ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೮೦
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.


ಆ ವೃಕ್ಷ ರಕ್ಷಕನಿಗೆ ಅಲ್ಲಿಯೇ ಕುಳಿತುಕೊಳ್ಳುವಂತೆ ಅಪ್ಪಣೆಮಾಡಿ ಪ್ರೇಮಳದಾಸನಿಗೆ ಹೋಗು! ಎಂದು ಅಪ್ಪಣೆಕೊಟ್ಟು ಕಳಿಸಿದನು. ಸಾಯಂಕಾಲವಾದ ಮೇಲೆ ಕಾವಲುಕಾರನನ್ನು ಕರೆದು. ಈ ದಿವಸ ನೀನು ಅರ್ಧರಾತ್ರಿಯ ಸುಮಾರಕ್ಕೆ ಕೇಶವದಾಸ ಮತ್ತು ಪ್ರೇಮಳದಾಸ ಇವರಿಬ್ಬರ ಮನೆಗೆ ಹೋಗಿ, "ಕೆಲವು ಶಸ್ತ್ರಧಾರಿಗಳಾದ ಜನರು ಬಂದು ಆಮ್ರಫಲಗಳನ್ನು ಕೊಯ್ಯಹತ್ತಿದ್ದಾರೆ. ಅವರನ್ನು ನನ್ನೊಬ್ಬನಿಂದಲೇ ತಡೆಯುವದು ಅಸಾಧ್ಯವು, ಆದರಿಂದ ನೀವು ಬೇಗನೆ ಬರ್ರಿ" ಎಂದು ಹೇಳಿ ನಿನ್ನ ಮನೆಗೆ ಹೊರಟು ಹೋಗು ! ನಾನು ಹೇಳಿದ್ದರಲ್ಲಿ ಸ್ವಲ್ಪಾದರೂ ಹೆಚ್ಚು ಕಡಿಮೆ ಮಾಡಬೇಡ. ನಿನ್ನ ಸಂಗಡ ನಮ್ಮ ಕಡೆಯ ಇಬ್ಬರು ಸಿಪಾಯರನ್ನು ಕಳುಹಿಸಿಕೊಡುತ್ತೇನೆ.

ಈ ಪ್ರಕಾರ ಹೇಳಿ ಆ ಕಾವಲುಗಾರನನ್ನು ಸಿಪಾಯರ ಸ್ವಾಧೀನ ಮಾಡಿದನು. ಆ ಸಿಪಾಯಿಗಳಿಗೆ ಆಜ್ಞಾಪಿಸಿದ್ದೇನಂದರೆ - "ನೀವು ಪ್ರತಿಯೊಬ್ಬರು ಅವರಿಬ್ಬರ ದ್ವಾರದಲ್ಲಿ ಕುಳಿತುಕೊಂಡು ಅಲ್ಲಿ ಯಾವ ಯಾವ ಮಾತುಗಳು ನಡೆಯುವವು ಎಂಬದನ್ನು ಕೇಳಿಕೊಂಡು, ನನಗೆ ಬಂದು ತಿಳಿಸಬೇಕು" ಎಂದು ಹೇಳಿ ಕಳುಹಿಸಿ ಕೊಟ್ಟನು.

ರಾತ್ರಿಯಾದ ಕೂಡಲೆ ಆ ಮೂವರೂ ಮೊದಲು ಕೇಶವದಾಸನ ಮನೆಗೆ ಹೋದರು. ಆಗ ಕೇಶವದಾಸನು ಮನೆಯಲ್ಲಿ ಇದ್ದಿಲ್ಲ ಅದರಿಂದ ಕಾವಲುಗಾರನು ಕೇಶವದಾಸನ ಪತ್ನಿಗೆ ಹೇಳಿದ್ದೇನಂದರೆ - "ನಿಮ್ಮ ಯಜಮಾನರು ಮನೆಗೆ ಬಂದಕೂಡಲೆ ತೋಟಕ್ಕೆ ಕಳುಹಿಸಿಕೊಡಿರಿ. ಯಾಕಂದರೆ:- ಕಸ್ತ್ರಧಾರಿಗಳಾದ ಕೆಲವು ಜನರು ಬಂದು ಹಣ್ಣುಗಳನ್ನು ಕೊಯ್ದುಕೊಂಡು ಹೋಗಹತ್ತಿದ್ದಾರೆ" ಎಂದು ತಿಳುಹಿಸಿ ಪ್ರೇಮಳದಾಸನ ಮನೆಗೆ ಹೋದನು. ಅಲ್ಲಿಯೂ ಎರಡನೇ ಸಿಪಾಯಿಯು ಅಡಗಿಕೊಂಡು ಕುಳಿತನು.

ಕಾವಲುಗಾರನು ಪ್ರೇಮಳದಾಸನ ಮನೆಗೆ ಹೋಗಿ ಅಲ್ಲಿಯೇ ಮೊದಲಿನಂತೆ ಹೇಳಿ ಮನೆಗೆ ಹೊರಟುಹೋದನು. ಅಲ್ಲಿಯು ಎರಡನೆ ಸಿವಾಯಿಯು ಅಡಗಿಕೊಂಡು ಕುಳಿತನು.

ಮುಂದೆ ಸ್ವಲ್ಪ ಹೊತ್ತಾದಮೇಲೆ ಕೇಶವದಾಸನು ಮನೆಗೆ ಬಂದನು. ಅವನ ಸ್ತ್ರೀಯು ಕಾವಲುಗಾರನು ಹೇಳಿದಸಂಗತಿಯನ್ನೆಲ್ಲ ತಿಳಿಸಿದಳು. ಆಗ ಕೇಶವದಾಸನು ಅನ್ನುತ್ತಾನೆ; "ಮಾವಿನಗಿಡಗಳು ನನ್ನವಲ್ಲ, ಬೇಕಾದವರು ಹಂಣುಗಳನ್ನು ಕೊಯಿದುಕೊಂಡು ಹೋಗಲಿ ! ನಾನಂತೂ ಪ್ರೇಮಳದಾಸನ ಮೇಲೆ ಸರಕಾರದಲ್ಲಿ ಫಿರ್ಯಾದಿಯನ್ನು ಮಾಡಿದ್ದೇನೆ, ಅದರಲ್ಲಿ ಯೋಗ್ಯನಿ