ಟ್ಟಣದ ಅರಸನ ಸ್ಮರಣೆಯಾಯಿತು, ಪ್ರಯಾಗಕ್ಕೆ ರೇವಾರಾಜ್ಯವು ಅತಿನಿ
ಕಟವಾಗಿ ಇತ್ತು, ಬಾದಶಹನು ಅವನಮೇಲೆ ಸೈನ್ಯವನ್ನು ಕಳಿಸಬೇಕೆಂದು
ಯೋಚನೆಮಾಡಿದನು ಆ ಸಮಯದಲ್ಲಿ ಆ ರಾಮಚಂದ್ರನ ಮಗನು ಬಾದಶ
ಹನ ದಬಾ೯ರದಲ್ಲಿಯೇ ಇದ್ದನು, ಆಗ ಅವನು ಎದ್ದು ನಿಂತು ನಿವೇದನಮಾ
ಡಿಕೊಂಡ್ಡಿದ್ದೇನೆಂದರೆ;" ಇಷ್ಟು ಅತ್ಯಲ್ಪ ಕಾರ್ಯಕ್ಕೊಸುಗ ಸೈನ್ಯವನ್ನ
ಕಳುಹಿಸಿಕೊಡುವ ಅವಶ್ಯಕತೆಯಿಲ್ಲ, ಯಾವನಾದರೊಬ್ಬ ಮಂತ್ರಿಯನ್ನು
ಕಳುಹಿಸಿಕೊಟ್ಟರೆ ಸಾಕು ಅವನ ಸಂಗಡಲೇ ನನ್ನ ತಂದೆಯು ಬಂದೇಬರು
ತ್ತಾನೆ ” ಎಂದು ಅರುಹಿದನು. ಆಗ ಭಾದಶಹನು ಆ ರಾಜನ ಪ್ರತಿಷ್ಟೆಗೆ
ಸರಿಯಾಗಿ ಬೀರಬಲನನ್ನೆ ಕಳುಹಿಕೊಟ್ಟರೆ ಉತ್ತಮವೆಂದು ಯೋಚಿಸಿ
ಬೀರಬಲನನ್ನೇ ಆ ಕಾರ್ಯಕ್ಕೆ ನಿಯಮಿಸಿದನು ಬೀರಬಲನು ಬಾಂಧವಗಡಕ್ಕೆ
ತಲಪುವದರೊಳಗಾಗಿ ರಾಜಾ ರಾಮಚಂದ್ರನಿಗೆ ಈ ವರ್ತಮಾನವು ತಿಳಿದು
ಬಂದದ್ದರಿಂದ ಅವನು ತನ್ನ ಪರಿವಾರದಸಮೇತನಾಗಿ ಬಂದು ಬೀರಬಲನನ್ನು
ಎದುರುಗೊಂಡು ಕರೆದುಕೊಂಡು ಹೋಗಿ ಬಹಳ ಸನ್ಮಾನಮಾಡಿದನು. ಆ
ಮೇಲೆ ಬೀರಬಲನ ಜೊತೆಯಲ್ಲಿಯೇ ದಿಲ್ಲಿಗೆ ಬಂದು ಬಾದಶಹನಿಗೆ ಭೇಟಿ
ಯಾದನು.
ರಾಜಾ ಬೀರಬಲನು ಬಾದಶಹನ ಮನಸ್ಸನ್ನು ಒಲಿಸಿಕೊಂಡುಬಿಟ್ಟಿ ದ್ದನು, ಒಂದರೆಕ್ಷಣಾ ಸಹಾ ಬಾದಶಹನು ಬೀರಬಲನನ್ನು ಕಣ್ಮರೆಯಾಗ ಗೊಡುತ್ತಿದ್ದಿಲ್ಲ. ಆದರೆ ಬೀರಬಲನ ಮೃತ್ಯುವೇ ಸಮೀಪಿಸಿದ್ದರಿಂದ ಅಥಗಾ ನಿಸ್ತಾನದಲ್ಲಿ ಬಂಡಾಯವನ್ನು ಎಬ್ಬಿಸಿದ ಯಸಫಜಯೀ” ಎಂಬ ಪಠಾ ಣನಮೇಲೆ ಕಳುಹಿಸಿಕೊಡಬೇ ಕೆಂದು ಬಾದಶಹನ ಮನಸ್ಸಿನಲ್ಲಿ ಬಂತು, ಆದರೂ ಅವನನ್ನು ಕಳುಹಿಸದೆ ಬೈನಾಕೊಕಾ ಎಂಬ ಸರದಾರನನ್ನು ಕೊಟ್ಟು ಕಳುಹಿಸಿದನು. ಯೂಸಫಜಯಿಯು ಬುನೇರ, ಮತ್ತು ಬಾಜೋರ ಎಂಬಲ್ಲಿ ಒಳ್ಳೆ ಪುಂಡತನವನ್ನು ನಡೆಸಿದ್ದನು, ಅವನಲ್ಲಿ ಕ್ರೂರರಾದ ಎಷ್ಟು ಜನ ಪಠಾಣರಿದ್ದರು, ಜೈನಾನು ಪ್ರಥಮದಲ್ಲಿಯೇ ಪರಾಜಯಪಟ್ಟನು . ಆಗ ಅವನು ಬಾದಶಹನಿಗೆ ತನ್ನ ಸಹಾಯಕ್ಕೆ ಇನ್ನೂ ಹೆಚ್ಚಾಗಿ ಸೈನ್ಯವನ್ನು ಕಳುಹಿಸಿಕೊಡಬೇಕೆಂದು ಪತ್ರ ಮುಖದಿಂದ ತಿಳಿಸಿದನು ಅದ ರಂತ ಎಷ್ಟೋ ಸಾರೇ ದಂಡನ್ನು ಕೊಟ್ಟು ಕಳುಹಿಸಿದನು, ಆದರೆ ಅದರಿಂದ ಏನೂ ಫಲವಾಗದೆ ಹೋಯಿತು ಕಟ್ಟಕಡೆಗೆ ಸಂವತ ೧೬೪೨-ನೇ ವರುವ ದಲ್ಲಿ ನಿರ್ವಾಹವಿಲ್ಲದೆ ಬೀರಬಲನನ್ನು ಕೊಟ್ಟು ಕಳುಹಿಸಬೇಕಾಯಿತು, ಆ ನಿಷಯವನ್ನು ಸವಿಸ್ತಾರವಾಗಿ ಕೆಳಗೆ ವಿವರಿಸಿದೆ,