ಆಸಕ್ತಿಯುಳ್ಳ ಜನಸಾಮಾನ್ಯರಲ್ಲಿ ತಪ್ಪು ತಿಳಿವಳಿಕೆಗೆ ಅವಕಾಶ ಮಾಡಿಕೊಟ್ಟದ್ದು
ಸರ್ವಥಾ ಆದರಣೀಯವಲ್ಲ.
ನಾಟ್ಯಶಾಸ್ತ್ರದಲ್ಲಿ ಈ ಶ್ರುತಿಗಳನ್ನು ವರ್ಣಾಲಂಕಾರಲಕ್ಷಣದೊಂದಿಗೆ ಹೇಳಿರುವುದು
'ಪ್ರಸಕ್ತವಾಗಿ ಕಾಣುವುದಿಲ್ಲ. ಅಲ್ಲದೆ ಇಡೀ ಗ್ರಂಥದಲ್ಲಿ ಅವುಗಳ ಉಪಯೋಗವಾಗಲೀ ನಾವು ನಿರ್ದೇಶವಾಗಲೀ ಬೇರೆಲ್ಲಿಯೂ ಕಾಣಸಿಗುವುದಿಲ್ಲ ಎನ್ನುತ್ತಾರೆ. (ಸಂ. ರ.ವ್ಯಾ. ಪು ೧೯೯).
ಧ್ರುವಾಗಾನದಲ್ಲಿ ಎಂದರೆ ಶೋತೃರಂಜನೆಯೇ ಮುಖ್ಯೋದ್ದೇಶವಾಗಿಯುಳ್ಳ
ಗಾಂಧರ್ವಾತ್ ಭಿನ್ನವಾದ ಗಾನದಲ್ಲಿ ವರ್ಣಾಲಂಕಾರಗಳನ್ನು ಈ ಶ್ರುತಿಗಳಲ್ಲಿ
ಪ್ರಯೋಗಿಸಬೇಕು. ಹಾಗೂ ಈ ಶ್ರುತಿಗಳೇ ಅಲಂಕಾರಗಳಾಗಿ ಪರಿಣಮಿಸುತ್ತವೆ ಎಂಬ
ಭರತೋದ್ದೇಶವನ್ನು ಅಭಿನವಗುಪ್ತನು ಸೋದಾಹರಣವಾಗಿ ವಿವರಿಸಿರುವಾಗ ಸತ್ಯ
ನಾರಾಯಣರ ಮಾತಿನಲ್ಲಿ ನಿಜಾಂಶ ಕಾಣುವುದಿಲ್ಲ. ಪ್ರಸನ್ನಾದಿ, ಪ್ರಸನ್ನಾಂತ, ಸಮ,
ಊರ್ಮಿ, ಬಿಂದು, ಅಪಾಂಕ ಇತ್ಯಾದಿ ಅಲಂಕಾರಗಳಿಗೆ ಭರತನು ಕೊಡುವ 'ಕ್ರಮ
ಶೋ ದೀಪಿತೋಯ: ಸ್ಮಾತ್ ಪ್ರಸನ್ನಾದಿ ಸಕಥ್ಯತೇ' ಇತ್ಯಾದಿ ಲಕ್ಷಣಗಳಿಂದ
ದೀಪ್ತಾಯತಾದಿ ಶ್ರುತಿಸಂಬಂಧವು ವ್ಯಕ್ತವಾಗುವುದೆಂಬುದನ್ನು ಅಭಿನವಗುಪ್ತನು
ಸಪ್ತಪಂಚವಾಗಿ ನಿರೂಪಿಸಿರುತ್ತಾನಷ್ಟೆ?- ದೀಪನ ಎಂದರೆ ಸ್ವರವನ್ನು ಹೆಚ್ಚು ಪ್ರಕಾಶ
ಗೊಳಿಸುವುದು ಅಥವಾ ಹೆಚ್ಚು ಶಕ್ತಿಯುತ ಹಾಗೂ ಸ್ಪುಟಪ್ರತಾಪವುಳ್ಳದ್ದಾಗಿ
ಮಾಡುವುದು; ಪ್ರಸಾದ, ಪ್ರಸನ್ನ ಎಂದರೆ ಮೃದುವಾದ್ದಾಗಿ ಮಾಡುವುದು ಎಂಬಿತ್ಯಾದಿ
ಅರ್ಥಗಳನ್ನು ವಿವರಿಸಿರುತ್ತಾನೆ. ಈ ಶ್ರುತಿಭೇದಗಳೇ ಸಂಗೀತದಲ್ಲಿ ವರ್ಣಾಲಂಕಾರ
ಗಳಾಗಿ ಪರಿಣಮಿಸಿದ್ದೆಂಬುದನ್ನು ಶಾರ್ಙ್ಗದೇವಾದಿಗಳು ನಿರೂಪಿಸಿರುವ ಅಲಂಕಾರ
