ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೨
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ಎಂಬವನ ವಾದರಕ್ಷೆಗಳನ್ನು ಯಾರೋ ಕದ್ದು ಒಯ್ದಿದ್ದರು ಆಗ ಅವನು ಅಲ್ಲಿ ಇಲ್ಲಿ ಪಾದರಕ್ಷೆಗಳ ಶೋಧ ನಡೆಯಿಸಿದನು ಅಷ್ಟರಲ್ಲಿ ಬಾದಶಹನು ತನ್ನ ನಿಯಮವನ್ನು ತೀರಿಸಿಕೊಂಡು, ಹೊರಗೆಬಂದು ಅರಮನೆಗೆ ಹೊರ ಡಲುನುವಾಗಿ ನಿಂತುಕೊಂಡು ಪೈಜಿಯನ್ನು ಕುರಿತು - ಯಾಕೆ ? ಬರುವ ದಿಲ್ಲವೇನು ? ಎಂದು ಕೇಳಿದನು ಆಗ ಬೀರಬಲನು - ಜೂತೆಕ ಮಾರೆ ಖಡೇ ಹೈ ” ಎಂದು ಹೇಳಿದನು ಇದನ್ನು ಕೇಳಿ ಬಾದಶಹನು ಕಿಲಕಿಲ ನಕ್ಕನು.
ಟೀಪು:- ಜೂತೋಕೆ ಮಾರೆ ಎಂದರೆ ಪಾದರಕ್ಷೆಗಳ ಸಲುವಾಗಿ ಎಂದೂ ಪಾದರಕ್ಷೆಗಳ ಪೆಟ್ಟಿನ ಸಲುವಾಗಿ ಎಂದೂ ಎರಡು ಅರ್ಥವಾಗುತ್ತವೆ.

-( ೨೦೮. ಮೂರ್ಖರ ಪತ್ರಿಕೆ. )-

ಒಂದಾನೊಂದು ಸಮಯದಲ್ಲಿ ಒಬ್ಬ ಅರಬನು ಕೆಲವು ಉತ್ತಮಾಶ್ವಗಳನ್ನು ತೆಗೆದುಕೊಂಡು ದಿಲ್ಲಿಗೆ ಬಂದು, ಬಾದಶಹನಿಗೆ ಬೆಟ್ಟಿಯಾದನು ಅಕಬರನು ಕೆಲವು ಅಶ್ವಗಳನ್ನು ಕ್ರಯಕ್ಕೆ ತೆಗೆದುಕೊಂಡನು ಆ ಅಶ್ವಗಳ ಸುಲಕ್ಷಣ ಲಕ್ಷಿತವಾದ ಮೈಕಾಂತಿಯನ್ನು ನೋಡಿ, ಮೋಹವುಳ್ಳವನಾಗಿ, ಇನ್ನೊಂದು ಸಾರೆ ಇಂಥ ಉತ್ತಮಾಶ್ವಗಳನ್ನು ತಂದು ಕೊಡು ! ಎಂದು, ಆ ಅರಬನಿಗೆ ಒಂದು ಲಕ್ಷ ರೂಪಾಯಿಗಳನ್ನು ಮುಂಚಿತವಾಗಿಯೇ ಕೊಟ್ಟು ಬಿಟ್ಟನು ಆ ವರ್ತಕನು ರೂಪಾಯಿಗಳನ್ನು ಕಟ್ಟಿಕೊಂಡು ಹೋರಟು ಹೋದನು ಅವನ ಹೆಸರೇನು? ಅವನು ಎಲ್ಲಿಂದ ಬಂದನು? ಎಲ್ಲಿಗೆ ಹೋದನು? ಎಂಬ ಸಂಗತಿಯನ್ನು ಯಾರೂ ವಿಚಾರಿಸಿ ತಿಳಿದುಕೊಳ್ಳಲಿಲ್ಲ.
ಮುಂದೆ ಕೆಲವು ದಿವಸಗಳಾದಮೇಲೆ ಬಾದಶಹನು ಪಟ್ಟಣದಲ್ಲಿದ್ದ ಮೂರ್ಖರ ಪತ್ರಿಕಯೊಂದನ್ನು ಸಿದ್ಧಮಾಡು ! ಎಂದು ಬೀರಬಲನಿಗೆ ಅಪ್ಪಣೆ ಮಾಡಿದನು. ಬೀರಬಲನು ಆ ಪತ್ರಿಕೆಯ ಆರಂಭದಲ್ಲಿಯೇ ಅಕಬರ ಬಾದಶಹನ ಹೆಸರನ್ನು ಬರೆದು, ಅದರ ಕೆಳಗೆ ನೂರಾರು ಜನಗಳ ಹೆಸರನ್ನು ಬರೆದು ಬಾದಶಹನ ಮುಂದೆ ಇಟ್ಟನು ಅದನ್ನು ನೋಡಿದಕೂಡಲೆ ಬಾದಶಹನಿಗೆ ಅತಿಕೋಪವು ಬಂತು ಆಗ ಬೀರಬಲನನ್ನು ಕುರಿತು - ನೀನು ನನ್ನನ್ನು ಈಪರಿ ಅವಮಾನ ಮಾಡಿದ್ದು ಯಾಕೆ? ಎಂದು ಕೇಳಿದನು ಅದಕ್ಕೆ ಬೀರಬಲನು - ಆ ಅರಬನ ಹೆಸರು ಗ್ರಾಮ, ಮೊದಲಾದ ಯಾವ ಸಂಗತಿಗಳನ್ನು ತಿಳಿದು ಕೊಳ್ಳದೆ, ಅವನಿಗೆ ರೂಪಾಯಿಗಳನ್ನು ಕೊಟ್ಟು ಬಿಟ್ಟ ಮೇಲೆ ನಿಮ್ಮ ಹೆಸರನ್ನು ಈ ಪತ್ರಿಕೆಯಲ್ಲಿ ಆರಂಭದಲ್ಲಿ ಯಾಕೆ ಬರಿಯ ಕೂಡದು? ಎಂದು ಕೇಳಿದನು ಅದಕ್ಕೆ ಬಾದಶಹನು - ಒಂದು ವೇಳೆ ಆ ಅರಬನ