ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೯೪ / ಕುಕ್ಕಿಲ ಸಂಪುಟ

ಇತರರು ಷಡ್ವಗ್ರಾಮದಲ್ಲಿ, ಪ್ರತಿಯೊಂದು ಮೂರ್ಛನೆಯನ್ನೂ ಮಧ್ಯಸ್ಥಾನದ ಷಡ್ಡ ಸ್ವರಸ್ಥಾನದಿಂದಲೇ ಆರಂಭಿಸುವುದಾಗಿದೆ. ಹಾಗೂ ಮಧ್ಯಮಗ್ರಾಮದಲ್ಲಿ ಮಧ್ಯಸ್ಥಾನದ ಮಧ್ಯಮದಿಂದಲೇ ಎಲ್ಲ ಮೂರ್ಛನೆಗಳನ್ನೂ ಮಾಡುತ್ತಾರೆ.

ಈ ಶ್ಲೋಕದಲ್ಲಿರುವ ಕಲ್ಲಿನಾಥನ ವ್ಯಾಖ್ಯಾನವು ತೀರ ವಿಪರೀತಾರ್ಥವನ್ನು ಕೊಡುವಂತಿದೆ- 'ಸ ರಿ ಗ ಮ ಪ ದ ನೀ ತ್ಯುತ್ತರ ಮಂದ್ರಾ ಸ್ವರಾನೇವ ಗ ಮ ಪ ದ ನಿ ಸ ರೀ ತಿ ರಜನೀ ಸ್ವರಾನುಚ್ಚಾರಯೇತ್, ಮಧ್ಯಸ್ಥಾನಸ್ಥ ಮಧ್ಯಮಾರಭ ಮ ಪ ದ ನಿ ಸ ರಿ ಗೇ & ಸೌಮೀರೀ ಸ್ವರಸ್ಥಾನೇವ ಗ ಮ ಪ ದ ನಿ ಸ ರೀತಿ ರಜನೀ ಸ್ವರಾನುಚ್ಚಾರಯೇತ್' ಎಂದೂ ಹೇಳಿದ್ದಾನೆ. ಮೇಲಿನ ಗ್ರಂಥಕ್ಕೆ ಈ ಅರ್ಥವಲ್ಲ ವೆಂಬುದು ಸ್ಪಷ್ಟವಿದೆ. ಷಡ ಸ್ಥಾನಸ್ಥಿತೆರ್ನಾ ರಜನ್ಮಾದ್ಯಾ ಎಂದರೆ ಷಡ್ಡಗ್ರಾಮದಲ್ಲಿ ನಿ, ದ, ಪ, ಮ, ಗ, ರಿ, ಎಂಬ ಆರು ಸ್ವರಗಳಲ್ಲಿ ಒಂದೊಂದು ಸ್ವರದಿಂದ ಕ್ರಮವಾಗಿ ಆರಂಭವಾಗುವ ರಜನೀ ಮೊದಲಾದ ಆರು ಮೂರ್ಛನೆಗಳನ್ನು ಗ್ರಾಮಾರಂಭದ ಷಾಸ್ವರಸ್ಥಾನದಿಂದ ಆರಂಭಿಸಬೇಕು ಎಂದಷ್ಟೇ ಅರ್ಥವಿರುವುದು ಹೊರತು ಆ ಮೂರ್ಛನೆಗಳ ಸ್ವರಗಳಲ್ಲಿ ಒಂದರಿಂದೊಂದಕ್ಕಿರುವ ನಿಯತ ಶ್ರುತ್ಯಂತರಗಳನ್ನು ಹೆಚ್ಚು ಕಡಿಮೆ ಮಾಡಬೇಕೆಂದು ಅರ್ಥವಾಗುವುದಿಲ್ಲ. ಕಲ್ಲಿನಾಥನು ಹೇಳುವ ಪ್ರಕಾರ ನಿಷಾದಾದಿ ಆರು ಮೂರ್ಛನೆಗಳ ಕ್ರಮಸ್ತರಗಳಲ್ಲಿ ಪ್ರತಿಯೊಂದನ್ನೂ ಪ್ರಥಮ ಮೂರ್ಛನೆಯ ಸ್ವರಗಳ ಕ್ರಮಸ್ಥಾನಕ್ಕೆ ಸರಿಯಾಗುವಂತೆ ಶ್ರುತ್ಯಂತರವನ್ನು ಹೆಚ್ಚು ಕಡಿಮೆ ಮಾಡಬೇಕು ಎಂದಾಗುವುದರಿಂದ ಈ ವ್ಯಾಖ್ಯಾನವು ಮೂಲಗ್ರಂಥಕ್ಕೆ ಸರಿಯಲ್ಲ. ಷಾದಿ ಸ್ವರಗಳಲ್ಲಿ ಗ್ರಾಮನಿಯತವಾದ ಶ್ರುತ್ಯಂತರವಿಲ್ಲದೆ ಹೋದರೆ ಆ ಮೂರ್ಛನೆ ಗಳು ಷಡಗ್ರಾಮದವೆಂದಾಗುವುದಾದರೂ ಹೇಗೆ! ಹೀಗೆ ಅಪಾರ್ಥಕ್ಕೆ ಅವಕಾಶವಿಲ್ಲ ವೆಂಬುದು ಅದೇ ಮುಂದಿನ ಈ ಶ್ಲೋಕದಲ್ಲಿ ಸ್ಪಷ್ಟವಾಗಿಯೇ ಇದೆ-

