ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರವಾದ ಏನೋದ ಕಥೆಗಳು.
೪೫

ತಲೂ ತಾನು ಹೆಚ್ಚು ತಿಂದೆನೆಂಬದನ್ನು ತೋರಿಸಬೇಕೆಂದು ನನ್ನ ಹಿಂದೆ ಚಲ್ಲುತ್ತಿರಬಹುದು” ಎಂದು ಕಲ್ಪನೆಮಾಡಿಕೊಂಡು ಸುಮ್ಮನಿದ್ದಳು.
ಮುಂದೆ ಸ್ವಲ್ಪ ಹೊತ್ತಿನಲ್ಲಿ ಬೀರಬಲನು ಅವರಿಬ್ಬರು ಕುಳಿತುಕೊಂಡ ಅಂತಪುರಕ್ಕೆ ಬಂದನು. ಆಗ ಬಾದಶಹನು ಬೇಗಮನಿಗೆ ಹಾಸ್ಯ ಮಾಡಬೇಕೆಂದು ಯೋಚಿಸಿ ಬೀರಬಲನಿಗೆ ಅನ್ನುತ್ತಾನೆ- "ಬೀರಬಲ ಇವಳು ಎಷ್ಟು ತಿನ್ನಾಸಕಳು ಇದ್ದಾಳೆ ನೋಡಿದಿಯಾ: ? ನಾನು ಇಷ್ಟು ಹೊತ್ತಾದರೂ ಒಂದು ಹಣ್ಣನ್ನು ಸಹ ತಿನ್ನಲಿಲ್ಲ, ಆದರೆ ಇವಳು ಬಹಳ ಹಣ್ಣುಗಳನ್ನು ತಿಂದು ಸಿಪ್ಪೆಯನ್ನೂ ಬೀಜಗಳನ್ನೂ ರಾಶಿರಾಶಿಯಾಗಿ ಹಾಕಿಬಿಟ್ಟಿದ್ದಾಳೆ ” ಎಂದು ಪರಿಹಾಸಮಾಡಿದನು. ಅದಕ್ಕೆ ಸಮರ್ಪಕವಾದ ಉತ್ತರವನ್ನು ಕೊಡಲಸಮರ್ಥಳಾಗಿ ರಾಣಿಯು ಮುಖವನ್ನು ತಗ್ಗಿಸಿಕೊಂಡು ಕುಳಿತುಬಿಟ್ಟಳು, ಬೀರಬಲನು ಬೇಗಮ್ಮನ ದುರ್ದೆಶೆಯನ್ನು ಕಂಡು ಅವಳ ಪಕ್ಷವನ್ನು ವಹಿಸಿ, ಬಾದಶಹನಿಗೆ ಅನ್ನುತ್ತಾನೆ; “ ಪೃಥ್ವಯೊಡೆಯನೇ! ! ರಾಜಿನಿಯವರು ಬಹುತಿನ್ನಾಸಕರಿದ್ದಾರೆಂಬ ಸಂಗತಿಯು ಸ್ಪಷ್ಟವಾಗಿ ಕಂಡುಬರುತ್ತದೆ, ಆದರೆ ತಾವು ಅವರಕಿಂತಲೂ ಅಧಿಕವಾದ ತಿನ್ನಾಸಕರಿದ್ದಂತೆ ಕಂಡುಬರುತ್ತದೆ; ಅದು ಹ್ಯಾಗಂದರೆ, ರಾಜಿನಿಯವರು ಹಣ್ಣುಗಳನ್ನು ತಿಂದುತಿಂದು ಬೀಜಗಳನ್ನೂ ಸಿಪ್ಪೆಯನ್ನೂ ಚೆಲ್ಲಿಕೊಟ್ಟಿರುವರು ತಾವು ಅವುಗಳನ್ನು ಸಹಾ ತಿಂದುಬಿಟ್ಟಿದ್ದೀರಿ, ಇದರಮೇಲಿಂದ ಯಾರುಹೆಚ್ಚು ಬುಭುಕ್ಷಿತರಿರುವರೆಂಬದು ಸಹಜವೇ ವ್ಯಕ್ತವಾಗುತ್ತದೆ.
ಬೀರಬಲನ ಸಮಯೋಚಿತ ಉತ್ತರವನ್ನು ಕೇಳಿ ಬಾದಶಹನು ನಿರುತ್ತರನಾಗಿ ಕುಳಿತುಕೊಂಡನು, ಬೇಗಮ್ಮಳಿಗೆ ಪರಮಾನಂದವಾಯಿತು.

-(೧೬ ಕೈಯೊಳಗಿನ ಕಂಕಗಳೂ ಗಡ್ಡದೊಳ ಕೂದಲುಗಳು.)-

ಒಂದು ದಿವಸ ಬಾದಶಹನ ಮತ್ತು ಬೀರಬಲನೂ ಕೂಡಿಕೊಂಡು ಏಕಾಂತಗೃಹದಲ್ಲಿ ಮಾತನಾಡುತ್ತ ಕುಳಿತುಕೊಂಡಿದ್ದರು. ಆ ಸಮಯದಲ್ಲಿ ಬಾದಶಹನು ಅನ್ನುತ್ತಾನೆ, ನೀನು ಬಹಳಮಾಡಿ ನಿನ್ನ ಪತ್ನಿಯ ಹಸ್ತಸ್ಪರ್ಶವನ್ನು ಪ್ರತಿದಿನದಲ್ಲಿ ಎಷ್ಟೋ ಸಾರೆ ಮಾಡುತ್ತಿರಬಹುದು ಅಂದಮೇಲೆ ಅವಳ ಕೈಯಲ್ಲಿದ್ದ ಕಂಕಣಗಳು ಎಷ್ಟಿರುತ್ತವೆಂಬ ಸಂಗತಿಯು ನಿನಗೆ ಗೊತ್ತು ಇರಬಹುದು; ಇದ್ದರೆ ಅವುಗಳ ಸಂಖ್ಯೆಯನ್ನು ತಿಳಿಸು," ಎಂದು ಕೇಳಿದನು.
ಬಾದಶಹನ ಪ್ರಶ್ನೆಯನ್ನು ಕೇಳಿ ಬೀರಬಲನು ವಿಚಾರದಲ್ಲಿ ಬಿದ್ದನು