ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದ ಕಥೆಗಳು.
೩೬೩



ಅಶ್ವಗಳನ್ನು ತೆಗೆದುಕೊಂಡು ಬಂದರೆ, ಎಂದು ಕೇಳಿದನು. ಆ ಕೂಡಲೆ ಬೀರಬಲನು - “ ನಿಮ್ಮ ಹೆಸರನ್ನು ಕಿತ್ತುಹಾಕಿ, ಆ ಸ್ಥಳದಲ್ಲಿ ಅವನ ಹೆಸ ರನ್ನು ಬರೆದಿಡ ವೆನು ” ಎಂದು ಉತ್ತರ ಕೊಟ್ಟನು ಈ ಉತ್ತರವನ್ನು ಕೇ ಳಿ ಬಾದಶಹನು ಅಧೋಪದನ ನಾದನು.

- ( ೨೦೯. ಕೃತಜ್ಞ ಮತ್ತು ಕೃತಘ್ನ,)-

ಒಂದು ದಿವಸ ಬಾದಶಹನು - ಬೀರಬಲ ! ಈ ದಿವಸ ಕೃತಜ್ಞ ಮ ತ್ತು ಕೃತಘ್ನರನ್ನು ತಂದು ತೋರಿಸು ! ಎಂದು ಅಪ್ಪಣೆ ಮಾಡಿದನು ಬೀ ರಬಲನ, ಬಹುವರಿಯಿಂದ ಯೋಚಿಸಿ ನೋಡಿದನು ಗೊತ್ತಾಗಲಿಲ್ಲ. ನಿರು ಪಾಯನಾಗಿ ಮನೆಗೆಬಂದು ಕುಳಿತುಕೊಂಡನು ಉದಾಸೀನ ವೃತ್ತಿಯನ್ನು ಸ್ವೀಕರಿಸಿಕೊಂಡು ಕುಳಿತಿರುವ ತನ್ನ ಪಿತನನ್ನು ಕಂಡು ಅವನ ತನುಜಿ ಯು ಕಾರಣವನ್ನು ಕೇಳಿದಳು ಬೀರಬಲನು ಸಮಗ್ರ ವೃತ್ತಾಂತವನ್ನು ಹೇಳಿದನು ಆಗ ಅವಳು “ ಏನೂಚಿಂತೆ ಮಾಡಬೇಡ ! ಪ್ರಾತಃಕಾಲದಲ್ಲಿ ಅ ವರನ್ನು ತೋರಿಸುವೆನು, ಎಂದಳು ಪ್ರಾತಃಕಾಲ ವಾಗುತ್ತಲೆ ಸುತೆಯ ನ್ನು ಕರೆಯಲು ಅವಳು ಪಿತನೇ, ಒಂದು ಶುನಕವನ್ನೂ, ಒಬ್ಬ ಜಾಮಾತ ನನ್ನೂ ಕರೆದುಕೊಂಡು ಹೋಗು ! ಎಂದು ಹೇಳಿದಳು ಆಕೂಡಲೆ ಬೀರಬ ಲನು ಪ್ರಸನ್ನಚಿತ್ತನಾಗಿ, ಬಾದಶಹನ ಸಮ್ಮುಖದಲ್ಲಿ ಒಯ್ದು ನಿಲ್ಲಿಸಿದನು ಆಗ ಬಾದಶಹನು ನಾನು ಹೇಳಿದ ವಸ್ತುಗಳು ಎಲ್ಲಿ ಅವೆ? ಎಂದು ಕೇಳಿದ ನು ಆಗ ಬೀರಬಲನು - ಹುಜೂರ್ ! ಈ ಶುನಕವು ಕೃತಜ್ಞ ಪ್ರಾಣಿಯು ಇದು ಯಾವಾಗಲೂ ಒಡೆಯನನ್ನು ಅನುಸರಿಸಿಯೇ ಇರುತ್ತದೆ. ಇದು ಯಜಮಾನನಿಗೆ ಎಂಥ ಸಂಕಟದಲ್ಲಿಯಾದರೂ ಸಹಾಯ ಮಾಡುತ್ತದೆ ಇವ ನು ಜಾಮಾತನು ಬಹು ಕೃತಘ್ನನು ಯಾಕಂದರೆ ಅತ್ತೆ ಮಾವಂದಿರು ಅವ ನಮನಸ್ಸನ್ನು ತೃಪ್ತಿ ಬಡಿಸುವದಕ್ಕೆ ದ್ರವ್ಯವನ್ನು ಕೊಟ್ಟು ಮಗಳನ್ನು ಸ್ವಾ ಧೀನಪಡಿಸಿದರೂ ಸಹ ಇವನು ಯಾವಗಡಿಗೆಯಲ್ಲಿ ಭೋಜನ ಮಾಡು ವನೋ ಆಗಡಿಗೆಯ ತಳಕ್ಕೆ ಛಿದ್ರವನ್ನು ಮಾಡದೆ ಬಿಡುವದಿಲ್ಲ ಎಂದು ಹೇ ಳಿದನು ಆಗ ಬಾದಶಹನು - ಹೀಗೆ ಇದ್ದ ಪಕ್ಷದಲ್ಲಿ ಇವನ ತಲೆ ಹೊಡಿಸಿ ಬಿಡು ! ಎಂದು ಅಪ್ಪಣೆ ಮಾಡಿದನು ಆಕೂಡಲೆ ಬೀರಬಲನು ಖಾವಂದ ! ತಾನಾದರೂ ಒಬ್ಬ ಸುರನಿಗೆ ಜಾಮಾತ ರಾಗಿರುವಿರಿ? ಎಂದು ಉತ್ತರ

ಕೊಟ್ಟನು ಬಾದಶಹನು ಲಜ್ಜಿತನಾದನು.

-( ೨೧೦. ಪಾಠ್ಠಚ

ಢಗಯಾ.)-

ಒಂದು ಸಾರೆ ಒಬ್ಬ ಬೇಗಮ್ಮಳ ಶರೀರದಲ್ಲಿ ಪೀಡೆ ಯುoಟಾಗ ಹತ್ತಿ