ಷಡ್ವಾದೀನ್‌ ಮಧ್ಯಮಾದೀಂಶ್ಚ ತದೂರ್ಧ್ವ೦ ಸಾರಯೇತ್‌ ಕ್ರಮಾತ್ |
ಷಡ್ವಗ್ರಾಮದ ಎರಡನೇ ಮೂರ್ಛನೆಯ ಆರಂಭದ ನಿಷಾದಸ್ವರವನ್ನು ಪ್ರಥಮ ಮೂರ್ಛನೆಯ ಷಡ್ಡಸ್ಥಾನದಲ್ಲಿಟ್ಟು ಮುಂದಿನ ಷಡ್ವಾದೀನ್ = ಸರಿಗಮಪದ ಎಂಬ ಸ್ವರಗಳನ್ನು ತದೂರ್ಧ್ವಂ ಆ ಷಡ್ಕದಿಂದ ಮೇಲಕ್ಕೆ, ಸಾರಯೇತ್ = ಷಡ್ನಸ್ಥಾನಕ್ಕೆ ಏರಿದ ನಿಷಾದಸ್ವರಕ್ಕೆ ಉತ್ತರೋತ್ತರ ಸಾಪೇಕ್ಷವಾಗಿ ನಿಯತ ಶ್ರುತ್ಯಂತರಗಳಲ್ಲಿ ಕ್ರಮವಾಗಿ ಸಿಕ್ಕುವ ಆಯಾ ಸ್ವರಸ್ಥಾನಗಳಿಗೆ ಸರಿಯಾದ ಶ್ರುತಿಗೊಳಿಸಬೇಕು ಎಂಬರ್ಥ. (ಕಲ್ಲಿನಾಥನು ಇದಕ್ಕೂ ಕೊಟ್ಟಿರುವ ಅರ್ಥವು ಸಾಕಷ್ಟು ಸ್ಪಷ್ಟವಿಲ್ಲದೆ ಸಂದೇಹಾಸ್ಪದ ವಾಗಿದೆ.) ಮೂರ್ಛನೆಗಳು ಪ್ರತ್ಯೇಕ ನಾಲ್ಕು ವಿಧವಾಗಿವೆ ಎಂದು ಅವುಗಳ ಒಟ್ಟು ಸಂಖ್ಯೆಯನ್ನು ಹೇಳುತ್ತಾನೆ-
ಚತುರ್ಧಾ ತಾಃ ಪೃಥಕ್ ಶುದ್ಧಾ ಕಾಕಲೀ ಕಲಿತಾಸ್ತಥಾ
ಸಾಂತರಾದ್ವಯೋಪೇತಾ: ಷಟ್‌ಪಂಚಾಶದಿತೀರಿತಾಃ ǁ

ಎರಡೂ ಗ್ರಾಮಗಳಲ್ಲಿ ಶುದ್ಧ ಮೂರ್ಛನೆಗಳೆಂದೂ, ಕಾಕಲೀ ಸ್ವರಸಹಿತವಾದು ದೆಂದೂ, ಅಂತರಸ್ವರಸಹಿತವಾದುದೆಂದೂ, ಕಾಕಲೀ ಮತ್ತು ಅಂತರ ಎಂಬೆರಡು ಸ್ವರಗಳಿರುವಂಥವೆಂದೂ ನಾಲ್ಕು ವಿಧವಾಗಿ ಒಟ್ಟು ೫೬ ಮೂರ್ಛನೆಗಳಾಗುತ್ತವೆ.

ಕಾಕಲೀ ಮತ್ತು ಅಂತರ ಸ್ವರಗಳ ಲಕ್ಷಣ:-
ಶ್ರುತಿದ್ವಯಂ ಚೇತ್ ಷಡ್ನಸ್ಯ ನಿಷಾದಃ ಸಂಶ್ರಯೇದ್ಯದಾ
ಸ ಕಾಕಲೀ ಮಧ್ಯಮಸ್ಯೆ ಗಾಂಧಾರಂತರ ಸ್ವರಃǁ೮ǁ