ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ

ಚತುರ್ವಿದಾಃ ಸ್ವರಾವಾದೀ ಸಂವಾದೀ ಚ ವಿವಾದ್ಯಪಿ
ಅನುವಾದೀಚ ವಾದೀ ತು ಪ್ರಯೋಗೇ ಬಹುಲಃ ಸ್ವರ:ǁ ೪೯ ǁ

ಶ್ರುತಯೋದ್ಯಾದಶಾರ್ಪ್‌ವಾ ಯಯೋರಂತರ ಗೋಚರಾ
ಮಿಥಃ ಸಂವಾದಿನ್ ತೌಸ್ಕೋನಿಗಾವನ್ಯ ವಿವಾದಿನೌ ǁ
ರಿಧಯೋರೇವವಾಸ್ಯಾತಾಂ ತೌ ತಯೋರ್ವಾರಿಧಾವಪಿ
ಶೇಷಾಣಾಮಮವಾದಿತ್ವಂ ವಾದೀ ರಾಜಾತ್ರಗೀಯತೇ ǁ
ವಿವಾದೀ ವಿಪರೀತತ್ವಾದ್ದೀರೈರುಕ್ಕೋ ರಿಪೂಪಮ:
ನೃಪಾ ಮತಾನುಸಾರಿತ್ವಾದನುವಾದೀತು ನೃತ್ಯವತ್ ǁ

ವಾದೀ, ಸಂವಾದೀ, ವಿವಾದೀ, ಅನುವಾದೀ ಎಂದು ಸ್ವರಗಳು ನಾಲ್ಕು ವಿಧವಾಗಿವೆ. ಗಾನದಲ್ಲಿ ಯಾವ ಸ್ವರವು ಹೆಚ್ಚು ಸಲ ಪ್ರಯೋಗಕ್ಕೆ ಬರುತ್ತದೆಯೋ ಅದಕ್ಕೆ ವಾದೀ ಎಂಬ ಹೆಸರು. ಯಾವುದಾದರೂ ಎರಡು ಸ್ವರಗಳ ಮಧ್ಯದಲ್ಲಿ ಎಂಟು ಅಥವಾ ಹನ್ನೆರಡು ಶ್ರುತಿಗಳಿದ್ದರೆ ಆ ಸ್ವರಗಳು ಅನ್ನೋನ್ಯ ಸಂವಾದಿಗಳಾಗಿರುತ್ತವೆ. ನಿಷಾದ ಗಾಂಧಾರ ಸ್ವರಗಳು ಇತರ ಸ್ವರಗಳಿಗೆ ವಿವಾದಿಗಳಾಗಿರುತ್ತವೆ. ಅಥವಾ ಹಾಗಲ್ಲ, ಆ ನಿಷಾದ ಗಾಂಧಾರಗಳು ಕ್ರಮವಾಗಿ ಧೈವತ ನಿಷಾದಗಳಿಗೆ ಹಾಗೂ ಗಾಂಧಾರ ನಿಷಾದಗಳು ಋಷಭ ಧೈವತಗಳಿಗೆ ಮಾತ್ರವೇ ವಿವಾದಿಗಳಾಗಿರುತ್ತವೆ. ಹೀಗೆ ವಾದಿ ಸಂವಾದಿ ವಿವಾದಿ ಸ್ವರಗಳನ್ನುಳಿದು ಇತರ ಸ್ವರಗಳೆಲ್ಲ ಅನುವಾದಿ ಸ್ವರಗಳಾಗಿರುತ್ತವೆ. ವಾದೀ ಸ್ವರವನ್ನು ಪ್ರಭುವೆಂದೂ, ಸಂವಾದಿಯು ಅದನ್ನು ಅನುಸರಿಸುತ್ತಿರುವುದರಿಂದ ಆ ಪ್ರಭುವಿನ ಅಮಾತ್ಯನೆಂದೂ, ವಿವಾದಿಸ್ವರವನ್ನು ಶತ್ರುಸದೃಶವಾದ್ದೆಂದೂ, ಪ್ರಭುಸಚಿವರ ಹಿಂದೆ, ಅವರ ಅನುಯಾಯಿಯಾಗಿರುವುದರಿಂದ ಅನುವಾದಿ ಸ್ವರವು ಸೇವಕನಂತಿರುವುದೆಂದೂ ಹೇಳುತ್ತಾರೆ.

ಸ್ವರಗಳ ವಂಶಾದಿ ವರ್ಣನೆ:-

ಗೀರ್ವಾಣಕುಲ ಸಂಭೂತಾಃ ಷಡ್ವಮಧ್ಯಮ ಪಂಚಮಾಃ
ಪಂಚಮಃ ಪಿತೃವಂಶೋತೋ ರಿಧಾವೃಷಿಕುಲೋದ್ಭವǁ ೫೩ ǁ
ನಿಷಾದೋ ಸುರ ವಂಶೋತ್ಸ, ಬ್ರಾಹ್ಮಣಾಃ ಸಮಪಂಚಮಾಃ
ರಿಧೇ ತು ಕ್ಷತ್ರಿಯಾ ಜೇಯಾ ವೈಶ್ಯಜಾತೀ ನಿಗೌ ಮತಾ
ಶೂದ್ರಾವಂತರ ಕಾಕಲ್ಯ ಸ್ವತಾ, ವರ್ಣಾಮ ಕ್ರಮಾತ್
ಪದ್ಮಾಭಃ ಪಿಂಜರಃ ಸ್ವರ್ಣವರ್ಣ: ಕುಂದ ಪ್ರಭೋಸಿತಃ
ಪೀತಃ ಕರ್ಬುರ ಇತ್ಯೇಷಾಂ ಜನ್ಮ ಭೂಮೀರಥ ಬ್ರುವೇ
ಜಂಬೂಶಾಕಕುಶಕ್ರೌಂಚ ಶಾಲ್ಮಲೀ ಶ್ವೇತನಾಮಸು
ದ್ವೀಪೇಷು ಪುಷ್ಕರೇ ವೈ ತೇ ಜಾತಾಃ ಷಡ್ಡಾದಯಃ ಕ್ರಮಾತ್‌
ವಟ್ನರ್ವಧಾಃ ಶಶಾಂಕಶ್ಚ ಲಕ್ಷ್ಮೀಕಾಂತಶ್ಚ ನಾರದಃ
ಋಷಯೋ ದದೃಶುಃ ಪಂಚಷಡ್ವಾದೀನ್ ತುಂಬುರುರ್ಧನೀ
ವಸ್ನಿ ಬ್ರಹ್ಮಸರಸ್ಪತ್ಯ: ಶ್ರೀಶಶರ್ವಗಣೇಶ್ವರಾ
ಸಹಸ್ರಾಂಶುರಿತಿ ಪ್ರೋಕ್ತಾಃ ಕ್ರಮಾತ್‌ ಷಾದಿ ದೇವತಾಃ
ಕ್ರಮಾದನುಷ್ಟಪ್ ಗಾಯತ್ರೀ ತ್ರಿಷ್ಟುಪ್ ಚ ಬೃಹತೀ ತತಃ
ಪಂಕ್ತಿರುಪ್ಟಿಕ್ ಚ ಜಗತೀತ್ಯಾಹುಶ್ಚಂದಾಂಸಿ ಸಾದಿಷ್ಟು