ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೫೦ / ಕುಕ್ಕಿಲ ಸಂಪುಟ


ಯವಮತಿ-1+2+1+23/23 + 0 + 3 + 0 + 7
ಶಿಖಾ-೨೭ ಲಘು + ೧ ಗುರು | ೨೯ ಲಘು + ೧ ಗುರು
ಖಂಜಾ-೨೯ ಲಘು + ೧ ಗುರು / ೨೭ ಲಘು + ೧ ಗುರು
ಮಾತ್ರಾಕೃತವಾದ ಜಾತಿಗಳಲ್ಲಿ ಗಣಛಂದಸ್ಸು, ಮಾತ್ರಾಛಂದಸ್ಸುಎಂದು ಎರಡು ವಿಭಾಗಗಳಿರುತ್ತವೆ. ಸಂಸ್ಕೃತ ಛಂದಶ್ಯಾಸ್ತ್ರದಲ್ಲಿ ಗಣವೆಂದರೆ ಚತುರ್ಮಾತ್ರಾ ಗಣವೆಂದೇ ಗೃಹೀತಾರ್ಥವಾಗಿದೆ. (ಮ, ಯ, ರ, ಸಾದಿ ಸಂಜ್ಞೆಗಳುಳ್ಳ ಮೂರು ಮೂರು ಅಕ್ಷರ ಗಳನ್ನು ಅಕ್ಷರಗಣಗಳೆಂದು ಕರೆಯುವುದು ಸಾಮಾನ್ಯವಾಗಿ ರೂಢಿಯಲ್ಲಿ ಬಂದಿರುವು ದಾದರೂ ಪಿಂಗಳನು ಅವನ್ನು 'ತ್ರಿಕ'ಗಳೆಂದೇ ವ್ಯವಹರಿಸುವುದನ್ನು ಲಕ್ಷಿಸಬಹುದು.) ಮಾತ್ರಾಗಣಛಂದಸ್ಸು ಲಯಬದ್ಧವಾದ ರಚನೆ. ಆದುದರಿಂದ ಇದು ಸತಾಲಛಂದಸ್ಸು. ಪದ್ಯಬಂಧದಲ್ಲಿ ಸಾಮಾನ್ಯವಾಗಿ ಲಯವೆನ್ನುವುದು ಮಾತ್ರಾಗಣಗಳನ್ನೇ, ತಾಳವೂ ಮಾತ್ರಾಗಣಗಳಿಂದಾಗುವುದಾದ್ದರಿಂದ ಸಂಗೀತಶಾಸ್ತ್ರದಲ್ಲಿ ತಾಳಕ್ಕೆ ಲಯವೆ೦ಬ ವ್ಯವಹಾರವೂ ಇದೆ. ಛಂದಸ್ಸಿನ ಈ ಲಯವೆಂಬುದು ಅಕ್ಷರವಿನ್ಯಾಸದಲ್ಲಿ ವ್ಯಕ್ತವಾಗುವ ಹಾಗೂ ಉಚ್ಚಾರದಲ್ಲಿ ವ್ಯಕ್ತಪಡಿಸಲಾಗುವ ಕಾಲವಿಭಾಗ, ಪ್ರಾಕೃತ ಛಂದಸ್ಸಿನಲ್ಲಿ ಎರಡರಿಂದ ಆರು ಮಾತ್ರೆಗಳವರೆಗೂ ಇತರ ದೇಶೀಬಂಧಗಳಲ್ಲಿ ಎರಡರಿಂದ ಎಂಟು ಮಾತ್ರೆಗಳವರೆಗೂ ಒಂದೊಂದು ಮಾತ್ರಾವೃದ್ಧಿಯ ಗಣಭೇದಗಳಿರುತ್ತವೆ. ಪದ್ಯಬಂಧ ದಲ್ಲಿ ಈ ಗಣವಿಭಾಗದ ಲಕ್ಷಣವೆಂದರೆ ಗುರ್ವಕ್ಷರವು ಎರಡು ಗಣಗಳ ಮಧ್ಯಕ್ಕೆ ನಿಲ್ಲಬಾರದು. ಎಂದರೆ, ಗುರ್ವಕ್ಷರದ ಎರಡು ಮಾತ್ರೆಗಳೂ ಒಂದೇ ಗಣಕ್ಕೆ ಒಳಪಡಬೇಕು, ಹೊರತು ಒಂದು ಹಿಂದಿನ ಗಣಕ್ಕೂ ಇನ್ನೊಂದು ಮುಂದಿನ ಗಣಕ್ಕೂ ಹಂಚಿಹೋಗುವಂತಿರಬಾರದು. ಆ ಪ್ರಕಾರ ಗುರುಲಕ್ಷಕ್ಷರಗಳ ವ್ಯವಸ್ಥೆ ಇರುವುದು ಲಯಬದ್ಧವಾದ ಗಣಛಂದಸ್ಸು, ಛಂದಸ್ಸಿನ ಗುರುಲಘುಗಳನ್ನೇ ತಾಳದ ಗುರುಲಘು ಗಳೆಂದೆಂಣಿಸಿ ಇದನ್ನು ಸತಾಲಛಂದಸ್ಸು ಎನ್ನುತ್ತೇವೆ.

