ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಹವ್ಯಾಸಿಗಳು : ಹೊಣೆ ಮತ್ತು ಸಮಸ್ಯೆಗಳು
151

ದಿಲ್ಲ. ವ್ಯವಸಾಯಿ ಮೇಳದ ಶಿಸ್ತು ಮತ್ತು ಬದ್ಧತೆಗಳಿರುವುದಿಲ್ಲ. ವೇಷಗಳ ವಿತರಣೆಯಲ್ಲೂ ಕಲಾಯೋಗ್ಯತೆಗಿಂತ ವೈಯಕ್ತಿಕ ಸ್ಥಾನ ಮಾನಗಳೇ ಮುಖ್ಯ ವಾಗುವುದಿದೆ. ಹಲವಾರು ಪ್ರಮುಖ ಪಾತ್ರಧಾರಿಗಳಿರುತ್ತಾರೆ. ಸಂಘಗಳು ಒಡೆದು ಪ್ರತಿಸಂಘಗಳು ನಿರ್ಮಾಣವಾಗುವುದು, ಇಂತಹ ತೊಡಕುಗಳಿಂದಲೇ.

8. ಸ್ತ್ರೀವೇಷ, ಹಾಸ್ಯಗಾರ ಕೊರತೆ : ಹವ್ಯಾಸಿಗಳಲ್ಲಿ ಸ್ತ್ರೀ ಪಾತ್ರಧಾರಿ ಮತ್ತು ಹಾಸ್ಯಗಾರರ ಕೊರತೆ ಬಹಳವಾಗಿದೆ. ಇದರಿಂದಾಗಿ ಅವರು ಆಡಬಹುದಾದ ಪ್ರಸಂಗಗಳಿಗೆ ಮಿತಿ ಬರುತ್ತದೆ.

ಇವೆಲ್ಲದರ ಪರಿಣಾಮವಾಗಿ ಹವ್ಯಾಸಿಗಳ ಯಕ್ಷಗಾನ ಪ್ರದರ್ಶನ ವೆಂಬುದು ಅವ್ಯವಸ್ಥೆ, ಗಡಿಬಿಡಿ, ಅಪರಿಷ್ಕಾರಗಳ ಕಲಸು ಮೇಲೋಗರವಾಗಿ, ಹೇಗೋ ಆದರೆ ಸಾಕೆಂಬ ರೀತಿಯಲ್ಲಿ ಇರುತ್ತದೆ. ಪ್ರದರ್ಶನ ಕಳೆದಮೇಲೆ ಅದರ ಬಗೆಗೆ ಚಿಂತನ, ಸಮಾಲೋಚನೆಗಳು ಜರಗುವುದು ಬಹಳ ಕಡಿಮೆ. ಜರಗಿದರೆ, ಪರಸ್ಪರ ಪ್ರಶಂಸೆಯೇ ಹೆಚ್ಚು. ಗಂಭೀರ ಚರ್ಚೆ ಕಡಿಮೆ.

ಇಷ್ಟೆಲ್ಲ ಇದ್ದರೂ, ಕೆಲವು ತಂಡಗಳು ಉತ್ತಮ ಪ್ರದರ್ಶನಗಳನ್ನು ನೀಡುತ್ತಿರುವುದು ಗಮನಾರ್ಹ. ವ್ಯವಸಾಯಿಗಳ ಮಟ್ಟದ ಉತ್ಕೃಷ್ಟ ಕಲಾವಿದರು ಹವ್ಯಾಸಿಗಳಲ್ಲಿದ್ದಾರೆ (ಉದಾ : ಕರ್ಕಿ ಪಿ. ವಿ. ಹಾಸ್ಯಗಾರ,ಎಂ. ಎಲ್. ಸಾಮಗ, ಪಿ. ಕೃಷ್ಣಭಟ್ ಕಟೀಲು, ಪೊಳ್ಯ ಲಕ್ಷ್ಮೀ ನಾರಾಯಣ ಶೆಟ್ಟಿ, ಮುರಳೀಧರಭಟ್, ಸೀತಾರಾಮ ತೋಳ್ಳಾಡಿ). ಕೆಲವು ತಂಡಗಳು ಉತ್ತಮ ವೇಷಭೂಷಣ, ಸುಸಜ್ಜಿತ ಸಮತೋಲದ ಕಲಾವಿದರ ತಂಡ ಹೊಂದಿವೆ (ಉದಾ : ಭ್ರಾಮರೀ ಮಂಡಳಿ ಕಟೀಲು, ಅಜಪುರ ಯಕ್ಷಗಾನ ಸಂಘ ಬ್ರಹ್ಮಾವರ), ಯಕ್ಷಗಾನ ಪ್ರಸಂಗ, ಪ್ರದರ್ಶನಗಳಲ್ಲಿ ವಸ್ತು, ನೃತ್ಯ ವಿಧಾನ, ಆಭಿವ್ಯಕ್ತಿಗಳಲ್ಲಿ ಹೊಸ ತಂತ್ರ ಆಶಯಗಳನ್ನು ನೀಡುವ ಯಶಸ್ವಿ ಯತ್ನವನ್ನು ಮಾಡಿದ ಹವ್ಯಾಸಿ ಸಂಸ್ಥೆಗಳಿವೆ (ಉದ್ಯಾವರ ಮಾಧವಾಚಾರರ 'ಸಮೂಹ', ಉಡುಪಿ ಅಮೃತ ಸೋಮೇಶ್ವರರ ನೇತೃತ್ವದ, ಯಕ್ಷರಂಜಿನಿ