ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೦ | ಕುಕ್ಕಿಲ ಸಂಪುಟ

ತೇಮಂದ್ರ ಮಧ್ಯತಾರಭೇದಾಗ್ಯಸ್ಥಾನಭೇದಾತ್‌ತ್ರಿಧಾಮತಾಃ |
ತಪನವಿಕೃತಾ ವಸ್ಥಾದ್ವಾದಶಪ್ರತಿಪಾದಿತಾಃ ||
ಚ್ಯುತೋ ಚ್ಯುತೋ ದ್ವಿಧಾ ಷಡೋದ್ವಿಶ್ರುತಿರ್ವಿ ಕೃತೋಭವೇತ್
ಸಾಧಾರಣೀಕಾಕಲೀಷ್ಟೇ ನಿಷಾದಸ್ಯ ಚ ದೃಶ್ಯತೇ
ಸಾಧಾರಣೀ ಶ್ರುತಿಂ ಪಾಡ್ಚೀಂ ಋಷಭಃ ಸಂಶ್ರಿತೋಯದಾ
ಚತುಃ ಶ್ರುತಿತ್ವಮಯಾತಿತದೈಕೋವಿಕೃತೋ ಭವೇತ್ ||

ಮೇಲೆ ಹೇಳಿದ ಸಪ್ತಸ್ವರಗಳು ಮಂದ್ರ, ಮಧ್ಯ, ತಾರ ಎಂಬ ಸ್ಥಾನಭೇದಗಳ ಕಾರಣದಿಂದ ಮೂರು ವಿಧವಾಗಿ ತಿಳಿಯಲ್ಪಡುತ್ತವೆ. ಆ ಸಪ್ತಸ್ವರಗಳೇ ತಮಗೆ ನಿಯತ ವಾಗಿರುವುದಕ್ಕಿಂತ ಭಿನ್ನ ಸಂಖ್ಯೆಯ ಶ್ರುತಿಗಳನ್ನು ಪಡೆದು ವಿಕೃತ ಸ್ವರಗಳೆಂದಾಗುತ್ತವೆ. ಅಂಥ ವಿಕೃತ ಸ್ವರಗಳು ಹನ್ನೆರಡಿವೆ. ಷಡ್ಜವು ಚ್ಯುತಷಡ್ವವೆಂದೂ ಅಚ್ಯುತ ಷಡ್ವವೆಂದೂ ಎರಡು ವಿಧದಲ್ಲಿ ದ್ವಿಶ್ರುತಿಸ್ವರವಾಗುವುದು. ಮುಂದೆ ಹೇಳಲಾಗುವ ಷಡ್ಡ ಸಾಧಾರಣ ಎಂಬ ವಿಕೃತ ಪ್ರಯೋಗದಲ್ಲಿ ಚ್ಯುತಷಡ್ಜವೆಂದೂ, ಕಾಕಲೀ ನಿಷಾದ ಪ್ರಯೋಗದಲ್ಲಿ ಅಚ್ಯುತ ಷಡ್ವವೆಂದೂ ಹೆಸರು ಪಡೆಯಬಹುದು. ಆ ಷಡ್ಜ ಸಾಧಾರಣ ಕ್ರಮದಲ್ಲಿ ಷಡ್ಜಸ್ವರವು ಒಂದು ಶ್ರುತಿಯಷ್ಟು ಕೆಳಗೆ ಸರಿದು ಅದರ ಸ್ವಸ್ಥಾನಶ್ರುತಿಗಳುಳ್ಳ ವಿಕೃತ ಸ್ವರವಾಗುವುದು. ಮಧ್ಯಮ ಸ್ವರವು ಷಡ್ಜದಂತೆ ಮಧ್ಯಮ ಸಾಧಾರಣ ಪ್ರಯೋಗದಲ್ಲಿ ಮತ್ತು ಅಂತರ ಗಾಂಧಾರ ಪ್ರಯೋಗದಲ್ಲಿ ದ್ವಿಶ್ರುತಿತ್ವವುಳ್ಳ ಎರಡು ವಿಕೃತ ಸ್ವರೂಪ ಗಳನ್ನು ಪಡೆಯುವುದು. ಪಂಚಮ ಸ್ವರವು ಮಧ್ಯಮಗ್ರಾಮದಲ್ಲಿ ತ್ರಿಶ್ರುತಿಸ್ವರ ವಾಗಿಯೂ, ಮಧ್ಯಮ ಸಾಧಾರಣ ಪ್ರಯೋಗದಲ್ಲಿ ಅದೇ ಮಧ್ಯಮಸ್ವರದ ಸ್ಥಾನ ಶ್ರುತಿಯನ್ನು ಪಡೆಯುವುದರಿಂದ ಚತುಃ ಶ್ರುತಿಯಾಗಿಯೂ ಎರಡು ತರದಲ್ಲಿ ವಿಕೃತ ಸ್ವರವೆನ್ನಿಸಿಕೊಳ್ಳವುದು. ಧೈವತವು ಮಧ್ಯಮಗ್ರಾಮದಲ್ಲಿ ಚತುಃಶ್ರುತಿಸ್ವರವಾದ್ದರಿಂದ ವಿಕೃತವೆನ್ನಿಸುವುದು. ನಿಷಾದವು ಕೈಶಿಕ ಎಂಬ ಮೇಲೆ ಹೇಳಿದ ಷಡ್ಜಸಾಧಾರಣ ಕ್ರಿಯೆ ಯಲ್ಲಿ ಮೂರು ಶ್ರುತಿಗಳನ್ನೂ, ಕಾಕಲೀ ಪ್ರಯೋಗದಲ್ಲಿ ನಾಲ್ಕು ಶ್ರುತಿಗಳನ್ನೂ ಪಡೆಯುವುದಾಗಿ ಎರಡುತರದ ವಿಕೃತಭೇದಗಳಾಗುವುದು. ಹೀಗೆ ಷಡ್ಯಾದಿ ಸಪ್ತಸ್ವರಗಳು ಒಟ್ಟಿನಲ್ಲಿ (೨ + ೧ * ೨ + ೨ + ೨ + ೧ + ೨ = ೧೨) ಹನ್ನೆರಡು ವಿಧದ ವಿಕೃತಸ್ಥರ ಗಳಾಗಿಯೂ ಇರುವುವು. ನಿಯತ ಸ್ಥಾನದಲ್ಲಿ ಸ್ಥಿರವಾಗಿರುವ ಷಡ್ವಾದಿ ಸಪ್ತ ಶುದ್ಧ ಸ್ವರ ಗಳಿಗೆ ನಾರದನು ಹೇಳುವ ಸಾದೃಶ್ಯವನ್ನು ಕೊಡುತ್ತಾನೆ-

