ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,
೧೦೩


ಭೋಜನ ಸಮಯವು ಸಮೀಪಿಸಿತು ಸೇವಕರು ಸುವರ್ಣಪಾತ್ರೆಗಳಲ್ಲಿ ಭೋಜನವನ್ನು ಸಿದ್ಧಪಡಿಸಿ ತಂದಿಟ್ಟರು. ಆಗ ಪಾತ್ರೆಯಲ್ಲಿ ಅಕಸ್ಮಾತ್ತಾಗಿ ಒಂದು ಹಲ್ಲಿಯು ಬಿತ್ತು ಅದರಿಂದ ಅನ್ನವೆಲ್ಲ ಅಪವಿತ್ರವಾಯಿತು.ಆಗ ಬಾದಶಹನ ಮನಸ್ಸಿನಲ್ಲಿ "ಆ ಮನುಷ್ಯನ ಮುಖದರ್ಶನ ದೋಪದಿಂದಲೇ ಈ ಪ್ರಮಾದವುಂಟಾಯಿತು ಇಂಥ ಮನುಷ್ಯನು ಈ ಪಟ್ಟಣದಲ್ಲಿರುವದು ಯಾಕೆ ಈ ಪೃಥ್ವಿಯಲ್ಲೇ ಇರಬಾರದು :” ಎಂದು ನಿಶ್ಚಯಿಸಿ ಅವನನ್ನು ಗಲ್ಲಿಗೆ ಹಾಕಬೇಕೆಂದು ಅಪ್ಪಣೆಮಾಡಿದನು.
ರಾಜಾಜ್ಞೆಯಂತೆ ಕರ್ಮಚಾರಿಗಳು ಆ ದುರ್ದೈವಿಯನ್ನು ವಧಾಸ್ಥಾನಕ್ಕೆ ತೆಗೆದುಕೊಂಡು ಹೋದರು. ಈ ವಾರ್ತೆಯು ಬೀರಬಲನ ಕರ್ಣದ ಮೇಲೆ ಬಿತ್ತು. ನಿರಪರಾಧಿಯಾದ ಮನುಷ್ಯನನ್ನು ವ್ಯರ್ಥ ಮರಣಕ್ಕೆ ಗುರಿಯಾಗಗೊಡುವುದು ಅನುಚಿತವಾದದ್ದು ! ಎಂದು ಯೋಚಿಸಿ ಆ ಮನುಷ್ಯನ ಹತ್ತಿರ ಬಂದು: “ನೀನು ಧೈರ್ಯಗುಂದಬೇಡ ! ನಾನು ನಿನ್ನ ಜೀವವನ್ನು ಉಳಿಸಿಕೊಳ್ಳುವೆನು ನಾನು ಹೇಳಿದಂತೆ ಕೇಳು. ನಿನ್ನನ್ನು ವಧಸ್ಥಂಭಕ್ಖೇರಿಸುವ ಮೊದಲು ಕರ್ಮಚಾರಿಗಳು “ನಿನ್ನ ಅಂತಿಮ ಇಚ್ಛೆಯೇನಿರುವದೆಂದು ಕೇಳುವರು ಆಗ ನೀನು "ನನ್ನ ಮುಖಾವಲೋಕನದಿಂದ ಜನರಿಗೆ ಒಂದು ದಿವಸ ಉಪವಾಸವು ಒದಗುತ್ತದೆ. ಆದರೆ ಬಾದಶಹನ ಮುಖಾವಲೋಕನ ಮಾಡಿದ ಮನುಷ್ಯನಿಗೆ ಮರಣವೇ ಪ್ರಾಪ್ತವಾಗುತ್ತದೆ. ಹ್ಯಾಗಂದರೆ ಈ ದಿವಸ ಪ್ರಾತಃಕಾಲದಲ್ಲಿ ಬಾದಶಹನು ನನ್ನ ಮುಖಾವಲೋಕನ ಮಾಡಿದಂತೆ ನಾನಾದರೂ ಮೊಟ್ಟಮೊದಲು ಬಾದಶಹನ ಮುಖವನ್ನೇ ಅವಲೋಕಿಸಿದೆನು.ಅದರಿಂದ ಈ ದಿವಸ ನನಗೆ ಮರಣವು ಪ್ರಾಪ್ತವಾಯಿತು. ಅದರಿಂದ ಪ್ರಾತಃಕಾಲದಲ್ಲಿ ಯಾರೂ ಬಾದಶಹನ ಮುಖವನ್ನು ನೋಡಬೇಡಿರಿ, ಎಂಬದಾಗಿ ಹೇಳಿಬಿಡು., ಎಂದು ಕಲಿಸಿಕೊಟ್ಟು, ಅಲ್ಲಿಂದು ಹೊರಟು ಹೋದನು.
ಯೋಗ್ಯ ಸಮಯದಲ್ಲಿ ಕರ್ಮಚಾರಿಗಳು ಪ್ರಶ್ನೆ ಮಾಡಿದ ಕೂಡಲೆ, ಬೀರಬಲನ ತೀಕ್ಷಾನು ಸಾರವಾಗಿ ಆ ಮನುಷ್ಯನು ಕರ್ಮಚಾರಿಗಳ ಮುಂದೆ ಹೇಳಿದನು. ಆಗ ಕರ್ಮಚಾರಿಗಳು ಈ ಸಂಗತಿಯನ್ನು ಬಾದಶಹನಿಗೆ ತಿಳಿಸಿದರು.ಆಗ ಬಾದಶಹನ ಮನಸಿಗೆ ಬಹುವಿಷಾದವಾಯಿತು ಕೂಡಲೆ ಆ ಮನುಷ್ಯನನ್ನು ತನ್ನ ಬಳಿಗೆ ಕರೆಯಿಸಿಕೊಂಡು ಕೆಲವು ದ್ರವ್ಯವನ್ನು ಪಾರಿತೋಷಕವಾಗಿ ಕೊಟ್ಟು ಕಳುಹಿಸಿದನು.