ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪೂರ್ವಜನ್ಮದ ವೃತ್ತಾಂತ
೧೩


ಬ್ಬನೇ ಈ ಕೋಟೆಯನ್ನು ಕೈವಶಮಾಡಿಕೊಳ್ಳುವ ಪ್ರಯತ್ನವನ್ನು ಮಾಡು ತ್ತೇನೆ, ಆದರೆ ಈಮಾತು ಹಕೀಮನ ಮನಸ್ಸಿಗೆ ಬರಲಿಲ್ಲ ಆಗ ಹಕೀಮನು ಅಂದದ್ದೇನಂದರೆ;- ಈ ದೇಶವನ್ನು ಲೂಟಿಮಾಡಿ ಹಾಳುಮಾಡಿ ಬಿಡಬೇಕೆಂ ದು ಬಾದಶಹನ ಅಪ್ಪಣೆಯಾಗಿದೆಯೇ ಹೊರ್ತು ಈ ಪ್ರದೇಶವನ್ನು ಕೈವಶ ಮಾಡಿಕೊಂಡು ಆ ಬಂಡುಗಾರನನ್ನು ಹಳ್ಳಿಗೆ ತರಬೇಕೆಂದು ಬಾದಶಹನು ಹೇಳಿರುವದಿಲ್ಲ ಅದರಿಂದ ನಾವೆಲ್ಲರೂ ಕೂಡಿಕೊಂಡು ಶತ್ರುಗಳನ್ನು ಕೊಲ್ಲು ತ್ತಬೆನ್ನಟ್ಟಿ ಅವರ ಮೂಲಸ್ಥಾನದವರೆಗೆ ಹೋಗೋಣ ಎಂದು ಹೇಳಿದನು,

ಅದಕ್ಕೆ ಜೈನಖಾನು ಅಂದದ್ದೇನಂದರೆ;- ಇದು ಒಳ್ಳೆ ದುಃಖದ ಪ್ರ ಸಂಗವು, ಯಾಕಂದರೆ ಅತಿಸಾಹಸಮಾಡಿ ಕೈವಶಮಾಡಿಕೊಂಡಂಥ ದೇಶವ ನ್ನು ಅನ್ಯಾಕ್ರಾಂತವಾಗಿ ಮಾಡಿ ಹೋಗುವದೆಂದರೆ ದು:ಖದಸಂಗತಿಯಲ್ಲವೆ ವೇ ಆದ್ದರಿಂದ ಇಲ್ಲಿಂದಲೇ ಹಿಂದಿರುಗಿದರೆ ಮನುಷ್ಯಹಾನಿಯಾದರೂ ಆಗ ಲಿಕ್ಕಿಲ್ಲ.

ರಾಜಾ ಬೀರಬಲನು ಇವರ ಮಾತುಗಳಾವನ್ನೂ ಕಿವಿಯ ಮೇಲೆ ಹಾಕಿಕೊಳ್ಳದೆ ಮರುದಿವಸವೇ ಪ್ರಯಾಣಸನ್ನದ್ಧನಾದನು ಅದನ್ನು ಕಂ ಡು ಉಳಿದ ಸರದಾರರೆಲ್ಲರೂ ನಿರುಪಾಯರಾಗಿ ತಮ್ಮ ದಂಡಾಳುಗಳನ್ನೂಳ ಗೊಂಡು ಅವನ ಸಂಗಡಲೇ ಹೊರಟರು ಆ ದಿವಸ ಐದುಹರದಾರಿ ಮಾರ್ಗ ವು ಸಾಗಿತು ಮರುದಿವಸದ ಮಾರ್ಗವು ಕಠಿಣತರವಿದ್ದರಿಂದ ಅರ್ಧಹರದಾರಿ ಸಹಸಾಗಲಿಲ್ಲ ಆಗ ಬೀರಬಲನು ಕೆಲವು ಜನದಂಡಾಳುಗಳನ್ನು ಒಡಗೊಂ ಡು ಒಬ್ಬನೇ ಘಟ್ಟದ ಮಾರ್ಗವನ್ನು ನಡೆಯಹತ್ತಿ ಕತ್ತಲೆಯಾಗುವದರೊ ಳಗೆ ಘಟ್ಟವನ್ನೇರಿ ಹೋಗಿ ನಿಂತುಕೊಂಡನು ಕೂಡಲೆ ಅಲ್ಲಿ ವಾಸಮಾಡಿ ಕೊಂಡಿದ್ದ ಕೆಲವು ಪಠಾಣರು ಇವರ ಮೇಲೆ ಹಲ್ಲಾ ಮಾಡ ಹತ್ತಿದರು ದಂ ಡಾಳುಗಳು ಮಾರ್ಗಾಯಾಸದಿಂದ ಕಂಗೆಟ್ಟವರಾದ್ದರಿಂದಲೂ, ಕತ್ತಲೆಯ ದಿವಸವಿದ್ದದರಿಂದಲೂ ದಂಡಾಳುಗಳು ನಿಂತಲ್ಲೆ ನಿಂತುಕೊಳ್ಳಲ ಸಮರ್ಥರಾ ಗಿ ಹಿಂದಕ್ಕೆ ಹಿಂದಕ್ಕೆ ಕಾಲ್ದೆಗೆಯ ಹತ್ತಿದರು ಆಸಮಯದಲ್ಲಿ ಪಠಾಣರು ನಡುವೇ ಬಂದು ಯುದ್ಧ ಮಾಡ ಹತ್ತಿದ್ದರಿಂದ ಬೀರಬಲನ ಸೈನ್ಯವು ಇಬ್ಬಾ ಗವಾಯಿತು ಚೈನಖಾನನು ಒಂಟಿಗನಾಗಿ ಬಂದು ಬೀರಬಲನನ್ನು ಕೂಡಿ ಕೊಂಡನು ಈಪ್ರಕಾರ ಅತಿ ಬಿಕ್ಕಟ್ಟಾದ ಸ್ಥಳದಲ್ಲಿ ಸೈನ್ಯವು ಬಂದು ನಿಂ ತುಕೊಳ್ಳುವರಲ್ಲಿ ಹಿಂದೆಯೂ ಮುಂದೆಯೂ ಮಾರ್ಗವನ್ನು ಆವರೋ ಧ ಮಾಡಿಕೊಂಡು ನಿಂತು ಕಾದಹತ್ತಿದರು ಎತ್ತುಗಳಮೇಲೆಯೂ ಒಂಟೆಗಳ ಮೇಲೆಯೂ ಹೇರಿರುವ ಆಹಾರ