ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಸಂಗೀತ ರತ್ನಾಕರ - ವ್ಯಾಖ್ಯಾನ

ಷಡವು ಮೊದಲನೆಯ ಸ್ವರವಾದ್ದರಿಂದಲೂ ಅದಕ್ಕೆ ಹೆಚ್ಚು (ಒಂದಕ್ಕಿಂತ ಹೆಚ್ಚು) ಸಂವಾದಿಸ್ವರಗಳು ಇರುವುದರಿಂದಲೂ ಅದು ಗ್ರಾಮದ ಪ್ರಧಾನಸ್ವರವಾಗಿದೆ. ಮಧ್ಯಮ ಸ್ವರವು ಅವಿಲೋಪಿಯಾಗಿರುವುದರಿಂದ ಅದೂ ಪ್ರಧಾನಸ್ವರವಾಗಿದೆ. ಗಾಂಧಾರವು ಷಡ್ವಮಧ್ಯಮ ಸ್ವರಗಳ ವಂಶದಲ್ಲೇ (ದೇವಕುಲದಲ್ಲಿ) ಹುಟ್ಟಿದ ಸ್ವರವಾದ್ದರಿಂದ ಅದು ದೇವಲೋಕದಲ್ಲಿ ಗ್ರಾಮಕಾರಕ ಸ್ವರವಾಗಿದೆ. ಈ ಮೂರು ಗ್ರಾಮಗಳಿಗೆ ಕ್ರಮವಾಗಿ ಬ್ರಹ್ಮವಿಷ್ಣು ಮಹೇಶ್ವರರು ದೇವತೆಗಳು ಮತ್ತು ಹೇಮಂತ, ಗ್ರೀಷ್ಮ, ವರ್ಷ ಋತು ಗಳಲ್ಲಿ ಹಾಡತಕ್ಕವುಗಳು. ಪೂರ್ವಾಹ್ನ, ಮಧ್ಯಾಹ್ನ ಅಪರಾಹ್ನಗಳಲ್ಲಿ ಕ್ರಮವಾಗಿ ಈ ಮೂರನ್ನು ಹಾಡುವುದು ಶ್ರೇಯಸ್ಕರವಾಗಿದೆ.

ಕ್ರಮಾತ್ ಸ್ವರಾಣಾಂ ಸಪ್ತಾನಾಮಾರೋಹಾವರೋಹಣಂ
ಮೂರ್ಛನೇತ್ಯುಚ್ಯತೇ ಗ್ರಾಮದ್ವಯೇ ತಾಃ ಸಪ್ತಸಪ್ರಚǁ೯ǁ

ಷಟ್ಟೇ ತೂತ್ತರ ಮಂದ್ರಾದ್ ರಜನೀ ಚೋತ್ತರಾಯತಾ |
ಶುದ್ಧ ಷಡ್ಡಾಮತ್ವರೀಕೃದಶ್ವಕ್ರಾಂತಾಭಿರುದ್ಧ ತಾ
ಮಧ್ಯಮೇ ಸ್ಯಾತ್ತು ಸೌಮೀರೀ ಹರಿಣಾಶ್ಚಾ ತತಃ ಪರಂ |
ಸ್ಯಾತ್ಕಲೋಪನತಾ ಶುದ್ಧ ಮಧ್ಯಾಮಾರ್ಗೀ ಚ ಪೌರವೀǁ೧೧ǁ

