ಭಟ್ಟರು “ಜೋಶಿಯವರೆಂದರೆ ಒಂದು ವಿಶ್ವಕೋಶ” ಎಂದುದು. ದಿನವಹಿ ಆಗುಹೋಗು
ಗಳ ಬಗೆಗೆ ಒಬ್ಬ ಕಾದಂಬರಿಕಾರನಲ್ಲಿರಬೇಕಾದ ಸೂಕ್ಷಗ್ರಹಿಕೆ, ತರ್ಕಬದ್ಧ ವಿಶ್ಲೇಷಣೆ
ಅವರಲ್ಲಿದೆ.
ಈ ಸಂದರ್ಭದಲ್ಲಿ ನಾನೊಂದು ಸ್ಪಷ್ಟಿಕರಣವನ್ನು ನೀಡಲೇಬೇಕು. ವಿಚಾರಗೋಷ್ಠಿ
ಯೊಂದರಲ್ಲಿ ಇಲ್ಲಿ ನನ್ನ ಹೆಸರು ಉದ್ಧತವಾದ್ದರಿಂದ ನನಗಿದು ಅನಿವಾರ್ಯ.
“ಅರ್ಥಗಾರಿಕೆಯಲ್ಲಿ ಶ್ರುತಿಪ್ರಜ್ಞೆ ಬೇಡವೆನ್ನುವವರು ಜೋಶಿ, ಅರ್ಥಗಾರಿಕೆಯಲ್ಲಿ ಭಾವುಕತೆ
ಅವರಲ್ಲಿಲ್ಲ. ಹಾಗಿದ್ದರೂ ಕಳೆದ ಅರ್ಧಶತಮಾನದ ಕಾಲ ಅವರ ಶೈಲಿ ಜನಮನ್ನಣೆ
ಗಳಿಸಿದೆ” ಎಂದು ಒಬ್ಬ ಉಪನ್ಯಾಸಕರು ಪ್ರತಿಪಾದಿಸಿ ಈ ಕುರಿತಾಗಿ ನನ್ನೊಂದಿಗೆ
ಜೋಶಿಯವರಿಗೆ ಮತಭೇದವಿದೆ ಎಂದು ಸೂಚಿಸಿದರು. ಇದು ಹಿಂದೊಮ್ಮೆ
ವಿಚಾರಗೋಷ್ಠಿಯೊಂದರಲ್ಲಿ ಜೋಶಿಯವರು ಹೇಳಿದ್ದೇನು? ನಾನು ಹೇಳಿದ್ದೇನು?
ಎನ್ನುವುದರ ವಿವರವರಿಯದೆ ಬಂದ ಅಭಿಪ್ರಾಯ. ನಾನೆಲ್ಲೂ ಅರ್ಥಗಾರಿಕೆಯನ್ನು
'ಪದ'ವಾಗಿ ಆಲಿಸುತ್ತಾ ನಡೆಸಬೇಕೆಂದು ಪ್ರತಿಪಾದಿಸಿದ್ದಿಲ್ಲ. ಹಾಡುತ್ತಾ ಮುಂದಿನ
ಪದದ ಎತ್ತುಗಡೆ ಮಾಡುವ ಪರಂಪರೆ ಇಲ್ಲಿತ್ತು. ಅದು ಬೇರೆ. ಭಾಗವತರು ಹಾಡಿದ
ಪದದ ಗುಂಗಿನ ಮುಂದುವರಿಕೆಯಾಗಿ ಅರ್ಥಧಾರಿಯ ಕಂಠಗುಣದ ಬಳಕೆಯಾಗ
ಬೇಕೆಂಬುದು “ಅರ್ಥದಲ್ಲಿ ಶ್ರುತಿ ಪ್ರಜ್ಞೆ” ಎಂಬುದರ ತಾತ್ಪರ್ಯ. ಇದರಲ್ಲಿ ನನಗೂ
ಜೋಶಿ ಅವರಿಗೂ ಮತಭೇದವಿಲ್ಲ. ನಿನ್ನೆ ಮತ್ತು ಇವತ್ತು ಎರಡು ಭಿನ್ನ ವಯೋಮಾನಗಳ
ಭೀಷ್ಮನ ಪಾತ್ರವನ್ನು ಜೋಶಿಯವರು ನಿರ್ವಹಿಸಿದ್ದಾರೆ. ಎರಡೂ ಪಾತ್ರಾಭಿನಯಗಳಲ್ಲಿ
ಪ್ರಸಂಗದ ಪದಗಳ ಭಾವಪೂರ್ಣತೆಯೂ, ದನಿಯ ಶ್ರುತಿಬದ್ಧತೆಯೂ ಜೋಶಿಯವರ
ಮಾತುಗಾರಿಕೆಯಲ್ಲಿ ಪೂರ್ಣಪ್ರಮಾಣದಲ್ಲಿ ವ್ಯಕ್ತವಾಗಿರುವುದನ್ನು ನೀವು ನೋಡಿದ್ದೀರಿ.
