ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೨ / ಕುಕ್ಕಿಲ ಸಂಪುಟ

ಸರೀ ವೀರೇದ್ಭುತೇ ರೌದ್ರೇ ಧೋ ಭೀಭತ್ಸ ಭಯಾನಕೇ
ಕಾರ್ಯಾ ಗನೀ ತು ಕರುಣೇ ಹಾಸ್ಯಶೃಂಗಾರಯೋರ್ಮಪ್ರೌ ǁ

ಸ್ವರಗಳ ವಂಶ, ಜಾತಿ, ರೂಪ, ವರ್ಣ, ಜನ್ಮಸ್ಥಳ, ಋಷಿ, ದೇವತೆ ಛಂದಸ್ಸು, ರಸ ಇವುಗಳನ್ನು ಮೇಲಿನ ಶ್ಲೋಕಗಳಲ್ಲಿ ಹೇಳಲಾಗಿದೆ.

ಇತಿ ಪ್ರಥಮೋಸ್ವರಾಧ್ಯಾಯೇ ತೃತೀಯಂ ನಾದಸ್ಥಾನ ಶ್ರುತಿ ಸ್ವರಪ್ರಕರಣಂ.
ಸ್ವರಗ್ರಾಮಗಳನ್ನು ಹೇಳುತ್ತಾನೆ-
ಗ್ರಾಮಃ ಸ್ವರಸಮೂಹಃ ಸ್ಯಾನ್ಯೂರ್ಛನಾದೇ ಸಮಾಶ್ರಯಃ
ತೌ ದೌ ಧರಾತಲೇ ತತ್ರಸ್ಯಾತ್ ಪಡ್ಡ ಗ್ರಾಮ ಆದಿಮ:ǁ೧ǁ

ದ್ವಿತೀಯೋ ಮಧ್ಯಮಗ್ರಾಮಸ್ತಯೋರ್ಲಕ್ಷಣಮುಚ್ಯತೇ
ಷಡ್ವಗ್ರಾಮಃ ಪಂಚಮೋ ಸ್ವಚತುರ್ಥಶ್ರುತಿ ಸಂಸ್ಕೃತೇǁ೨ǁ

ಸ್ಟೋಪಾಂತ್ಯಶ್ರುತಿ ಸಂಸ್ಕೃಸ್ಮಿನ್‌ ಮಧ್ಯಮಗ್ರಾಮ ಇಷ್ಯತೇ
ಯದ್ವಾಧಃ ಸ್ತ್ರಿ ಶ್ರುತಿ ಷಟ್ಟೇ ಮಧ್ಯಮೇ ತು ಚತುಃ ಶ್ರುತಿಃǁ೩ǁ

'ಮೂರ್ಛನಾದೇ' ಎಂದಿರುವುದರಿಂದ ಗ್ರಾಮವೆಂಬುದು ತಾನ ವರ್ಣಾಲಂಕಾರ ಜಾತ್ಯಾದಿ ಸಮಸ್ತಗಾನ ವಿಧಾನಗಳಿಗೂ ಆಶ್ರಯವಾಗಿರುವ ಸ್ವರಸಮೂಹವೆಂದು ತಿಳಿಯಬೇಕು. ಷಡ್ಡಗ್ರಾಮ ಮಧ್ಯಮಗ್ರಾಮ ಎಂಬ ಎರಡು ಗ್ರಾಮಗಳು ಭೂಲೋಕ ದಲ್ಲಿರುವಂಥವು. ಮೊದಲನೆಯದು ಷಡ್ಡಗ್ರಾಮ, ಎರಡನೆಯದು ಮಧ್ಯಮಗ್ರಾಮ, ಪಂಚಮ ಸ್ವರವು ನಾಲ್ಕನೆಯ ಶ್ರುತಿಯಲ್ಲಿರಲಾಗಿ ಷಡ್ಡಗ್ರಾಮವಾಗುವುದು, ಆ ಪಂಚಮವು ತನ್ನಿಂದಲೇ ಕೆಳಗಿನ ಶ್ರುತಿಯಲ್ಲಿದ್ದರೆ ಮಧ್ಯಮ ಗ್ರಾಮವಾಗುವುದು, ಅಥವಾ ಷಡ್ವಗ್ರಾಮದಲ್ಲಿ ದೈವತವು ಮೂರು ಶ್ರುತಿಗಳ ಸ್ವರವಾದರೆ ಮಧ್ಯಮ ಗ್ರಾಮದಲ್ಲಿ ಅದು ನಾಲ್ಕು ಶ್ರುತಿಗಳ ಸ್ವರವಾಗುವುದು.

ರಿಮಯೋಃ ಶ್ರುತಿಮೇಕ್ಕೆ ಕಾಂ ಗಾಂಧಾರಶ್ಚತ್ಸಮಾಶ್ರಿತಃ
ಪಶ್ರುತಿಂ ಧೋ ನಿಷಾದಸ್ತು ಧಶ್ರುತಿಂ ಸಶ್ರುತಿಂ ಶ್ರಿತಃǁ೪ǁ

ಗಾಂಧಾರ ಗ್ರಾಮಮಾಚಷ್ಟೇ ತದಾ ತಂ ನಾರದೋ ಮುನಿಃ
ಪ್ರವರ್ತತೇ ಸ್ವರ್ಗಲೋಕೇ ಗ್ರಾಮೋಸ್ ನ ಮಹೀತಲೇǁ೫ǁ

ಋಷಭ ಮತ್ತು ಮಧ್ಯಮ ಸ್ವರಗಳ ಒಂದೊಂದು ಶ್ರುತಿಯನ್ನು ಗಾಂಧಾರವೂ ಪಂಚಮದ ಒಂದು ಶ್ರುತಿಯನ್ನು ಧೈವತವೂ, ನಿಷಾದವು ಧೈವತ ಮತ್ತು ಷಡ್ವಗಳ ಒಂದೊಂದು ಶ್ರುತಿಯನ್ನೂ ಪಡೆಯಲಾಗಿ ಗಾಂಧಾರ ಗ್ರಾಮವಾಗುವುದೆಂದು ನಾರದ ಮುನಿಯು ಹೇಳಿದ್ದಾನೆ. ಅದು ಸ್ವರ್ಗಲೋಕದಲ್ಲಿ ಹೊರತು ಮರ್ತ್ಯಲೋಕ ದಲ್ಲಿರುವುದಲ್ಲ.

ಷಡ್ವ: ಪ್ರಧಾನ ಆದ್ಯತ್ವಾದಮಾತ್ಯಾಧಿಕೃತಸ್ತಥಾ |
ಗ್ರಾಮೇಸ್ಯಾದವಿಲೋಪಿತ್ವಾನ್ಮಧ್ಯಮಸ್ತುಪುರಃ ಸರಃ ǁ
ಏತತ್ಕುಲ ಪ್ರಸೂತತ್ವಾತ್‌ ಗಾಂಧಾರೋಪಗ್ರಣೀರ್ದಿವಿ |
ಕ್ರಮಾದಾ ಮತ್ರಯೋದೇವಾ ಬ್ರಹ್ಮ ವಿಷ್ಣು ಮಹೇಶ್ವರಾಃ ǁ
ಹೇಮಂತ ಗ್ರೀಷ್ಮವರ್ಷಾಸು ಗಾತವ್ಯಾಸ್ತೇ ಯಥಾಕ್ರಮಂ |
ಪೂರ್ವಾಹ್ನ ಕಾಲೇ ಮಧ್ಯಾಹ್ನ ಪರಾಭ್ಯುದಯಾದಿಭಿ:ǁ೮ǁ