ಸ್ತ್ರೀಯು ತನ್ನ ಚೀಲವು ಮೊದಲಿನಂತೆ ಇದ್ದದ್ದನ್ನು ಕಂಡು ಪ್ರಸನ್ನಳಾದಳು ಮನೆಗೆ ಹೋಗಿ ಚೀಲವನ್ನು ಬಿಚ್ಚಿ ನೋಡಲು ರೂಪಾಯಿಗಳು ಇದ್ದಿಲ್ಲ ತಾಮ್ರದ ನಾಣ್ಯಗಳೇ ಇದ್ದವು ಅದನ್ನು ನೋಡಿ ಅವಳು ಗಾಬರಿಯಾಗಿ ಕಾಜಿಯ ಬಳಿಗೆ ಬಂದು ಎಲ್ಲ ವೃತ್ತಾಂತವನ್ನು ತಿಳಸಿದಳು ಆಗ ಕಾಜಿಯು- ನೀನು ಚೀಲದಲ್ಲಿ ರೂಪಾಯಿಗಳನ್ನು ಹಾಕಿದ್ದೀಯೋ ಅಥವಾ ತಾಮ್ರದ ನಾಣ್ಯಗಳನ್ನು ಹಾಕಿದ್ದೀಯೋ ಎಂಬದನ್ನು ನಾನು ಅರಿತವನಲ್ಲ ನೀನು ಇಟ್ಟ ಚೀಲವನ್ನು ಕೈಯಿಂದ ಸಹಾ ಮುಟ್ಟಿಲ್ಲ; ಅದು ಮೊದಲು ಹ್ಯಾಗೆ ಇತ್ತೋ ಹಾಗೆಯೇ ಅದನ್ನು ಜೀವಾನಮಾಡಿ ಕೊಟ್ಟಿದ್ದೇನೆ ಹೆಚ್ಚಿನ
ಸಂಗತಿಯನ್ನು ಅರಿತವನಲ್ಲ;” ಎಂದನು.
ಕಾಜಿಯ ಮಾತುಗಳನ್ನು ಕೇಳಿ ಅವಳು ಬಹು ಚಿಂತಾಕ್ರಾಂತಳಾಗಿ" ಕಾಜೀ ಸಾಹೇಬ, ನಾನು ನನ್ನ ಕೈಯಿಂದಲೇ ಎಂಟು ನೂರು ರೂಪಾಯಿಗಳನ್ನು ಆ ಚೀಲದಲ್ಲಿ ಹಾಕಿದ್ದೆನು ನಾನು ಕೇವಲ ದರಿದ್ರಳು ನನ್ನ ಜೀವನವು ಆ ದ್ರವ್ಯದಿಂದಲೇ ಸಾಗುತ್ತಿತ್ತು ಇನ್ನು ನಾನು ಉಪಜೀವಿಸುವ ಬಗೆ ಹ್ಯಾಗೆ ! ಎಲ್ಲಾ ಹಣವನ್ನು ಕೊಡದಿದ್ದರೂ ಚಿಂತೆ ಇಲ್ಲ ಅರ್ಧಹಣವ
ನಾದರೂ ದಯಪಾಲಿಸಿರಿ ತಾವು ಕೇವಲ ಪ್ರಾಮಾಣಿಕರೆಂದು ನಂಬಿ ನನ್ನ ಯಾವತ್ತು ಆ ಸ್ತಿಯನ್ನು ಮಾಡಿ ಎಂಟು ನೂರು ರೂಪಾಯಿಗಳನ್ನು ಈ ಚೀಲದಲ್ಲಿ ತುಂಬಿ, ಉಳಿದ ರೂಪಾಯಿಗಳನ್ನು ತೆಗೆದುಕೊಂಡು ಚೀಲವನ್ನು ನಿಮ್ಮ ವಶಕ್ಕೆ ಕೊಟ್ಟು ಯಾತ್ರಿಗೆ ಹೋಗಲಿಲ್ಲವೇ ! ತಮ್ಮಂಥವರು
ಈ ಪ್ರಕಾರ ವಿಶ್ವಾಸಘಾತಕ ತನವನ್ನು ಮಾಡಬಾರದು! ” ಅವಳ ಮಾತುಗಳನ್ನು ಕೇಳಿ ಕಾಜಿಯು ಬಹಳೇ ಕುಪಿತನಾಗಿ “ ಸುಮ್ಮನೆ ಆರೋಪವನು ಹೊರಿಸಬೇಡ ಹೊರಟು ಹೋಗು ! ಇಲ್ಲದಿದ್ದರೆ ಸೇವಕರ ಕಡೆಯಿಂದ ದಬ್ಬಿಸಬೇಕಾದೀತು ? ” ಎಂದು ಬೆದರಿಸಿದನು.
{[gap}}"ಆ ಸ್ತ್ರೀಯು ನಿರಾಸೆಯಿಂದ ಬಾದಶಹನ ಬಳಿಗೆ ಹೋಗಿ ತನ್ನ ಆ ದ್ಯೋಪಾಂತ ವೃತ್ತಾಂತವನ್ನು ಕಥನ ಮಾಡಿದಳು ಆಗ ಬಾದಶಹನು ಕಾಜಿಯನ್ನು ಕರೆಯಕಳುಹಿ ಅವನು ಬಂದಮೇಲೆ "ಈ ಸ್ತ್ರೀಯಳು ನಿನ್ನ ಬಳಿಯಲ್ಲಿಟ್ಟ ಹಣದ ಚೀಲದ ವೃತ್ತಾಂತವೇನೂ ” ಎಂದು ಪ್ರಶ್ನೆ ಮಾಡಿದನು ಈ ಮಾತಿಗೆ ಕಾಜಿಯು "ಈಗ ಐದಾರು ವರುಷಗಳ ಹಿಂದೆ ಈ ಸ್ತ್ರೀ ಯು ನನ್ನ ಬಳಿಯಲ್ಲಿ ಒಂದು ಚೀಲವನ್ನು ಇಟ್ಟದ್ದು ನಿಜವು ಅವಳು ಹ್ಯಾಗೆ ಇಟ್ಟಿದ್ದಳೋ ಹಾಗೆಯೇ ಅದನ್ನು ಅವಳು ಮರಳಿಬಂದ ಮೇಲೆ ಒಪ್ಪಿಸಿ
ಬಿಟ್ಟಿದ್ದೇನೆ. ಅದರಲ್ಲಿ ಇವಳು ರೂಪಾಯಿಗಳನ್ನು ಇಟ್ಟಿದ್ದಳೋ, ಅಥವಾ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೫
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೨೫೪
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.