ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೀಠಿಕೆ / ೩೫೧

ಪಾದದಲ್ಲಿ ಏಳುವರೆ ಗಣಗಳೂ ಎರಡನೇ ಪಾದದಲ್ಲಿ ಐದು ಗಣ + ಲಘು + ಒಂದುವರೆ ಗಣಗಳೂ ಇರುತ್ತವೆ. ವಿಷಮಸ್ಥಾನದ ಗಣಗಳು ಮಧ್ಯಗುರುವಾಗಿರ ಬಾರದು. ಮೊದಲ ಪಾದದಲ್ಲಿ ಆರನೇ ಗಣವು ಮಧ್ಯಗುರು ಅಥವಾ ಸರ್ವಲಘುವಾಗಿರ ಬೇಕು- ಎರಡನೆಯದರಲ್ಲಿ ಆರನೇ ಗಣದ ಸ್ಥಾನದಲ್ಲಿ ಒಂದು ಲಘು ಮಾತ್ರಾ ಇರಬೇಕು. ಹೀಗಿದ್ದರೆ ಅದು ಆರ್ಯಯ ಸಾಮಾನ್ಯ ಸ್ವರೂಪವಾಗುವುದು.

ಪಥ್ಯಾ : ಎರಡೂ ಪಾದಗಳಲ್ಲಿಯೂ ಮೂರನೇ ಗಣಾಂತಕ್ಕೆ ಯತಿ ಇರುವುದಾದರೆ ಪಥ್ಯಾ ಎಂದು ಕರೆಯಲ್ಪಡುತ್ತದೆ.

ವಿಪುಲಾ : ಒಂದು ಪಾದದಲ್ಲಿ ಮತ್ತು ಎರಡೂ ಪಾದಗಳಲ್ಲಿ ಆ ಪ್ರಕಾರ ವಿರಾಮ ವಿಲ್ಲದಿರುವುದು ಇದರ ವಿಶೇಷ ಲಕ್ಷಣ.

