ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೬೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.



ತು ಅದಕ್ಕೆ ಬಾದಶಹನು ಬೀರಬಲನಿಗೆ ಹೀಗೆ ಯಾಕೆ ಆಗಿರಬಹುದು? ಎಂದು ಕೇಳಿದನು ಅದಕ್ಕೆ ಬೀರಬಲನು ಮಹಾರಾಜ ! ಯಾವದಾದರೊಂದು ಪಠ್ಠಾಚಢಗಯಾ ಹೋಗಾ, ಅಂದರೆ ಯಾವದಾದರೊಂದು ಲೇಪವನ್ನು ಹಚ್ಚಿರಿ ! ಎಂದು ಹೇಳಿದನು ಬಾದಶಹನಿಗೆ ಅವನ ವ್ಯಂಗಾರ್ಥವು ತಿಳಿದಿದ್ದ ರಿಂದ ಬಿದ್ದು ಬಿದ್ದು ನಕ್ಕನು.

( ೨೧೧, ಬ್ರಾಹ್ಮಣನನ್ನು ಮರಣದಂಡನೆಯಿಂದ ತಪ್ಪಿಸಿದ್ದು.)-

ಅಕಬರ ಬಾದಶಹನು ಒಬ್ಬ ವೃದ್ಧ ಬ್ರಾಹ್ಮಣನ ಮೇಲೆರುಷ್ಟನಾಗಿ ಮರಣ ದಂಡನೆಯನ್ನು ವಿಧಿಸಿದನು ಆ ಸಮಯದಲ್ಲಿ ಬೀರಬಲನು ಬರಲು, ಬಾದಶಹನು ಅವನನ್ನು ಕುರಿತು ಈ ದುಷ್ಟನ ವಿಷಯದಲ್ಲಿ ನೀನು ನನಗೆ ಏನೂ ಹೇಳಬೇಡ ನಾನು ಈ ವಿಷಯದಲ್ಲಿ ನಿನ್ನ ಮಾತನ್ನು ಕೇಳಲಿಕ್ಕಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆನೆ ಎಂದನು. ಆಗ ಬೀರಬಲನು ಹುಜೂರ್! ನನ್ನ ಅಭಿಪ್ರಾಯವನ್ನು ಕೇಳಬೇಡಿರಿ ! ಅವಶ್ಯವಾಗಿ ಈ ದುಷ್ಟನಿಗೆ ಶಿಕ್ಷಿಸಲಿಕ್ಕೇಬೇಕು ಎಂದನು ಬಾದಶಹನು ವಚನ ಬದ್ಧನಾದ್ದರಿಂದ ಬ್ರಾಹ್ಮಣ ನನ್ನು ಬಿಟ್ಟುಬಿಟ್ಟನು.

-(೮೧೨, ಒಂದು ಬಗ್ಗದೆ ) -

ಅಕಬರ ಬಾದಶಹನು ಒಳ್ಳೆವಿನೋದಿಯಾಗಿದ್ದನು. ಒಂದು ದಿವಸ ಅವನು ದಿಲ್ಲಿಯೊಳಗಿನ ಬನಿಯಾ ” ಅಂದರೆ ವರ್ತಕರನ್ನು ಕರೆಯಿಸಿ ನೀವು ನಗರ ವಿಕ್ಷಣೆಯ ಕೆಲಸವನ್ನು ಮಾಡಬೇಕು. ಎಂದು ಆಜ್ಞಾಪಿಸಿದನು ಅಂಜುಗುಳಿಗಳಾದ ಆ ವರ್ತಕರು ತಮ್ಮ ಮೈಮೇಲಿನ ವಸ್ತ್ರಗಳ ಪರಿವೆಯಿಲ್ಲದೆ ಬೀರಬಲನ ಬಳಿಗೆ ಬಂದು ತಮ್ಮ ದುರವಸ್ಥೆಯನ್ನೂ ದೂರ ಮಾಡು ! ಎಂದು ಹೇಳಿಕೊಂಡರು ಆಗ ಬೀರಬಲನು ಅವರಿಗೆ ತೊಟ್ಟುಕೊಂಡ ಚಲ್ಲಣವನ್ನು ತಲೆಗೆ ಸುತ್ತಿಕೊಂಡು ತಲೆಯ ಮೇಲಿನ ರುಮಾಲವನ್ನು ಉಟ್ಟು ಕೊಂಡು ರಾತ್ರಿಯಲ್ಲಿ ಬಂದು ಬಿದ್ದದೆ, ಬಂದು ಬಿದ್ದದೆ, ಎಂದು ಕೂಗುತ್ತ ಪಟ್ಟಣದಲ್ಲಿ ಸಂಚಾರಮಾಡಿರಿ ; ಎಂದು ಹೇಳಿದನು ಅದೇ ದಿವಸ ರಾತ್ರಿಯಲ್ಲಿ ಅವರು ಬೀರಬಲನ ಹೇಳಿಕೆಯಂತೆ ಆಚರಿಸುತ್ತಿರಲು ಅಕಸ್ಮಾತ್ತಾಗಿ ಬಾದಶಹನು ಪ್ರಚ್ಛನ್ನ ವೇಷದಿಂದ ನಗರ ಸಂಚಾರಾರ್ಥವಾಗಿ ಹೊರಟಿರಲು, ವಿಚಿತ್ರ ವೇಪಧಾರಿಗಳಾದ ಆವರ್ತಕರನ್ನು ನೋಡಿ ನೀವು ನುಡಿಯುತ್ತಿರುವ ಕಬ್ದಗಳ ಅರ್ಥವೇನು ಎಂದು ಕೇಳಿದನು ಅದಕ್ಕೆ ಆವರ್ತಕರು " ಹುಜೂರ್ ನಾವು ವರ್ತಕರು ನಗರರಕ್ಷಣೆಯ ಕಾಯ ದಲ್ಲಿ ಅನಭಿಜ್ಞರು ನಮಗೆ ನಗರರಕ್ಷಣೆಯ ಕೆಲಸದಲ್ಲಿ ಕಿಂಚಿತ್ತಾದರೂ ಜ್ಞಾನವಿದ್ದರೆ ನಾವು