ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೬೧



ರಲ್ಲಿ ಆ ಬಾಲಕಿಯ ಮಾತಾಪಿತೃಗಳು ಬಂದರು ಬೀರಬಲನು ಯಾವತ್ತು ವೃತ್ತಾಂತವನ್ನು ಹೇಳಿದನು. ಆಗ ಆ ಬಾಲಕಿಯ ತಂದೆಯು ಮಹಾಶಯ! ನನ್ನ ಮಗಳು ತೊಗರೇ ಬೆಳೆಯನ್ನು ಬೇಯಿಸಹತ್ತಿರುವಳು ಅದಕ್ಕೆ ತೊಗರೇ ಕಟ್ಟಿಗೆಯನ್ನೇ ಉರಿ ಹಚ್ಚಿದ್ದಾಳೆ ನಾನು ನಮ್ಮ ಜಾತಿಯ ಒಬ್ಬ ಮನುಷ್ಯನ ಸ್ಮಶಾನಯಾತ್ರೆಗೆ ಹೋಗಿದ್ದೆನು ನನ್ನ ಸ್ತ್ರೀಯು ಉದ್ದಿನಕಾಳುಗಳಿಂದ ಬೇಳೆಯನ್ನು ಮಾಡಲಿಕ್ಕೆ ಹೋಗಿದ್ದಳು; ಎಂದು ಹೇಳಿದನು ಆಗ ಬೀರಬಲನು ಆ ಮನುಷ್ಯನಿಗೆ, ಬಾದಶಹನು ಹೇಳಿದ ಪ್ರಹೇಲಿಕೆಯ ಅರ್ಥವನ್ನು ಹೇಳೆಂದು ಕೇಳಿದನು ಆಗ ಆ ಮನುಷ್ಯನು - ಎರಡು ಆಚ್ಛಾ ದನಗಳೆಂದರೆ ಕೆಳಗೆ ಧರಣಿ ಮೇಲೆ ಆಕಾಶ ಕರಬೂಜಿಯ ಹಣ್ಣಿನಂತೆ ಇದ್ದವನು ಮನುಷ್ಯಪ್ರಾಣಿಯು ಎರಡೂ ಕಡೆಯಲ್ಲಿ ತೃಣಾಚ್ಛಾದಿತವಾಗಿದ್ದ ಚೂತ ಫಲವು ಆವತೃಣದ ಶಕೆಯಿಂದ ಹಣ್ಣಾಗಿ ಹೋಗುವಂತೆ ಮನುಷ್ಯ ಪ್ರಾಣಿಯು ಭೂಮ್ಯಾಕಾಶಗಳೆಂಬ ಆಚ್ಛಾದನಗಳನಡುವೆ ಸಿಲುಕಿಬಿದ್ದು, ಮೃತ್ಯುವಶನಾಗುತ್ತಾನೆ ಎಂದು ಹೇಳಿದನು.

ಆಗ ಬೀರಬಲನು ಆ ಮನುಷ್ಯನಿಗೆ ಉಚಿತವನ್ನಿತ್ತು ದಿಲ್ಲಿಗೆ ಬಂದನು ಮರುದಿವಸ ಸಭಾಸ್ಥಾನಕ್ಕೆ ಹೋಗಿ ಬಾದಶಹನಿಗೆ ಪ್ರಹೇಲಿಕೆಯ ಆರ್ಥವನ್ನು ಹೇಳಿದನು ಅದನ್ನು ಕೇಳಿ ಬಾದಶಹನು ಅತಿಪ್ರಸನ್ನನಾದನು.

- (೨೦೬,ಡೋಣಿಯನ್ನು ಗೊತ್ತುಮಾಡಿಕೊಂಡು ಬರುತ್ತೇನೆ.)-

ಒಂದು ದಿವಸ ಬಾದಶಹನೂ ಬೀರಬಲನೂ ಸಂಚರಿಸುತ್ತ ಸಂಚರಿಸುತ್ತ ಯಾವದೋ ಒಂದು ಜನವಸತಿಗೆ ಹೋದರು ಅಕಬರನು ಒಬ್ಬ ಮನುಷ್ಯನನ್ನು ಕರೆದು ನಿನ್ನ ಹೆಸರೇನು? ಎಂದು ಕೇಳಿದನು ಅದಕ್ಕೆ ಆ ಮನುಷ್ಯನು “ ಗಂಗಾ ” ಎಂದು ಉತ್ತರ ಕೊಟ್ಟನು ಪುನಃ ಬಾದಶಹನು ನಿನ್ನ ತಂದೆಯ ಹೆಸರೇನು? ಎಂದು ಕೇಳಲು, ಅವನು " ಯಮುನಾ ” ಎಂದು ಉತ್ತರಕೊಟ್ಟನು ಆಮೇಲೆ ಬೀರಬಲನ ಪ್ರಶ್ನೆಯಿಂದ " ಅವನ ಅಕ್ಕನ ಹೆಸರು ನರ್ಮದೆಯೆಂದೂ, ತಾಯಿಯ ಹೆಸರು” "ಸರಸ್ವತಿ ” ಎಂದೂ ತಿಳಿಯಬಂತು ಆಗ ಬೀರಬಲನು ಆ ಮನುಷ್ಯನಿಗೆ ಸಾಕು, ಸಾಕು, " ಸ್ವಲ್ಪತಡೆ ನಾನು ನಾವೆನ್ನೊಂದನ್ನು ಗೊತ್ತು ಮಾಡಿಕೊಂಡು ಬರುತ್ತೇನೆ ಇಲ್ಲದಿದ್ದರೆ ಈ ನದಿಗಳ ಪ್ರವಾಹದಲ್ಲಿ ತೇಲಿ ಹೋಗಬೇಕಾದೀತು.

-( ೨೦೭. ಜೂತೇಕೇ ಮಾರೆ ಖಡೇಹೈ, )-

ಬಾದಶಹನು ತನ್ನ ಮಂತ್ರಿ ಜನಗಳೊಡನೆ ಜುಮ್ಮ ಮಸೀದಿಗೆ ನಮಾಜಿ ( ದೇವರಪ್ರಾರ್ಥನಿಗೆ ) ಹೋಗಿದ್ದನು ಆಗ ಅಕಸ್ಮಾತ್ತಾಗಿ ಪೈಜಿ