ಚಪಲಾ : ಪಾದದ ಮೊದಲ ಗಣವು ಅಂತ್ಯಗುರುವಾಗಿಯೂ ಎರಡನೆಯದು ಮಧ್ಯ ಗುರುವಾಗಿಯೂ ಮೂರನೆಯದು ಎರಡು ಗುರುಗಳಾಗಿಯೂ ನಾಲ್ಕನೆಯದು ಮಧ್ಯ ಗುರುವಾಗಿಯೂ ಐದನೆಯ ಗಣವು ಆದಿಗುರುವಾಗಿಯೂ ಇರುವುದಾದರೆ ಅದು 'ಚಪಲಾರ್ಯ' ಎಂದು ಕರೆಯಲ್ಪಡುವುದು. ಒಂದನೇ ಪಾದದಲ್ಲಿ ಮಾತ್ರ ಹೀಗಿದ್ದರೆ ಅದಕ್ಕೆ 'ಮುಖಚಪಲಾ' ಎಂದೂ ಎರಡನೇ ಪಾದ ಹೀಗಿರುವುದು 'ಜಘನಚಪಲಾ' ಎಂದೂ ಕರೆಯಲ್ಪಡುತ್ತದೆ. ಎರಡೂ ಪಾದಗಳಲ್ಲಿ ಈ ನಿಯಮವಿರುವುದಾದರೆ ಅದು 'ಮಹಾಚಪಲಾ' ಎನ್ನಿಸುವುದು.
ಗೀತಿಯಲ್ಲಿ ಉಪಗೀತಿ, ಉದ್ವಿತಿ, ಆರ್ಯಾಗೀತಿ ಎಂಬ ಮೂರು ಭೇದಗಳಿವೆ. ಆರ್ಯಯ ಮೊದಲ ಪಾದದಂತೆ ಎರಡೂ ಪಾದಗಳಿರುವುದಾದರೆ ಅದು 'ಗೀತಿ' ಎಂದು ಕರೆಯಲ್ಪಡುವುದು. ಎರಡು ಪಾದಗಳೂ ಆರ್ಯಯ ಎರಡನೇ ಪಾದದಂತಿದ್ದರೆ ಅದು ಉಪಗೀತಿ ಎಂದಾಗುವುದು. ಆರ್ಯಯ ಪಾದಗಳೇ ಹಿಂದುಮುಂದಾಗಿ ಬರುವುದು, ಎಂದರೆ ಆರ್ಯೆಯ ಮೊದಲ ಪಾದವು ಎರಡನೆಯದಾಗಿಯೂ ಎರಡನೆಯ ಪಾದ ಮೊದಲನೆಯದಾಗಿಯೂ ಇರುವುದಾದರೆ ಅದು 'ಉರೀತಿ'ಯಾಗುವುದು. ಇನ್ನು ಎರಡು ಪಾದಗಳಲ್ಲಿಯೂ ಎಂಟೆಂಟು ಗಣಗಳು ಪರಿಪೂರ್ಣವಾಗಿರುವುದು 'ಆರ್ಯಾಗೀತಿ' ಇದರಲ್ಲಿಯೂ ಆರನೇ ಗಣವು ಮಧ್ಯಗುರು ಅಥವಾ ಸರ್ವಲಘುವಾಗಿರಬೇಕು. ವಿಷಮಸ್ಥಾನದಲ್ಲಿ ಮಧ್ಯಗುರುವಾದ ಜಗಣವಿರಬಾರದು ಎಂದು ಆರ್ಯೆಗೆ ಹೇಳಿರುವ ನಿಯಮವೇ ಇಲ್ಲಿಯೂ ಇರಬೇಕಾದುದರಿಂದ ಇದು ಆರ್ಯಾಗೀತಿ ಎಂದು ಕರೆಯಲ್ಪಟ್ಟಿದೆ.
ವೈತಾಲೀಯ ಜಾತಿಗಳು ಅರ್ಧಸಮವೃತ್ತಗಳಂತೆ ಸಾಮಾನ್ಯವಾಗಿ ಒಂದನೇ- ಮೂರನೇ ಮತ್ತು ಎರಡನೇ- ನಾಲ್ಕನೇ ಪಾದಗಳಲ್ಲಿ ಪ್ರತ್ಯೇಕ ಸಮಾನತೆಯುಳ್ಳಂಥವು. ಇವುಗಳಲ್ಲಿ ಮಾತ್ರಾನಿಯಮದೊಂದಿಗೆ ಸ್ವಲ್ಪಾಂಶ ಅಕ್ಷರನಿಯಮವೂ ಇರುತ್ತದೆ. ಇವುಗಳೊಳಗೆ ಔಪಚ್ಛಂದಸಕ, ಅಪಾತಲಿಕಾ, ಪ್ರಾಚ್ಯವೃತ್ತಿ, ಉದೀಚ್ಯವೃತ್ತಿ, ಪ್ರಮ ಚಾರುಹಾಸಿನೀ, ಅಪರಾಂತಿಕ, ಎಂಬ ಏಳು ಪ್ರಭೇದಗಳಿವೆ. ಅವುಗಳ ಲಕ್ಷಣ ಹೀಗಿದೆ-

ವೈತಾಲೀಯ : ಒಂದನೇ ಮೂರನೇ ಪಾದಗಳಲ್ಲಿ ಹದಿನಾಲ್ಕರಂತೆಯೂ ಎರಡನೇ ನಾಲ್ಕನೆಯವುಗಳಲ್ಲಿ ಹದಿನಾರರಂತೆಯೂ ಮಾತ್ರೆಗಳಿರಬೇಕು. ಪಾದಗಳ ಕೊನೆಯಲ್ಲಿ ಮಧ್ಯಗುರುವಾದ ಒಂದು ಜಗಣವೂ ಅದರ ಮುಂದೆ ಒಂದು ಲಘು ಮತ್ತೊಂದು ಗುರು ಅಕ್ಷರಗಳೂ ಇರಬೇಕು. ಎಂದರೆ ಆಗ, ಒಂದನೇ ಮೂರನೇ ಪಾದಗಳ ಮೊದಲ ಆರು