'ಡುಪ್ಲಿಕೇಟ್' ಕಲಾವಿದರಾಗುತ್ತಾರೆ. ವಿಶೇಷವೆಂದರೆ, ಅನುಕರಣೆ ಮಾಡು ವವರು ಹಿರಿಯ ಕಲಾವಿದರ ದೋಷಗಳನ್ನೇ ಅನುಸರಿಸುತ್ತಾರೆ, ಉತ್ತಮ ಅಂಶಗಳನ್ನಲ್ಲ. ಕಾರಣ, ದೋಷಗಳ, ಅಥವಾ ವಿಶಿಷ್ಟ ಬಾಹ್ಯ ಲಕ್ಷಣ, ಅಂಗನ್ಯಾಸಗಳ (Mannerisms) ಅನುಕರಣೆ ಸುಲಭ. ಆಗ ಹವ್ಯಾಸಿ ಮಾಡುವುದು ಸ್ವಂತ ಪ್ರದರ್ಶನವಾಗದೆ, ಮಿಮಿಕ್ರಿ ಆಗುತ್ತದೆ ಅಷ್ಟೆ. ವ್ಯವಸಾಯಿ ರಂಗದ ಕಳಪೆ ಹಾಸ್ಯಗಳು, ಚಿಲ್ಲರೆ ವಿವರಗಳು, ಸತ್ವಹೀನ ಪ್ರಸಂಗಗಳು-ಇವುಗಳನ್ನು ಹಾಗೆಯೇ ಎತ್ತಿಕೊಂಡು ಹವ್ಯಾಸಿ, ತನ್ನ ರಂಗದಲ್ಲಿ ಪ್ರಸಾರ ಮಾಡುತ್ತಾನೆ. ವ್ಯವಸಾಯಿಗಳಲ್ಲಿ, ನಾವು ನೋಡಿ ಮೆಚ್ಚಲಾರ ದ್ದನ್ನು, ಹವ್ಯಾಸಿಗಳು ಮಾಡಿದಾಗ ಇನ್ನಷ್ಟು ವಿಕಾರವಾಗುತ್ತದೆ. ವ್ಯವಸಾಯಿ ಯಿಂದ ಯಾವುದನ್ನು ತೆಗೆದುಕೊಳ್ಳಬಾರದೆ, ಅದನ್ನೆ ಹವ್ಯಾಸಿ ಹೆಚ್ಚಾಗಿ ತೆಗೆದುಕೊಳ್ಳುತ್ತಾನೆ.
5. ವೇಷಭೂಷಣಗಳ ಸಮಸ್ಯೆ : ಹೆಚ್ಚಿನ ಹವ್ಯಾಸಿ ಸಂಘಗಳಿಗೆ ಸ್ವಂತ ವೇಷಭೂಷಣಗಳಿಲ್ಲ. ಬಾಡಿಗೆಗೆ ತರುತ್ತಾರೆ. ಇವು ಹೊಂದಿಕೆ ಯಾಗುವುದಿಲ್ಲ. ಮತ್ತು ವೇಷಭೂಷಣಗಳ ತಯಾರಿಯೇ ಸಾಂಪ್ರದಾಯಿ ಕತೆಯನ್ನು ಬಿಟ್ಟು ಹೋಗಿದೆ. ನಾವು ಸಾಂಪ್ರದಾಯಿಕವೆನ್ನುವ ವೇಷ ಸಾಮಗ್ರಿಯೇ, ಕಲಾತ್ಮಕವಾಗಿ, ಸಾಂಪ್ರದಾಯಿಕ ರೂಪದಲ್ಲಿಲ್ಲ.
6. ಮಾರ್ಗದರ್ಶನದ ಕೊರತೆ : ಹವ್ಯಾಸಿಗಳು ಏನು ಮಾಡ ಬೇಕು, ಏನು ಮಾಡಬಹುದು ಎಂಬುದರ ಬಗ್ಗೆ ಸೂಕ್ತ ಮಾರ್ಗದರ್ಶನ ಸಿಗುವುದಿಲ್ಲ. ಯಾವುದೋ ಒಂದು ಬಗೆಯಿಂದ, ವಸ್ತು ವ್ಯಕ್ತಿ ಪರಿಕರಗಳನ್ನು ಸೇರಿಸಿ ಆಟ ಆಡುವುದಷ್ಟೆ ಲಕ್ಷ್ಮವಾಗಿರುತ್ತದೆ. ಮಾಮೂಲಿಗಿಂತ ಭಿನ್ನವಾಗಿ ಹೇಗೆ ಮಾಡಬಹುದು ಎಂಬ ಪ್ರಾಯೋಗಿಕ ದೃಷ್ಟಿ ಇರುವುದು ಬಹು ವಿರಳ.
7. ಅನೈಕ್ಯ : ಹವ್ಯಾಸಿ ತಂಡಗಳ ದೊಡ್ಡ ಸಮಸ್ಯೆ ಅನೈಕ್ಯ. ಎಲ್ಲರೂ ಸ್ವತಂತ್ರರೂ ಸ್ಥಾನಾಪನ್ನರೂ ಆಗಿದ್ದು, ನಿಯಂತ್ರಣಕ್ಕೆ ಒಳಪಡುವು