ತಾಮ್ರದ ನಾಣ್ಯಗಳನ್ನು ಹಾಕಿದ್ದಳೋ ಎಂಬ ಸಂಗತಿಯನ್ನು ನಾನು
ಅರಿತವನಲ್ಲ ” ಎಂದು ಹೇಳಿದನು.
ಕಾಜಿಯು ಹೇಳಿದ ಉತ್ತರದಿಂದ ಬಾದಶಹನ ಮನಸ್ಸಿನಲ್ಲಿ ಸ್ವಲ್ಪ ಸಂದೇಹವುಂಟಾಯಿತು ಆಗ ಕಾಜಿಯನ್ನು ಹಿಂದಕ್ಕೆ ಕಳುಹಿಸಿ ಆ ಸ್ತ್ರೀಯಳನ್ನು ಕುರಿತು, “ ಬಾಯೀ ನೀನು ಏನೂ ಚಿಂತೆಮಾಡಬೇಡ ನಿನ್ನ ಹಣ ಕಿಂಚಿತ್ಕಾಲದಲ್ಲಿ ಮರಳಿ ಬರುವ ಹಾಗೆ ಮಾಡುತ್ತೇನೆ” ಎಂದು ಸಮಾಧಾನ ಪಡಿಸಿ ಕಳುಹಿಕೊಟ್ಟನು.
ಈ ಸಂಗತಿಯು ವರ್ತಿಸಿದ ನಾಲ್ಕಾರು ದಿವಸಗಳ ಮೇಲೆ ಬಾದಶಹನು ಶಯನ ಮಾಡುವ ಪೂರ್ವದಲ್ಲಿ ತನ್ನ ಹಾಸಿಗೆಯನ್ನು ಕತ್ತರಿಯಿಂದ ಸ್ವಲ್ಪ ಕತ್ತರಿಸಿ ಸುಮ್ಮನೆ ಮಲಗಿಬಿಟ್ಟನು ಮರುದಿವಸ ಬಾದಶಹನು ಎದ್ದು ಹೋದ ಮೇಲೆ ಸರಿಚಾರಕನು ಹಾಸಿಗೆಯನ್ನು ತೆಗೆಯುವದಕ್ಕೆ ಬಂದಾಗ ಚಾದರವು ಹರಿದದ್ದು ಅವನದೃಷ್ಟಿಗೆ ಬಿತ್ತು ಆ ಕೂಡಲೆ ಅವನು ಗಾಬರಿಯಾಗಿ,ಅನ್ಯಪರಿಚಾರಕರಿಗೆ ತೋರಿಸಿದನು. ಆಗ ಅವರು ಇದರ ನಿಜ ಸಂಗತಿಯೇನೆಂದು ವಿಚಾರಿಸಲು ತನಗೆಯಾವ ಸಂಗತಿಯೂ ಗೊತ್ತು ಇಲ್ಲವೆಂದು ಹೇಳಿದನು. ಆಗ ಅವರೆಲ್ಲರೂ "ಈ ಸಂಗತಿಯು ಬಾದಶಹನಿಗೆ ವಿದಿತವಾದರೆ ಯಾವ ತೀಕ್ಷೆಯನ್ನು ವಿಧಿಸುವನೋ ” ಎಂದು ಚಿಂತಾಕ್ರಾಂತರಾದರು. ಆಗ ಅವರಲ್ಲಿದ್ದ ಒಬ್ಬ ವೃದ್ಧನು "ಹೆದರಬೇಡಿರಿ ಈ ನಗರದಲ್ಲಿ ಒಬ್ಬ ರಫ್ತುಗಾರ ನಿರುವನು ಅವನಿಗೆ ಈ ರಫ್ತುಮಾಡುವ ಕೆಲಸವು ಚನ್ನಾಗಿ ಗೊತ್ತಿದೆ ಅದರಿಂದ ಅವನನ್ನು ಕರೆಯಿಸಿ ಚಾದರವು ಕತ್ತರಿಸಿದಲ್ಲಿ ರಫ್ತುಮಾಡಿಸಿಬಿಡಿರಿ; ಅಂದರೆ ಮೊದಲಿನಂತೆಯೇ ಆಗುತ್ತದೆ ” ಎಂದು ಹೇಳಲು ಎಲ್ಲ
ರೂ ಸಮಾಧಾನವನ್ನು ಹೊಂದಿ ರಪುಗಾರನಿಂದ ರಪುಮಾಡಿಸಿ ಬಿಟ್ಟರು.ಕತ್ತರಿಸಿದ ಸ್ಥಳವು ಇಂಥಲ್ಲೇ ಇರುವದೆಂದು ತಿಳಿಯದೆ ಹೋಯಿತು ಸರಿ ಚಾರಕರಿಗೆಲ್ಲರಿಗೂ ಅತ್ಯಾನಂದವಾಯಿತು ರಾತ್ರಿಯಲ್ಲಿ ಬಾದಶಹನು ಮಲಗಿಕೊಳ್ಳುವದಕ್ಕೆ ಬಂದು ಮೇಲು ಹಾಸಿಗೆಯನ್ನು ನೋಡಲು ಅದು ಮೊದಲಿನಂತೆಯೇ ಇತ್ತು ಕತ್ತರಿಸಿದ ಸ್ಥಳವು ಸಹ ಗೊತ್ತಾಗದೆ ಹೋಯಿತು. ಆಗ ಅವನು ಪರಿಚಾರಕರನ್ನು ಕರೆದು " ನಿನ್ನೆ ಈ ಮೇಲು ಹಾಸಿಗೆಯು
ಕತ್ತರಿಸಲ್ಪಟ್ಟಿತು. ಈಗ ಅದು ಕಾಣುವದಿಲ್ಲವಲ್ಲಾ? ” ಎಂದು ಕೇಳಿದನು. ಆದಕ್ಕೆ ಏನೊಂದುತ್ತರವನ್ನು ಸಹಾಕೊಡದೆ ಗಾಬರಿಯಾಗಿ ನಿಂತುಕೊಂಡನು. ಆಗ ಬಾದಶಹನು “ ಗಾಬರಿಯಾಗಬೇಡ ! ನಿನ್ನ ಅಪರಾಧವನ್ನು ಕ್ಷಮಿಸುತ್ತೇನೆ. ಸತ್ಯವಾಗಿ ಹೇಳು” ಎಂದನು ಪರಿಚಾರಕನು " ದೃಷ್ಟಿ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರವಾದ ವಿನೋದಕಥೆಗಳು
೨೫೫