ಹೃಷ್ಯಕೇತ್ಯಥೆ ತಾಸಾಂ ತು ಲಕ್ಷಣಂ ಪ್ರತಿಪಾದ್ಯತೇ |

ಸಪ್ತಸ್ವರಗಳನ್ನು ಕ್ರಮವಾಗಿ ಏರಿಸುವ ಮತ್ತು ಇಳಿಸುವುದಕ್ಕೆ ಮೂರ್ಛನೆ ಎಂಬ ಹೆಸರಿರುವುದು. ಅವು ಗ್ರಾಮಗಳಲ್ಲಿ ಏಳೇಳರಂತೆ ಇವೆ. ಷಡ್ಡಗ್ರಾಮದಲ್ಲಿ ಮೂರ್ಛನೆ ಗಳಿಗೆ ಕ್ರಮವಾಗಿ ಉತ್ತರಮಂದ್ರಾ, ರಜನೀ, ಉತ್ತರಾಯತಾ, ಶುದ್ದ ಷಡ್ಡಾ, ಮತ್ವರೀಕೃತ್, ಅಶ್ವಕ್ರಾಂತಾ, ಅಭಿರುದ್ಧ ತಾ ಎಂಬ ಹೆಸರುಗಳು. ಮಧ್ಯಮ ಗ್ರಾಮದಲ್ಲಿ ಸೌಮೀರೀ, ಹರಿಣಾಶ್ಚಾ, ಕಲೋಪನತಾ, ಶುದ್ಧ ಮಧ್ಯಾ, ಮಾರ್ಗೀ, ಪೌರವೀ, ಹೃಷ್ಯಕಾ ಎಂಬ ಹೆಸರುಗಳು.

ಮಧ್ಯಸ್ಥಾನಸ್ಥ ಷಟ್ಟೇನ ಮೂರ್ಛನಾರಭ್ಯತೇಗ್ರಿಮಾ
ಅಧಸನೈನಿಷಾದಾದ್ಯ: ಷಡನ್ಯಾ ಮೂರ್ಛನಾಃ ಕ್ರಮಾತ್
ಮಧ್ಯಮಧ್ಯಮಮಾರಭ್ಯ ಸೌಮೀರೀ ಮೂರ್ಛನಾ ಭವೇತ್
ಷಡನ್ಯಾಸದಧೋಧಸ್ಥ ಸ್ವರಾನಾರಭ್ಯ ತು ಕ್ರಮಾತ್‌ǁ೧೩ǁ

ಷಡ್ಡಗ್ರಾಮದಲ್ಲಿ ಪ್ರಥಮ ಮೂರ್ಛನೆಯನ್ನು ಮಧ್ಯಸ್ಥಾನದ ಷಡ್ಡ ಸ್ವರದಿಂದ ಆರಂಭಿಸಲಾಗುತ್ತದೆ. ಉಳಿದ ಆರು ಮೂರ್ಛನೆಗಳು ಕ್ರಮವಾಗಿ ಮಂದ್ರ ಸ್ಥಾನದಲ್ಲಿ ಕೆಳಕೆಳಗಿರುವ ನಿಷಾದಾದಿ ಆರು ಸ್ವರಗಳಿಂದ ಸುರುವಾಗುತ್ತವೆ. ಆದರಂತೆ ಮಧ್ಯಮ ಗ್ರಾಮದಲ್ಲಿಯೂ ಮಧ್ಯಸ್ಥಾನದ ಮಧ್ಯಮಸ್ವರದಿಂದ ಮೊದಲ ಮೂರ್ಛನೆಯೂ ಅದರ ಕೆಳಗಿನ ಗಾಂಧಾರ ಸ್ವರದಿಂದ ಮಂದ್ರಸ್ಥಾನದ ಪಂಚಮ. ಸ್ವರದ ವರೆಗಿನ ಆರು ಸ್ವರಗಳಿಂದ ಉಳಿದ ಆರು ಮೂರ್ಛನೆಗಳೂ ಆಗುತ್ತವೆ.

ಇತರರು ಮೂರ್ಛನೆಗಳನ್ನು ಈ ಕ್ರಮದಲ್ಲಿ ಮಾಡುವುದಲ್ಲ ಎಂಬುದನ್ನೂ ಹೇಳುತ್ತಾನೆ:-
ಷಡ್ಡ ಸ್ಥಾನಸ್ಥಿತೆರ್ನಾ ರಜನ್ಯಾದ್ಯಾ: ಪರೇ ವಿದು: |