ಲಕ್ಷಣಗಳಿಂದಲೂ ಅನುಮಾನಿಸಬಹುದು. ಇದಕ್ಕೆ ಸಂಗೀತರತ್ನಾಕರದಲ್ಲಿ ವರ್ಣಾ
ಲಂಕಾರ ಪ್ರಕರಣದ ಕೆಲವೊಂದು ಲಕ್ಷಣಗಳನ್ನು ಪರಿಶೀಲಿಸಬಹುದು. (ಉದಾ: ಮಂದ್ರ:
ಪರಸ್ತತಸ್ತಾರಃ ಪ್ರಸನ್ನೋ ಮೃದುರಿತ್ಯಪಿ | ಮಂದ್ರಸ್ತಾರಸುದೀಪ್ತಃ ಸ್ಮಾತ್, ದೀಪ್ತೇ
ಪ್ರಸನ್ನಾದ್ಯಂತಃ ಸ್ಯಾತ್; ದೀಪ್ತೋಂ ಕಶ್ಯೇತ್ ಪ್ರತಿಕಲಂ ಪ್ರಸ್ತಾರಃ, ಸ್ಥಿತಾಸ್ಥಿತಾಸ್ವರೈ
ದೀರ್ಘ ಸವಿಸ್ತೀರ್ಣ; (ಇದು ಆಯತಾ ಶ್ರುತಿಯ ಪರಿಣಾಮವಾಗಿರಬಹುದು); ಕಲಾಂ
ಪ್ರಯುಜ್ಯ ಮಂದ್ರಾಚೇರ್ದ್ವಿರುಕ್ತೋರ್ಧ್ವ ಸ್ವರಾತಂ, ಕಲಾಂಮಾಂತ್ರಿ ಸ್ವರಂಗೀತಾ,
ಅವರುಹ್ಮ್ಯೆಕಂ ಪರಾಃ ಕಲಾಃ, ಕಲಾದ್ವಿತ್ರಿಚತುಃ ಸ್ವರಾಃ, ಕಲಾತ್ರಯೇಣೋತ್ತೋಲಂಕಾರಃ
ಕ್ರಮರೇಚಿತಃ ಇತ್ಯಾದಿ).
ನಾಟ್ಯಶಾಸ್ತ್ರದಲ್ಲಿ ಅವುಗಳ ಉಪಯೋಗ ಬೇರೆಲ್ಲಿಯೂ ಕಾಣುವುದಿಲ್ಲ
ಎನ್ನುವುದಕ್ಕೆ ಬೇರೆಲ್ಲಿಯೂ ಅವುಗಳ ಉಪಯೋಗವಿಲ್ಲದಿರುವುದೇ ಕಾರಣ: ಅಲಂಕಾರ
ಗಳಲ್ಲಿ ಮಾತ್ರ ಅವುಗಳ ಉಪಯೋಗವಿರುವುದೆಂದು ಅದರಿಂದಲೇ ಸ್ಪಷ್ಟವಾಗುವು
ದಲ್ಲವೆ?- ಸಂಗೀತ ರತ್ನಾಕರದಲ್ಲಿ ಯಾದರೆ ಶಾರ್ಙ್ಗದೇವನು ಅವುಗಳ ಹೆಸರನ್ನು ಮಾತ್ರ
ಒಂದು ಕಡೆ ಹೇಳಿರುವುದು ಹೊರತು ಬೇರೆಲ್ಲಿಯಾದರೂ ಅವುಗಳ ಹೆಸರನ್ನಾಗಲಿ
ಉಪಯೋಗವನ್ನಾಗಲಿ ಹೇಳಿದಿದ್ದೆಯೆ?
ಆತನು ಸಂಗೀತಶಾಸ್ತ್ರದ ಎಲ್ಲ 'ಪ್ರಮೇಯ'ಗಳನ್ನೂ ಈ ಶ್ರುತಿಜಾತಿಗಳಲ್ಲಿ
ವಿವರಿಸಿದ್ದಾನೆ ಎಂದು ರಾ. ಸತ್ಯನಾರಾಯಣರು ಹೇಳುವ ಮಾತಿನಲ್ಲಿ ಯಾಥಾರ್ಥ
ವೇನಿದೆ ಎಂಬುದನ್ನು ವಾಚಕರೇ ಊಹಿಸಿಕೊಳ್ಳಬಹುದು.
ಪುಟ:ಕುಕ್ಕಿಲ ಸಂಪುಟ.pdf/೩೦೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ
19