ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೧೦೪
ಅಕಬರ ಬೀರಬಲ ಚಾತುರ್ಯವಾದ ವಿನೋದ ಕಥೆಗಳು,


-(೫೧. ಚತುರ ಮತ್ತು ಮೂರ್ಖ.)-

ಒಂದು ದಿನ ಬಾದಕಹನು ರಾಜಕಾರ್ಯ ಸಮಾಪ್ತಿಯ ನಂತರ ಅನ್ನುತ್ತಾನೆ, "ಬೀರಬಲ ಈ ಸಂಸಾರದಲ್ಲಿ ಚತುರರು ಯಾರು ಮೂರ್ಖರು ಯಾರು," ಎಂದು ಪ್ರಶ್ನೆ ಮಾಡಿದನು. ಈ ಪ್ರಶ್ನೆಗೆ ಬೀರಬಲನು ಬಹಳ ಹೊತ್ತು ಯೋಚಿಸಬೇಕಾಗಲಿಲ್ಲ ಆ ಕೂಡಲೆ, "ರಾಜಾಧಿರಾಜ ! ಯಾವನ ಹಂಚಿಕೆಯು ಸಿದ್ದಿಗೆ ಹೋಗಿ ಫಲಪ್ರದವಾಗುವದೋ ಅವನು ಚತುರನು ಯಾವನ ಹಂಚಿಕೆಯು ನಿಷ್ಪಲವಾಗುವದೋ ಅವನು ಮೂರ್ಖನು” ಎಂದುತ್ತರವಿತ್ತನು.
ಈ ಉತ್ತರವನ್ನು ಕೇಳಿ, ಬಾದಶಹನಿಗೂ ಸಭಾಸದರಿಗೂ ಅತ್ಯಾನಂದವಾಯಿತು.

-(೫೨. ಯಾವನು ಸುಖಿಯಾಗಿರುವನು.)-

ಒಂದು ದಿವಸ ನೆರೆದ ಸಭೆಯಲ್ಲಿ ಬಾದಶಹನು, "ಬೀರಬಲ! ಈ ಸಂಸಾರದಲ್ಲಿ ಸುಖಿಯಾಗಿರುವವನು ಯಾವನು ;” ಎಂದು ಪ್ರಶ್ನೆ ಮಾಡಿದನು. ಆ ಕೂಡಲೆ ಬೀರಬಲನು, "ಮನುಷ್ಯನ ಮರಣದ ಮೇಲೆ ಸುಖದುಃಖಗಳ ನಿರ್ಣಯವಾಗುತ್ತದೆ” ಎಂದನು. ಅದು ಹ್ಯಾಗೆ ಎಂದು ಬಾದಶಹನು ಪ್ರಶ್ನೆ ಮಾಡಿದನು ಆಗ ಬೀರಬಲನು, ಈ ದಿವಸ ಯಾವನು ಸುಖಿಯಾಗಿರುವನೋ ಅವನ ಮೇಲೆ ನಾಳೆಗೆ ಯಾವ ವಿಪತ್ತಿಯು ಬಂದೊದಗುವದೆಂಬದರ ನಿಯಮವಿಲ್ಲ ಅಂದಮೇಲೆ ಸುಖಯಾಗಿರುವನೆಂದು ಹ್ಯಾಗೆ ತಿಳಿದು ಕೊಳ್ಳಬೇಕು ಎಷ್ಟೋಜನರು ಬಹಿರಂಗದಲ್ಲಿ ಸುಂಗಲಾಗಿದ್ದಂತೆ ಕಂಡು ಬರುವದು ಆದರೆ ಅವರಿಗೆ ಅಂತರಂಗದಲ್ಲಿ ಯಾವ ದುಃಖವಿರುವದೆಂಬದು ತಿಳಿ ಯಲಸಾಧ್ಯವು ಆದ್ದರಿಂದ ಮನುಷ್ಯನಿಗೆ ಸುಖಪೂರ್ವಕ ಮರಣ ಒದಗಿದರೆ ಅವನು ಸುಖಿಯಾಗಿದ್ದನೆಂದು ಹೇಳಬಹುದು.

-(೫೩, ಸ್ವರ್ಗ ಮತ್ತು ನರಕ.)-

ಒಂದು ಸಾರೆ ಬಾದಶಹನು ಬೀರಬಲನನ್ನು ಕುರಿತು;- ಸ್ವರ್ಗವಾಸ ವು ಯಾರಿಗೆ ಲಭಿಸುತ್ತದೆ? ಮತ್ತು ನರಕವಾಸವು ಯಾರಿಗುಂಟಾಗುತ್ತದೆ ಎಂದು ಪ್ರಶ್ನೆ ಮಾಡಿದನು. ಅದಕ್ಕೆ ಬೀರಬಲನು:- "ಖಾವಿಂದ! ಸತ್ತು ಹೋದ ಮೇಲೆ ಯಾವನಿಗೆ ಜನರು ಉತ್ತಮನೆಂದು ಹೊಗಳುವರೋ ಅವನಿಗೆ ಸ್ವರ್ಗವಾಸವು ಲಭಿಸುತ್ತದೆ, ಯಾವನನ್ನು ನಿಂದಿಸುತ್ತಿರುವರೋ ಅವನಿಗೆ ನರಕವಾಸವುಂಟಾಗುತ್ತದೆ ಎಂದು ತಿಳಿಯಬೇಕು" ಎಂದುತ್ತರ ಕೊಟ್ಟನು. ಈ ಉತ್ತರದಿಂದ ಬಾದಶಹನಿಗೆ ಸಂತೋಷವಾಯಿತು.