ಯನ್ನು ಮಾಡಿದೆ.
ಎಲ್ಲಕ್ಕಿಂತ ಹೆಚ್ಚಾಗಿ ಜೋಶಿಯವರೊಬ್ಬ ನಿಜಾರ್ಥದ ಸ್ನೇಹಿತ. Out of the
Way ಹೋಗಿ ಸಹಾಯ ಮಾಡುವವರು. ಯಾವುದಾದರೊಂದು ಸಮಸ್ಯೆಯ ಕುರಿತಾಗಿ
ಫೋನಿನಲ್ಲಿ ಕೇಳಿದಾಗ ನಾನು ರೆಫರ್ ಮಾಡಿ ಹೇಳುತ್ತೇನೆ. ನಾಳೆ ಫೋನ್ ಮಾಡಿ
ಎಂದು ಹೇಳುತ್ತಾರೆ. ಆದರೆ ಆ ದಿನ ಸಂಜೆಯೇ ಅವರೇ ಕರೆಮಾಡಿ ಉತ್ತರವನ್ನು
ತಿಳಿಸುವುದು ಅವರ ಸ್ವಭಾವ, ಕಿರಿಯರು, ಹಿರಿಯ ಅರ್ಥದಾರಿಗಳಲ್ಲಿ ಮಾಹಿತಿಗಾಗಿ
ಏನನ್ನಾದರೂ ಕೇಳಿದರೆ ಸರಿಯಾಗಿ ವಿಷಯವನ್ನು ತಿಳಿಸುವ ಉದಾರತೆ ಯಾರಲ್ಲೂ
ಇರುವುದಿಲ್ಲ. ಆದರೆ ಇವರು ಹಾಗಲ್ಲ. ಒಮ್ಮೆ 'ವಿಭೀಷಣ ನೀತಿ' ಪ್ರಸಂಗದ ಅವರ
ರಾವಣನಿಗೆ ವಿಭೀಷಣ ಹೇಳಬೇಕಾಗಿದ್ದ ನನಗೆ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ
ಕೋಚಿಂಗ್ ಕೊಟ್ಟವರು ಜೋಶಿ, ರಾವಣನಿಗೆ ಉತ್ತರಿಸಲು ಕಷ್ಟವಾಗಬಹುದಾದ
ಯಾವ್ಯಾವ ವಿಚಾರಗಳನ್ನು ಹೇಗೆ ಹೇಗೆ ಮಂಡನೆ ಮಾಡಬೇಕೆಂದು ಮುಕ್ತವಾಗಿ
ತಿಳಿಸಿದರು. ತಾಳಮದ್ದಳೆ ಯಶಸ್ವಿಯಾಯಿತು. ಭೀಷ್ಮ ಪರ್ವ ಪ್ರಸಂಗದಲ್ಲಿ (ಕರ್ಮಬಂಧದ ಭಾಗ ಇಲ್ಲದಿದ್ದರೆ) ಕೃಷ್ಣನಿಗೆ ಇರುವುದು ಒಂದು ಭಾಮಿನಿ ಮಾತ್ರ ಒಮ್ಮೆ ಅವರು ಕೃಷ್ಣನ ಪಾತ್ರವನ್ನು ತಾನಿಟ್ಟುಕೊಂಡು ನನಗೆ ಕೌರವನ ಪಾತ್ರವನ್ನು ಬಿಟ್ಟುಕೊಟ್ಟರು.ಬಹಳ ಹಿಂದೆ ನಾನು ಅರ್ಥಧಾರಿಯಾಗಿ ಬೆಳೆಯುತ್ತಿದ್ದಾಗಲೇ 'ಕರ್ಣ ಪರ್ವ' ಪ್ರಸಂಗದಲ್ಲಿ ನನ್ನ ಕರ್ಣನ ಪಾತ್ರಕ್ಕೆ ಅರ್ಜುನ ಹೇಳಿದ ಸಹೃದಯಿ ಜೋಶಿಯವರು
ಮಿತ್ರ ಜೋಶಿಯವರ ಎಲ್ಲಾ ಮಗ್ಗುಲುಗಳನ್ನೂ ಪರಿಚಯಿಸಲು ಒಂದು ವಾರದ
ಕಾರ್ಯಕ್ರಮವಾದರೂ ಬೇಕು. ಸಮಯದ ಮಿತಿಯನ್ನು ಗಮನದಲ್ಲಿಟ್ಟುಕೊಂಡು
ಕೆಲವೇ ವಿಷಯಗಳನ್ನು ಪ್ರಸ್ತುತಪಡಿಸಿದ್ದೇನೆ. ಅಭಿನಂದನಾ ಸಮಿತಿಯವರಿಗೆ ಇನ್ನೊಮ್ಮ
ವಂದಿಸುತ್ತಾ ಮಿತ್ರ ಜೋಶಿಯವರಿಗೂ, ಅವರ ಕೌಟುಂಬಿಕರಿಗೂ ಆಯುರಾರೋಗ್ಯ
ಸಂತೃಪ್ತಿಗಳು ಒದಗಿಬರಲೆಂಬ ಶುಭಕಾಮನೆಗಳನ್ನು ತಿಳಿಸುತ್ತಾ ವಿರಮಿಸುತ್ತೇನೆ.
ನಮಸ್ಕಾರ.
◆ ◆ ◆
ವಾಗರ್ಥ ಗೌರವ /7