ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೨ / ಕುಕ್ಕಿಲ ಸಂಪುಟ

ಮಾತ್ರೆಗಳಲ್ಲಿಯೂ ಎರಡನೇ ನಾಲ್ಕನೆಯವುಗಳ ಮೊದಲ ಎಂಟು ಮಾತ್ರಗಳಲ್ಲಿಯೂ ಗುರುಲಘುವಿನ್ಯಾಸಕ್ಕೆ ನಿಯಮವಿಲ್ಲವೆಂದಾಗುವುದು. ಆದರೆ, ಒಂದನೇ ಮೂರನೇ ಪಾದಗಳ ಮೊದಲ ಆರು ಮಾತ್ರೆಗಳಲ್ಲಿ ಮೂರೂ ಗುರಕ್ಷರಗಳಾಗಿರುವುದು ಲಕ್ಷ್ಯದಲ್ಲಿ ಅಪರೂಪವಾಗಿದೆ.
ಔಪಚ್ಚಂದಸಕ : ವೈತಾಲೀಯದ ಪ್ರತಿಯೊಂದು ಪಾದಕ್ಕೂ ಒಂದು ಗುಡ್ಡಕ್ಷರ ಹೆಚ್ಚು ಸೇರಿರುವುದು ಇದರ ಲಕ್ಷಣ.
ಆಪಾತಲಿಕಾ : ವೈತಾಲೀಯಾಪಾದಗಳ ಕೊನೆಯಲ್ಲಿ ಜಗಣ + ಲ + ಗ ಇರುವುದರ ಬದಲು ಭಗಣ + ಎರಡು ಗುರ್ವಕ್ಷರಗಳಿರುವುದಾದರೆ ಅದು ಆಪಾತಲಿಕಾ ಎಂಬ ಭೇದವಾಗುವುದು.
ಪ್ರಾಚ್ಯವೃತ್ತಿ : ವೈತಾಲೀಯದ ಎರಡನೇ ನಾಲ್ಕನೇ ಪಾದಗಳಲ್ಲಿ ಪ್ರತ್ಯೇಕವಾಗಿ, ನಾಲ್ಕನೇ ಐದನೇ ಎರಡು ಮಾತ್ರೆಗಳ ಸ್ಥಾನದಲ್ಲಿ ಒಂದು ಗುರ್ವಕ್ಷರವೇ ಇರಬೇಕೆಂಬುದು ಇದರ ಲಕ್ಷಣ.
ಉದೀಚ್ಯವೃತ್ತಿ : ವೈತಾಲೀಯದ ಒಂದನೇ ಮೂರನೇ ಪಾದಗಳ ಮೊದಲಲ್ಲಿರುವ ಎರಡನೇ ಮೂರನೇ ಎರಡು ಮಾತ್ರೆಗಳ ಸ್ಥಾನದಲ್ಲಿ ಒಂದು ಗುರ್ವಕ್ಷರವಿರುವುದು ಉದೀಚ್ಯವೃತ್ತಿ ಎಂದು ಕರೆಯಲ್ಪಡುತ್ತದೆ.
ಪ್ರವೃತ್ತಕ : ಮೇಲೆ ಹೇಳಿದ ಪ್ರಾಚ್ಯವೃತ್ತಿ ಉದೀಚ್ಯವೃತ್ತಿ ಎಂಬ ಎರಡೂ ಲಕ್ಷಣ ಗಳಿರುವ ವೈತಾಲೀಯಬಂಧವು ಪ್ರವೃತ್ತಕವೆಂದು ಕರೆಯಲ್ಪಡುತ್ತದೆ.
ಚಾರುಹಾಸಿನಿ : ವೈತಾಲೀಯದ ನಾಲ್ಕು ಪಾದಗಳಲ್ಲಿಯೂ ಮೊದಲ ಅಕ್ಷರವು ಲಘು ವಾಗಿದ್ದು ಎರಡನೆಯದು ಗುರುವಾಗಿರಬೇಕೆಂಬುದು ಇದರ ಲಕ್ಷಣವಾಗಿದೆ.
ಅಪರಾಂತಿಕಾ : ನಾಲ್ಕು ಪಾದಗಳೂ ಪ್ರಾಚ್ಯವೃತ್ತಿಯ ಲಕ್ಷಣಗಳಂತಿರುವುದು ಈ ಹೆಸರಿ ನಿಂದ ಕರೆಯಲ್ಪಡುವುದು. ಎಂದರೆ, ನಾಲ್ಕನೇ ಐದನೇ ಮಾತ್ರೆಗಳ ಸ್ಥಾನದಲ್ಲಿ ಗುರ್ವಕ್ಷರವೇ ಇರುವುದಾಗಿದೆ.
ಮಾತ್ರಾಸಮಕಜಾತಿಗಳಲ್ಲಿ ವಾನವಾಸಿಕಾ, ವಿಶ್ಲೋಕಾ, ಚಿತ್ರಾ, ಉಪಚಿತ್ರಾ, ಪಾದಾಕುಲಕ ಎಂಬ ಐದು ಪ್ರಭೇದಗಳಿರುತ್ತವೆ.
ಮಾತ್ರಾಸಮಕ : ನಾಲ್ಕು ಪಾದಗಳಲ್ಲಿಯೂ ಹದಿನಾರರಂತೆ ಮಾತ್ರೆಗಳಿರಬೇಕು. ಒಂಬತ್ತನೆಯ ಮಾತ್ರೆ ಲಘುಕ್ಷರವೇ ಆಗಿರಬೇಕು. ಪಾದಾಂತ್ಯದಲ್ಲಿ ಒಂದು ಗುರ್ವಕ್ಷರವೇ ಬರಬೇಕು. ಹೀಗಿದ್ದರೆ ಮಾತ್ರ ಅದು ಮಾತ್ರಾಸಮಕವೆಂದು ಕರೆಯಲ್ಪಡುವುದು.
ವಾನವಾಸಿಕಾ : ಇದರಲ್ಲಿ ಹನ್ನೆರಡನೆಯ ಮಾತ್ರೆಯು ನಿಯಮದಿಂದ ಲಕ್ಷರವಾಗಿರ ಬೇಕೆಂಬುದೇ ವಿಶೇಷವಾಗಿದೆ.