಗಳಿಗೆ ಬೇರೆ ಬೇರೆ ಹಾಸ್ಯಶೃಂಗಾರಾದಿ ರಸಗಳಲ್ಲಿ ಯಥೋಚಿತವಾದ ವಿನಿಯೋಗವನ್ನೂ ಹೇಳಿರುವುದನ್ನೂ ಲಕ್ಷಿಸಬಹುದು (ಭ. ಭಾ. ಪು. ೧೦೭)

ಇದನ್ನೆಲ್ಲ ಪರಿಶೀಲಿಸುವಾಗ ನಾನ್ಯದೇವನು ಈ ದೀಪಾದಿ ಶ್ರುತಿಗಳನ್ನು ಆ ಉಚ್ಚ ನೀಚ ಶ್ರುತಿಗಳಿಂದ ಭಿನ್ನವಾಗಿರುವ ಸ್ವರಗಳೆಂದೇ ಭಾವಿಸಿದ್ದಾನೆ ಎಂಬುದರಲ್ಲಿ ಸಂದೇಹವುಳಿಯುವಂತಿಲ್ಲ. ಈ ಈ ಶ್ರುತಿಗಳೂ ಸಂಖ್ಯೆಯಲ್ಲಿ ೨೨ ಎಂದು ಆತನು ಹೇಳಿರುವುದರಿಂದ ಪ್ರಥಮದರ್ಶನಕ್ಕೆ ಮಾತ್ರ ಇವು ಅವೇ ಶ್ರುತಿಗಳು ಎಂಬ ಭ್ರಾಂತಿಗೆ ಆಸ್ಪದವಾಗಿರುವುದು ಹೊರತು ಯಥಾರ್ಥಕ್ಕೆ ನಾನ್ಯದೇವನು ಅವೆರಡೂ ಭಿನ್ನಗಳೆಂದೇ ಪರಿಗಣಿಸಿದ್ದಾನೆ . ಹಾಗೂ ಭ್ರಾಂತಿಗೆ ಆಸ್ಪದವಾಗದಂತೆ ನಿರೂಪಿಸಿದ್ದಾನೆ.

ಇದೊಂದನ್ನೂ ಲಕ್ಷಿಸದೆ ಅಥವಾ ಕಡೆಗಣಿಸಿ ಶ್ರೀ ಸತ್ಯನಾರಾಯಣರು ತಾವು ತಪ್ಪು ತಿಳಿದುಕೊಂಡು ಅಲ್ಲದಸಲ್ಲದ ಊಹಾಪೋಹಗಳಿಂದ ಏನೇನೋ ಕಲ್ಪಿಸಿರುವುದಲ್ಲದೆ