ಹೀಗೆ ಲಯಬದ್ಧವಲ್ಲದ ಕೇವಲ ಮಾತ್ರಾಛಂದಸ್ಸೆಂದರೆ ಪ್ರತಿ ಪಾದಗಳಲ್ಲಿ ಇಂತಿಷ್ಟರಂತೆ ಮಾತ್ರೆಗಳಿರಬೇಕೆಂಬ ನಿಯಮವುಳ್ಳುದು. ಇವುಗಳಲ್ಲಿ ನಾಲ್ಕು ಪಾದಗಳು ಸಮಾನ ಸಂಖ್ಯೆಯ ಮಾತ್ರೆಗಳನ್ನು ಹೊಂದಿರಬೇಕೆಂಬ ನಿಯಮವಿಲ್ಲ. ಹಾಗೂ ಅಕ್ಷರ ಸಂಖ್ಯೆಗಾಗಲಿ ಗುರುಲಘುವಿನ್ಯಾಸಕ್ಕಾಗಲಿ ನಿರ್ಣಯವಿರುವುದಿಲ್ಲ. ಹೀಗಿರುವುದು ವಿತಾಲ ಛಂದಸ್ಸು ಅಥವಾ 'ವೈತಾಲೀಯ.'
ನಾಲ್ಕು ಪಾದಗಳಲ್ಲಿ ಸಮಾನ ಸಂಖ್ಯೆಯ ಮಾತ್ರೆಗಳಿರಬೇಕೆಂಬ ನಿಯಮವಿರುವುದು 'ಮಾತ್ರಾಸಮಕ'ವೆಂದು ಕರೆಯಲ್ಪಡುತ್ತದೆ. ಹೀಗೆ ಈ ಜಾತಿಗಳಲ್ಲಿ, ಗಣಛಂದಸ್ಸು ಅಥವಾ ಸತಾಲಛಂದಸ್ಸು, ವೈತಾಲೀಯ, ಮಾತ್ರಾಛಂದಸ್ಸು ಎಂದು ಮೂರು ವಿಭಾಗಗಳಾಗುತ್ತವೆ.
ಗಣಛಂದಸ್ಸುಗಳೆಂದರೆ ಆರ್ಯಾದಿ ಜಾತಿಗಳು. ಎರಡು ಗುರುಗಳ ಪ್ರಸ್ತಾರದಿಂದ ಪಡೆಯಲಾಗುವ ಈ ಚತುರ್ಮಾತ್ರಾಗಣಗಳು ಐದು ವಿಧ- ss, lls, Isl, sll, Ill ಈ ಗಣಬದ್ಧವಾದ ಜಾತಿಗಳಲ್ಲಿ ಆರ್ಯಾ ಗೀತಿಮತ್ತು ಎಂಬ ಎರಡು ವರ್ಗಗಳಿರುತ್ತವೆ. ಆರ್ಯಾಜಾತಿಗಳಲ್ಲಿ ಸಾಮಾನ್ಯವಾಗಿ ಎರಡೇ ಪಾದಗಳಿರುವುದೆಂದು ಹೇಳಲಾಗಿದೆ. ಪಾದ ಗಳಲ್ಲಿರುವ ಗಣನಿಯಮ ವ್ಯತ್ಯಾಸದಿಂದ ಆರ್ಯಯಲ್ಲಿ ಪಥ್ಯಾ, ವಿಪುಲಾ, ಚಪಲಾ, ಮುಖಚಪಲಾ, ಜಘನಚಪಲಾ, ಮಹಾಚಪಲಾ, ಎಂಬ ಆರು ಭೇದಗಳಿವೆ. ಅವುಗಳ ಪ್ರತ್ಯೇಕ ಲಕ್ಷಣಗಳನ್ನು ಸಂಕ್ಷೇಪತಃ ಹೀಗೆ ತಿಳಿಯಬಹುದು. ಆರ್ಯಯ ಮೊದಲ