ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೫೩

- (೧೪೮. ಅಪ್ರಾಮಾಣಿಕನಾದ ಕಾಜಿಯು.) -

ದಿಲ್ಲಿಯಲ್ಲಿ ಫಾತಿಮಾ ಬೀಬೀ ನಾಮಕಳಾದ ಓರ್ವ ಮುಸಲ್ಮಾನ ಜಾತಿಯ ಸ್ತ್ರೀಯಳಿದ್ದಳು ಅವಳ ಪತಿಯು ಮರಣಹೊಂದಿದ್ದನು ಸಂತಾನವೂ ಇದ್ದಿಲ್ಲ ಅವಳು ಮಕ್ಕಾಯಾತ್ರೆಯನ್ನು ಮಾಡಿ ಬರಬೇಕೆಂಬ ಕುತೂಹಲದಿಂದ ತನ್ನಲ್ಲಿದ್ದ ವಸ್ತು ಒಡವೆಗಳನ್ನೆಲ್ಲ ಮಾರಿ ಒಂದು ಸಾವಿರ ರೂಪಾ ಯಿಗಳನ್ನು ಕೂಡಿಸಿ ಹಾದಿಯಖರ್ಚಿಗೆ ಎರಡು ನೂರುರೂಪಾಯಿಗಳನ್ನು ಇಟ್ಟುಕೊಂಡು ಉಳಿದ ಎಂಟುನೂರು ರೂಪಾಯಿಗಳನ್ನು ಒಂದು ಚೀಲದಲ್ಲಿ ಹಾಕಿ ಅದರ ಬಾಯಿಯನ್ನು ಹೊಲಿದು, ಮೇಲೆ ಅರಗಿನ ಮುದ್ರೆಯನ್ನು ಮಾಡಿ ತನ್ನ ನೆರೆಯವನಾದ ಒಬ್ಬ ಕಾಜಿಯ ವಶಕ್ಕೆ ಕೊಟ್ಟು" ಈ ನಗರದಲ್ಲಿ ನಿಮ್ಮಂಥ ಪ್ರಮಾಣಿಕರು ಇಲ್ಲ; ನಾನು ಮಕ್ಕಾಯಾತ್ರೆ ಯ ಸಲುವಾಗಿ ಹೊರಟಿದ್ದೇನೆ ನನ್ನ ಬಳಿಯಲ್ಲಿದ್ದ ಹಣವನ್ನು ಸಂಗಡ ತಗೆದುಕೊಂಡು ಹೋಬೇಕೆಂದರೆ ದಾರಿಯಲ್ಲಿ ಚೋರೋಪದವು ಬಹಳ ನಾನು ಬರುವವರೆಗೆ ಈ ಎಂಟುನೂರು ರೂಪಾಯಿಗಳುಳ್ಳ ಚೀಲವನ್ನು ನಿಮ್ಮ ಸ್ವಾಧೀನಕ್ಕೆ ಒಪ್ಪಿಸುತ್ತೇನೆ ನಾನು ಮರಳಿ ಬಂದರೆ ನನಗೆ ಕೊಡಿರಿ; ಇಲ್ಲವಾದರೆ ಈ ರೂಪಾಯಿಗಳನ್ನು ನಿಮ್ಮ ಮನಸ್ಸಿಗೆ ಸರಿದೋರಿದಹಾಗೆ ವ್ಯವಸ್ಥೆಯನ್ನು ಮಾಡಿರಿ !” ಎಂದು ಹೇಳಿದಳು ಅವಳ ಮಾತುಗಳನ್ನು ಶ್ರವಣ ಮಾಡಿ ಕಾಜಿಯು ಬೀಬಿಯೇ, ಒಳ್ಳೇದು ನನ್ನ ಸ್ವಾಧೀನಕ್ಕೆ ಕೊಟ್ಟುಹೊರಟುಹೋಗು ! ಏನೂ ಚಿಂತೆ ಮಾಡಬೇಡ ! ” ಎಂದು ಹೇಳಿದನು ಫಾತಿಮಾ ಬೀಬಿಯು ಹಣದ ಚೀಲವನ್ನು ಅವನ ಸ್ವಾಧೀನಪಡಿಸಿ ಯಾತ್ರೆಗೆ ಹೋಟುಹೋದಳು.
ಆ ಸ್ತ್ರೀಯು ಚೀಲದಲ್ಲಿ ರೂಪಾಯಿಗಳನ್ನು ಹಾಕುವಸಮಯದಲ್ಲಿ ಪ್ರತಿಯೊಂದು ರೂಪಾಯಿಯ ಮೇಲೆ ಒಂದೊಂದು ಚಿಕ್ಕದಾಗಿರುವ ಚಿನ್ಹವನ್ನು ಮಾಡಿದ್ದಳು ಅದನ್ನು ಬಹಳ ಲಕ್ಷ್ಯ ಕೊಟ್ಟು ನೋಡಿದರೂ ಸಹ ಕಾಣುವಂತೆ ಇದ್ದಿಲ್ಲ.

ಆ ಸ್ತ್ರೀಯು ಐದು ವರುಷಗಳವರೆಗೆ ಬಾರದಿರಲು, ಕಾಯ ಬುದ್ಧಿಯು ಸ್ವಲ್ಪ ವ್ಯತ್ಯಸ್ತವಾಯಿತು ಆ ಹಣವನ್ನು ಗಿಳಂಕೃತ ಮಾಡಬೇಕೆಂದು ಯೋಚಿಸಿದನು ಕಿಂಚಿತ್ಕಾಲ ಯೋಚನೆ ಮಾಡಿನೋಡಲು, ಒಂದು ಹಂಚಿಕೆಯು ತೋಚಿತು ಅದರಂತೆ ವ್ಯವಸ್ಥೆ ಮಾಡಿ ಬಿಟ್ಟನು ಮರುವರುಷ ಆ ಸ್ತ್ರೀಯು ಯಾತ್ರೆಯಿಂದ ತಿರುಗಿಬಂದು ಹಣದ ಚೀಲವನ್ನು ಕೊಡಿರೆಂದು ಕೇಳಿದಳು ಆ ಕೂಡಲೆ ಆ ಚೀಲವನ್ನು ಅವಳ ಸ್ವಾಧೀನಕ್ಕೆ ಕೊಟ್ಟನು ಆ