ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೨
ಪೂರ್ವ ಜನ್ಮದ ವೃತ್ತಾಂತ,


ಯೂಸಫಜಯಿಯು ಬಹು ದಿವಸಗಳಾದರೂ ಪರಾಜಿತನಾಗದಿರಲು, ಪುನಃ ಸೈನ್ಯದೊಡನೆ ಯಾರನ್ನು ಕಳುಹಿಸಬೇಕೆಂದು ಬಾದಶಹನು ಆಲೋ ಚನೆ ಮಾಡತೊಡಗಿದನು. ಆಗ ಅಬುಲಫಜಲ್ಲನು ನಾನು ಹೋಗುವೆನೆಂದು ಹೇಳಿದನು, ಬೀರಬಲನು ನಾನು ಹೋಗುತ್ತೇನೆಂದು ಇಚ್ಛೆಯನ್ನು ತೋ ರಿಸಿದನು. ಆಗ ಬಾದಶಹನು ಅವರೀರ್ವರ ಹೆಸರನ್ನು ಬರೆದು ಚೀಟಿಯನ್ನು ಹಾಕಿದನು ಅದರಲ್ಲಿ ಬೀರಬಲನ ಬೇಟಿಯೇ ಹೊರಟಿತು ಆಗ ಬಾದಶಹನು ಕಾನಮಖ್ಯಾತಾ, ಗದಾಬೇಗ, ಆಹಮದಬೇಗ, ಹಾಜಿತಾಶಬೇಗ, ಹಿಜಾ ಮುದ್ದಿನಖಾನ ಮೊದಲಾದ ಸರದಾರರನ್ನು ಕೊಟ್ಟು, ಬೀರಬಲನನ್ನು ಅಫಗಾನಿಸ್ಥಾನಕ್ಕೆ ಕಳುಹಿಕೊಟ್ಟನು.

ರಾಜಾ ಬೀರಬಲನು ಅಫಗಾನಿಸ್ಥಾನದಲ್ಲಿ ಬಂಡಾಯವೆದ್ದ ಸ್ಥಲಕ್ಕೆ ಹೋಗಿ ತಲುಪಿ ಪಠಾಣರನ್ನು ಹೊಡಿಯುತ್ತ ಹಿಂದಕ್ಕೆ ಸರಿಸುತ್ತ ಗುಡ್ಡದ ಕೆಣಿವೆಯಲ್ಲಿ ಪ್ರವೇಶಮಾಡಿದನು ಆ ಪ್ರದೇಶವು ಕೇವಲ ಗುಡ್ಡಗಾಡು, ಬೀರಬಲನ ಸೈನ್ಯವು ಒಳ್ಳೇ ಇಕ್ಕಟ್ಟಾದ ಸ್ಥಳದಲ್ಲಿ ಹೋಗಹತ್ತಿರ ಪಠಾಣ ಸೈನ್ಯವು ಹಿಂದೆಮುಂದೆ ಬಂದು ಮಾರ್ಗವನ್ನು ಕಟ್ಟಿ ಯುದ್ಧ ಮಾಡುತ್ತಿತು ಆ ಯುದ್ಧದಲ್ಲಿ ಬಾದಶಹನ ಸೈನ್ಯವು ಹಾನಿಯಾಯಿತು, ಅಂತೂ ಇಂತೂ ಮರುದಿವಸ ಬೀರಬಲನು ಉಳಿದ ಸೈನ್ಯದೊಂದಿಗೆ ಬಯಲು ಪ್ರದೇಶವನ್ನು ಸೇರಿದನು ಆಗ ಬಾದಶಹನು ಕಳುಹಿಸಿಕೊಟ್ಟಿದ್ದ ಹಕೀಮ ಅಬ್ದುಲ್‌ಫಾಹ ಎಂಬ ಸರದಾರನು ಕೆಲವು ಸೈನ್ಯದೊಡನೆ ಬಂದು ತಲುಪಿದನು, ಅವರಿಬ್ಬರೂ ಕೂಡಿಕೊಂಡು ಬಾಜೋರ ಎಂಬ ಸ್ಥಳಕ್ಕೆ ಹೋದರು, ಮುಂದೆ ಒಂದೆರಡು ದಿವಸಗಳಲ್ಲಿಯೇ ಆ ಸ್ಥಳವು ಇವರ ಕೈವಶವಾಯಿತು. ಅಲ್ಲಿಂದ ಜಗದೇರದ ಲಿದ್ದ ಕೋಕಾನ ಸಹಾಯಕ್ಕೆ ಹೊರಟರು, ಅಲ್ಲಿ ಹೋದ ಮರುದಿವಸವೇ ಈ ತ್ರಿವರ್ಗದಲ್ಲಿ ವೈಮನಸ್ಸುಂಟಾಯಿತು ಮನಸ್ಸಿನಲ್ಲಿದ್ದ ದ್ವೇಷಬುದ್ಧಿಯು ಪ್ರಕಟವಾಯಿತು ಬಾದಶಹನ ಕಾರ್ಯವು ಕೆಟ್ಟು ಹೋದೀತೆಂಬ ಚಿಂತೆಯು ಯಾರಮನಸ್ಸಿನಲ್ಲಿಯೂ ಬರಲಿಲ್ಲ, ಕೊಕಾನು ಮಾಡಿದ ಪ್ರಯತ್ನವೆಲ್ಲಾ ನಿಷ್ಪಲವಾಯಿತು ರಾಜಾ ಮತ್ತು ಹಕೀಮ ಇವರೀರ್ವರಲ್ಲಂತೂ ವಿರೋ ಧಭಾವವು ಅಧಿಕವಾಯಿತು ಆದರೂ ಬೀರಬಲನು ಸಮಾಧಾನವನ್ನು ತಂ ದುಕೊಂಡು ಕೋಕಾ ಮತ್ತು ಹಕೀಮ ಇವರಿಬ್ಬರಿಗೂ ಹೇಳಿದ್ದೇನಂದರೆ- "ನೀವೀರ್ವರೂ ಕೆಲವುಸೈನ್ಯವನ್ನು ಇಟ್ಟು ಕೊಂಡು ಜಗದೇರ ಕೋಟಿಯ ನ್ನು ಕೈವಶಮಾಡಿಕೊಳ್ಳಿರಿ, ನಾನು ಪಠಾಣರಮೇಲೆ ಸಾಗಿಹೋಗುತ್ತೇನೆ ಇದು ನಿಮ್ಮ ಮನಸ್ಸಿಗೆ ಬರದಿದ್ದರೆ ನೀವೇ ಪಠಾಣರಮೇಲೆಹೋಗಿರಿ ನಾನೂ