ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರವಾದ ವಿನೋದ ಕಥೆಗಳು.
೫೧

ಮನೆಯಲ್ಲಿಯೇ ಇದ್ದೆನು, ಆಮೇಲೆ ಪ್ರಚ್ಛನ್ನ ವೇಷಧಾರಿಯಾಗಿ ಹಗಲು ರಾತ್ರಿಗಳಲ್ಲಿ ಪಟ್ಟಣದೊಳಗೆ ಸಂಚರಿಸಹತ್ತಿದೆನು ರಾತ್ರಿಯಲ್ಲಿ ನಾನುಕಳ್ಳರನ್ನು ಹಿಡಿಯುವಕೆಲಸವನ್ನು ಕೈಕೊಂಡಿದ್ದೆನು. ಇಷ್ಟಾದರೂ ನನ್ನನ್ನು ಯಾರೂ ಗುರುತಿಸಲಿಲ್ಲ ಆಮೇಲೆ ಈ ವೇಷದಲ್ಲಿ ನನ್ನನ್ನು ಯಾರೂ ಗುರುತಿಸಲಾರರೆಂದು ನಿಶ್ಚಯವಾದಮೇಲೆ ಪ್ರತಿದಿವಸ ಸಭೆಗೆ ಬಂದು ಅಲ್ಲಿಯ ವರ್ತಮಾನಗಳನ್ನು ತಿಳಿಯಹತ್ತಿದೆನು, ಈಸಭೆಯ ವರ್ತಮಾನವು ತಿಳಿಯೆ ಬರಲಾಗಿ ಈದಿವಸ ಇಲ್ಲಿಗೆ ಪ್ರಾಪ್ತನಾದೆನು.
ನೂತನ ಮಂತ್ರಿಗೆ ಕೊಡಬೇಕೆಂದು ತರಿಸಿಕೊಂಡಿದ್ದ ಉಡುಪುಗಳನ್ನೆಲ್ಲ ಬೀರಬಲನಿಗೇ ಕೊಟ್ಟು ಅವನ ಮೊದಲಿನಕೆಲಸ ನಿಯಮಿಸಿದನು. ಆದರಿಂದ ಎಲ್ಲ ಸಭಿಕರಿಗೂ ನಗರವಾಸಿಗಳಿಗೂ ಅತ್ಯಾನಂದವಾಯಿತು.

-(೧೮) ನಾಲ್ಕುಜನ ವರ್ತಕರೂ ಮತ್ತು ಬಾದಶಹನು.)-

ಗ್ರೀಷ್ಮಕಾಲವು ಆರಂಭವಾಗಿತ್ತು, ಸುಳಿಗಾಳಿಯು ಮೆಲ್ಲಮೆಲ್ಲಗೇ ಸುಳಿದಾಡುತ್ತಿತ್ತು, ಋತುಮಾನಕ್ಕನುಸರಿಸಿ ತೆಳ್ಳಗಿನ ವಸ್ತ್ರಗಳನ್ನು ಹೊದ್ದುಕೊಂಡು ಬಾದಶಹನೂ ಬೀರಲನೂ ಉದ್ಯಾನವನದಲ್ಲಿ ಸಂಚರಿಸುತ್ತಿದ್ದರು. ಆಗ ಬಾದಶಹನು ಬೀರಬಲನಿಗೆ ಕೇಳುತ್ತಾನೆ;- " ಬೀರಬಲ ವರ್ತಕರು ತಾವು ಚತುರತಾಯಿಯ ಮಕ್ಕಳು ” ಎಂದು ಹೇಳಿಕೊಳ್ಳುತ್ತಾರೆ. ಇದು ನಿಜವೇ ?
ಬೀರಬಲ-ನಿಜವು.
ಹೀಗಿದ್ದರೆ ಅದನ್ನು ಸಿದ್ಧಮಾಡಿ ತೋರಿಸು! ಎಂದು ಬಾದಶಹನು ಹೇಳಿದನು. ಆಗ ಬೀರಬಲನು ಪೇಟೆಯೊಳಗಿಂದ ಉದ್ದಿನಕಾಳುಗಳನ್ನು ತರಿಸಿ ನಾಲ್ಕು ಜನ ವರ್ತಕರನ್ನು ಕರೆಯಿಸಿ ಅವರೆದುರಿಗೆ ಆ ಕಾಳುಗಳನ್ನಿಟ್ಟು " ವರ್ತಕರೇ ಈ ಕಾಳಿನ ಹೆಸರನ್ನು ಹೇಳಿರಿ ” ಎಂದು ಅಪ್ಪಣೆಮಾಡಿದನು.
ಆಗ ಚತುರತಾಯಿಯ ಮಕ್ಕಳಾದ ವರ್ತಕರಿಗೆ ವಿಚಾರವು ಬಿತ್ತು, ಈ ಉದ್ದಿನಕಾಳುಗಳನ್ನು ಅರಿಯದವರಾರು ? ಇದರ ಹೆಸರನ್ನು ಹೇಳುವದು ಸುಲಭಸಾಧ್ಯವದೆ; ಹೀಗಿದ್ದರೂ ಇದರ ಹೆಸರನ್ನು ಬಾದಶಹನು ಕೇಳಿ ತಿಳಿದುಕೊಳ್ಳಬೇಕಾದರೆ ಇದರಲ್ಲಿ ಏನೋ ಒಂದು ಗೂಢವಿರಬೇಕು, ಆದ್ದರಿಂದನಾವು ಇದರವಿಷಯದಲ್ಲಿ ಚನ್ನಾಗಿ ವಿಚಾರಮಾಡಿ ಹೇಳಬೇಕು ಎಂದು ಯೋಚಿಸತೊಡಗಿದರು. ಈಪ್ರಕಾರ ವಿಚಾರಮಗ್ನರಾದ ಆ ವರ್ತಕರನ್ನು