ಇದು ಬಿಟ್ಟು ಉಪನ್ಯಾಸ, ಅರ್ಥಗಾರಿಕೆ, ಉಭಯಕುಶಲೋಪರಿ ಮಾತುಕತೆ ಎಲ್ಲಾ
ಒಂದೇ ಬಗೆ ಎನ್ನುವವರು ಯಾವ ಕಾರಣಕ್ಕೇ ಆಗಲಿ ಎಷ್ಟು ವಿಜೃಂಭಿಸಿದರೂ
ಅವರು ತಾಳಮದ್ದಳೆ ಕಲಾಕಾರರಾಗಿ ಸ್ಥಾಪನೆಗೊಳ್ಳರು.
ಯಕ್ಷಗಾನ ಅರ್ಥಗಾರಿಕೆಯಲ್ಲಿ ಕಲಾಕಾರ ಪ್ರತಿನಿಧಿಸಬೇಕಾದುದು ಮಾಮೂಲಿ
ಮನುಷ್ಯರ ಜೀವನದ ಒಳತೋಟಿಗಳನ್ನಲ್ಲ. ಪ್ರಸಂಗದ ಕತೆಗಳಲ್ಲಿ ಚಿತ್ರಿತರಾಗಬೇಕಾದುದು
ಸೂರ್ಯವಂಶದ, ಚಂದ್ರವಂಶದ ರಾಜಮನೆತನಗಳ ನಾಯಕರ ಜೀವನ.
ಸೂರ್ಯವಂಶದ ರಾಜರು ಹೇಗಿದ್ದಿರಬಹುದು? ದಯವಿಟ್ಟು ಈ ಸಭಾಂಗಣದಲ್ಲಿ
ನನ್ನ ಎಡಗಡೆ ಗೋಡೆಯಲ್ಲಿ ಸ್ಥಾಪಸಿರುವ ಚಿತ್ರವನ್ನೊಮ್ಮೆ ನೋಡಿರಿ. (ಅಲ್ಲಿ ಕೀರ್ತಿಶೇಷ
ಜಯಚಾಮರಾಜೇಂದ್ರ ಒಡೆಯರ್ ಅವರ ಯೌವನದ ಚಿತ್ರವಿದೆ.) ಇಂಥವರು ನಮ್ಮ
ಯಕ್ಷಗಾನ ಪ್ರಸಂಗಗಳ ಕಥಾನಾಯಕರು, ಕಾಳಿದಾಸ ಹೇಳಿದ್ದಾನಲ್ಲ!
ಆಕಾರಸದೃಶಃಪ್ರಜ್ಞಃ ಪ್ರಜ್ಞಯಾ ಸದೃಶಾಗಮಃ ।
ಆಗಮೈಃ ಸದೃಶಾರಂಭಃ ಆರಂಭಸದೃಶೋದಯಃ ॥
ಭವ್ಯವಾದ ಆಕಾರಕ್ಕೆ ತಕ್ಕುದಾದ ಎತ್ತರದ ಪ್ರಜ್ಞೆ, ಅದಕ್ಕೆ ತಕ್ಕ ವಿದ್ಯಾರ್ಜನೆ, ಅದಕ್ಕೆ
ವಾಗರ್ಥ ಗೌರವ / 49