ಮಯೂರ ಚಾತಕ ಮೃಗ ಕ್ರೌಂಚ ಕೋಕಿಲ ದರ್ದುರಾ:
ಗಜಶ್ಚ ಸಪ್ತ ಷಡ್ವಾದೀನ್‌ ಕ್ರಮಾದುಚ್ಚಾರಯಂತ್ಯಮೀ || ೪೮||

ನವಿಲು, ಚಾತಕ ಪಕ್ಷಿ, ಆಡು, ಕ್ರೌಂಚಪಕ್ಷಿ, ಕೋಗಿಲೆ, ಕಪ್ಪೆ, ಆನೆ ಎಂಬೀ ಏಳು ಪ್ರಾಣಿಗಳು ಕ್ರಮವಾಗಿ ಷಡ್ಜಾದಿ ಸ್ವರಗಳನ್ನು ಉಚ್ಚರಿಸುತ್ತವೆ.
ಹೀಗೆ ಹಿಂದಿನ ಸ್ವರದ ಸ್ಥಾನ ವ್ಯತ್ಯಯಕ್ಕನುಗುಣವಾಗಿಯೂ ಮುಂದಿನ ಸ್ವರ ಸ್ವರೂಪದಲ್ಲಿ ಭಿನ್ನ ಪರಿಣಾಮ ಉಂಟಾಗುವ ರೀತಿಯ ವಿಕೃತ ಭೇದಗಳನ್ನು ಹೇಳಿ, ಗಾನದಲ್ಲಿ ಈ ಸ್ವರಗಳ ಉಚಿತ ಪ್ರಯೋಗಕ್ಕಾಗಿ ವಾದಿಸಂವಾದ್ಯಾದಿ ಅನ್ನೋನ್ಯ ಸಂಬಂಧವನ್ನು ಹೇಳುತ್ತಾನೆ. (ಸ್ವರಾಣಾಮನ್ನೋನ್ಯ ಸ್ವರೂಪಕೃತಂ ಭೇದಮುಕ್ತಾ ಪ್ರಸಂಗಾತ್‌ ಪ್ರಯೋಗಾರ್ಥ೦ ಪ್ರಕಾರ ಭೇದೇನ ತೇಷಾಂ ಚಾತುರ್ವಿಧಂ ದರ್ಶಯತಿ-)